ಕನ್ನಡದಲ್ಲಿ ತೀರ್ಪು ನೀಡಿದ ಸಂಕೇಶ್ವರದ ಇಬ್ಬರು ನ್ಯಾಯಾಧೀಶರಿಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ಪ್ರಧಾನ
ಬೆಂಗಳೂರಿನಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ನಡೆದ ಕನ್ನಡದಲ್ಲಿ ತೀರ್ಪು ನೀಡಿದ 100 ಜನ ನ್ಯಾಯಾಧೀಶರು ಹಾಗೂ ವಾದ ಮಂಡಿಸಿದ ವಕೀಲರ ಸನ್ಮಾನ ಕಾರ್ಯಕ್ರಮದ ಸಮಾರಂಭದಲ್ಲಿ ಸಂಕೇಶ್ವರ ನಗರದ ಇಬ್ಬರು ನ್ಯಾಯಾಧೀಶರಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಕೇಶ್ವರ ನಗರದವರಾದ ಉಡುಪಿ ಜೆಎಮ್ಎಫ್ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮಹಾಂತೇಶ ಗಣಪತಿ ಭೂಸಗೋಳ ಹಾಗೂ ನವಲಗುಂದ ಜೆಎಮ್ಎಫ್ ಸಿಯ ಸುನೀಲ ತಳವಾರ ಇವರನ್ನು ಮುಖ್ಯ ಮುಂತ್ರಿ ಬಿ.ಎಸ.ಯಡಿಯೂರಪ್ಪ ಅವರ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ನೀಡಿ ಸನ್ಮಾನಿಸಿದರು.
ನ್ಯಾಯಾಧೀಶರಾದ ಮಾತೇಂಶ ಭೂಸಗೋಳ ಹಾಗೂ ಸುನೀಲ ತಳವಾರ ಇವರನ್ನು ನಗರದ ಕನ್ನಡ ಪರ ಸಂಘಟನೆಗಳು, ಪತ್ರಕರ್ತರ ಸಂಘ, ಸೇರಿದಂತೆ ನಗರದ ಹಿರಿಯರು, ಗಣ್ಯರು ಅಭಿನಂಧಿಸಿದಾರೆ.