ಜಾಜಿ ಮೊಗ್ಗು
***********
ಹಸುರ ಗಿಡದಲಿ ಹೊಸೆದ ಜಾಜಿಯು
ಬೆಸೆದಿದಿಬ್ಬನಿ ಹನಿಯ ಸೊಗಸಲಿ
ಪಸಿಯನೀರಲಿ ಮೊಗ್ಗು ಕಳೆಯಲಿ ಘಮವ ಸೂಸುತಿದೆ!
ನಸರಿಯೊಲವಿನುಡುಗೊರೆ ಕಾದಿದೆ
ನುಸುಳಿಝೇಂಕರಿಸಿ ಹೀರಿ ಮಧವನು
ಹೊಸತುಹೂವಾಗುತಲಿ ಧನ್ಯತೆ ಪಡೆವೆ ನೆನುತಲಿದೆ!!
ತರಣಿಕಿರಣಕೆ ಹೊಳೆದು
ಬೆಳಗಲಿ
ಧರಣಿಯಂದಕೆ ಸೊಬಗ ನೀಡಿದೆ
ತರುಣಿಮುಡಿಯಲಿ ನಲಿವೆನಿಲ್ಲವೆ ಶಿವನ ಪೂಜೆಯಲಿ!
ಮೆರೆವೆ ದಿನದಲಿ ಮಾತ್ರ ಬದುಕಲಿ
ಜರುಗುತಿರುವುದು ಭೂಮಿ ಮೇಗಡೆ
ಬೆರೆತು ಬನದಲಿ ಜನರ ಮಧ್ಯದಿ ಕಾಲ ಕಳೆಯುವೆನು!!
ಚೆಲುವೆ ಕನಸನು ನನಸು ಮಾಡುವೆ
ಹಲವು ಸುಂದರ ಮನವಸೆಳೆಯುತ
ಸಲುಗೆಸರಸಕೆ ಮನಸಸೆಳೆವೆನು ಧಣಿವನಾರಿಸುತ!
ಬಿಳಿಯ ಬಣ್ಣದಿ ಸೊಂಪನೀಯುವೆ
ಚಳಿಯ ದಿನದಲಿ ಬಿರಿದು ಚೆಂದದಿ
ಮಳೆಯಹನಿಗಳ ಜಳಕದಿಂದಲಿ ಮೀವೆನಾಹಿತದಿ!!
ಧರಣೀಪ್ರಿಯೆ ದಾವಣಗೆರೆ