Breaking News

ಕೆಲವು ಸಂದರ್ಭಗಳಲ್ಲಿ ವಿನಾಕಾರಣ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟ ಬೇಕೆಂದು ಆಗ್ರಹಿಸಿ ಗೋಕಾಕ ತಹಶೀಲ್ದಾರ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಆರ್.ಡಿ.ಪಿ.ಆರ್ ಸಿಬ್ಬಂದಿಗಳು ಮನವಿ ನೀಡಿದರು.

Spread the love


ಗೋಕಾಕ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಅಭಿವೃದ್ದಿ ಕಾರ್ಯಗಳನ್ನು ಆರ್.ಡಿ.ಪಿ.ಆರ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತದೆ. ಇಲಾಖೆಯ ಈ ಕಾರ್ಯಗಳನ್ನು ಈಡೇರಿಸುವಲ್ಲಿ ಗ್ರಾ.ಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒಗಳು, ಕಾರ್ಯದರ್ಶಿಗಳು, ಎಸ್.ಡಿ.ಸಿ ಹಾಗೂ ಗ್ರಾ.ಪಂ ಸಿಬ್ಬಂದಿಗಳ ಶ್ರಮ ಸಿಂಹಪಾಲಾಗಿದ್ದರು ಕೆಲವು ಸಂದರ್ಭಗಳಲ್ಲಿ ವಿನಾಕಾರಣ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟ ಬೇಕೆಂದು ಆಗ್ರಹಿಸಿ ಗೋಕಾಕ ತಹಶೀಲ್ದಾರ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಆರ್.ಡಿ.ಪಿ.ಆರ್ ಸಿಬ್ಬಂದಿಗಳು ಮನವಿ ನೀಡಿದರು.

ಮನವಿಯಲ್ಲಿ ಪೈಕಿ ಮಹಿಳಾ ನೌಕರರುಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರದ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕಾನೂನಿನ ಚೌಕಟ್ಟು ಮೀರಿ ಕಾಮಗಾರಿಯ ಬಿಲ್‍ಗಳನ್ನು, ಸೌಲಭ್ಯಗಳನ್ನು ಒದಗಿಸುವ ಪ್ರಕರಣಗಳಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ನಿರಾಕರಿಸುವ ಸಂದರ್ಭಗಳಲ್ಲಿ, ಕಾನೂನಿನ ಚೌಕಟ್ಟು ಮೀರಿ ನಿಯಮ ಪಾಲಿಸದೆ, ಕುಳಿತಲ್ಲಿ ಸೌಲಭ್ಯಗಳನ್ನು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಒದಿಗಿಸಲು ನಿರಾಕರಿಸುವ ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರು ಮತ್ತು ಗ್ರಾಮ ಪಂಚಾಯತಿ ಸದಸ್ಯರ ಮದ್ಯ ಇರುವ ಅಂತರಿಕ ಭಿನ್ನಾಭಿಪ್ರಾಯ ಹಾಗೂ ರಾಜಕೀಯ ವೈಷಮ್ಯತೆ ಇರುವ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ಹಾಗೂ ಜನಪ್ರತಿನಿದಿಗಳಿಂದ ಹಲ್ಲೆಗೊಳಗಾಗುತ್ತಿರುವ ಸುದ್ದಿ ದಿನಪತ್ರಿಕೆಗೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಈ ಸರ್ಕಾರಿ ನೌಕರರು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಇಲಾಖೆಯು ಯಾವುದೇ ಶಾಶ್ವತ ಕ್ರಮಗಳನ್ನು ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.

ಗ್ರಾಮ ಪಂಚಾಯತ ಜನಪತಿನಿಧಿಗಳು ಹಾಗೂ ಸಾರ್ವಜನಿಕರ ಒತ್ತಡಗಳಿಂದ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಪ್ರಕರಣಗಳು ಸಹ ವರದಿಯಾಗಿದ್ದರೂ ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ಈ ಬಗ್ಗೆ ವಿಶೇಷ ಗಮನ ಹರಿಸಿರುವದಿಲ್ಲ. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರಿ ವೈದ್ಯರ ಪ್ರಕರಣಗಳಲ್ಲಿ ಇರುವ ಮಾದರಿಯನ್ನು ಗ್ರಾಮ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲು ಸರ್ಕಾರವು ಕ್ರಮ ಕೈಗೊಳ್ಳುವಂತೆ ಈ ಬಗ್ಗೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರ ಕಛೇರಿ ಗ್ರೇಡ್ 2 ಅಧಿಕಾರಿ ಎಸ್.ಕೆ ಕುಲಕರ್ಣಿ, ತಾಪಂ ವ್ಯವಸ್ಥಾಪಕ ಎಸ್.ಡಿ ಮಳ್ಳಿಮಠ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಮನವಿ ಸಂದರ್ಭದಲ್ಲಿ ಸಹಾಯಕ ನಿರ್ಧೇಶಕ ಎಸ್ ಎಚ್ ದೇಸಾಯಿ, ಎಸ್.ಬಿ ಸುಣಗಾರ, ಎಸ್.ಎಲ್ ಬಬಲಿ, ಆರ್.ಎನ್ ಗುಜನಟ್ಟಿ, ಎಚ್ ವಾಯ್ ತಾಳಿಕೋಟಿ, ಹಣಮಂತ ಬಸಳಿಗುಂದಿ, ಗಂಗಾಧರ ಮಲ್ಹಾರಿ, ಎಸ್.ಎಸ್ ರೊಡ್ಡನವರ, ಎಸ್.ಎಸ್ ಗುಡಸಿ, ಅನುರಾಧಾ ಭಜಂತ್ರಿ, ಸಾಯಿಶ್ವರಿ ಮೆನಸಿನಕಾಯಿ, ವಾಯ್.ಎನ್ ಮೂಡಲಗಿ, ವಿ.ಎಸ್ ಗುಂಡಿ, ಪಿ.ವಾಯ್ ಬಾರ್ಕಿ, ಯು.ಆರ್ ಮನಗೂಳಿ, ಎ.ಎಮ್ ಮಾಹುತ್, ಎಸ್.ಆಯ್ ಜೋತಾವರ, ಪ್ರದೀಪ ಉಪಸ್ಥಿತರಿದ್ದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …