” ಕಲ್ಕಿ ಕಾಲದ ಮಕ್ಕಳನ್ನು ಪಾಲಕರು ಹೀಗೆ ಬೆಳೆಸಿ “
“ ಮನೆಯೇ ಮೊದಲ ಪಾಠಶಾಲೆ ,ಜನನಿಯೇ ಮೊದಲ ಗುರು “ ಎಂಬ ಮಾತಿನಂತೆ,ಮಕ್ಕಳ ಭವಿಷ್ಯ ಹೇಗಿರುತ್ತದೆ ಎನ್ನುವುದು ಮನೆಯಲ್ಲಿಯೇ ನಿರ್ಧಾರವಾಗುವುದು. ಏಕೆಂದರೆ,ಮಕ್ಕಳು ತಮ್ಮ
ಪೋಷಕರಿಂದಲೇ ಎಲ್ಲವನ್ನು
ಕಲಿಯುವರು. ಹೀಗಾಗಿ ಮಕ್ಕಳಿಗೆ ಜೀವನದ ಕೆಲವೊಂದು ಪಾಠಗಳನ್ನು ಕಲಿಸಿಕೊಡುವುದು ಅಗತ್ಯ.
“ಬೆಳೆಯುವ ಸಿರಿ, ಮೊಳಕೆಯಲ್ಲಿ “ ಎನ್ನುವಂತೆ ಸಣ್ಣ ವಯಸ್ಸಿನಲ್ಲಿಯೇ ತಮ್ಮ ಮಕ್ಕಳಿಗೆ ಇತರರಿಗೆ ಗೌರವ ಕೊಡುವುದನ್ನು,
ಸಮಸ್ಯೆಗಳಿಗೆ ಪರಿಹಾರ
ಕಂಡುಕೊಳ್ಳುವುದನ್ನು , ಸಂಯಮದಿಂದ ನಡೆದುಕೊ ಳ್ಳುವುದನ್ನು ಇತ್ಯಾ ದಿ
ಗುಣಗಳನ್ನು ಕಲಿಸಬೇಕು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ ತಾಯಿಯ ಪಾತ್ರ ಬಹಳ ಮಹತ್ವದ್ದು. ಹೇಗೆಂದರೆ,
‘ತಾಯಿಯಾದವಳು ತನ್ನ ಮಗುವನ್ನು ಈ ಜಗತ್ತಿಗೆ ಪರಿಚಯಿಸಿದರೆ, ತಂದೆಯಾದವನು ಇಡೀ ಜಗತ್ತನ್ನು ತನ್ನ ಮಗನಿಗೆ
ಪರಿಚಯಿಸುತ್ತಾನೆ’. ಮಾತ್ರವಲ್ಲದೇ ಅವರು ಯಾವ ರೀತಿಯಲ್ಲಿ ಮಗುವಿನ ಭವಿಷ್ಯಕ್ಕಾಗಿ ತಮ್ಮನ್ನು
ಮುಡುಪಾಗಿಟ್ಟುಕೊಳ್ಳುವರು ಎನ್ನುವುದರ ಮೇಲೆ ಎಲ್ಲವೂ ನಿರ್ಧಾರಿತವಾಗಿರುವುದು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತು ಹಾಗೂ ಸಂಸ್ಕೃತಿಯನ್ನು
ಕಲಿಸಿಕೊಡುವುದು ಅತಿ ಅಗತ್ಯ. ಮಕ್ಕಳಲ್ಲಿ ಒಳ್ಳೆಯ ವಿದ್ಯಾಭ್ಯಾ ಸವಿದ್ದು, ಶಿಸ್ತು ಹಾಗೂ ಸಂಸ್ಕಾ ರ ಇಲ್ಲದೆ ಇದ್ದರೆ ಅದು
ಅಪ್ರಯೋಜಕ. ಅದಕ್ಕೆ ತಿಳಿದವರು ಹೇಳುವ ಪ್ರಕಾರ “ ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಎರಡು ಮೂಲ ಮಂತ್ರ. ಶಿಕ್ಷಣ ಒಬ್ಬ ವ್ಯಕ್ತಿಯನ್ನು ಈ ಸಮಾಜದಲ್ಲಿ ಯಾವತ್ತಿಗೂ ಎಡವಲು ಬಿಡುವುದಿಲ್ಲ. ಸಂಸ್ಕಾರ ಒಬ್ಬ ವ್ಯಕ್ತಿಯನ್ನು ಈ ಸಮಾಜದಲ್ಲಿ
ಕೆಡಲು ಅಂದರೆ ಹಾಳಾಗಲು ಬಿಡುವುದಿಲ್ಲ,ಎಂಬುವುದು ಸತ್ಯವೇ ಸತ್ಯ…! ಈ ಕಲಿಯುಗದ ಸಮಾಜದಲ್ಲಿ ತಂದೆ ತಾಯಂದಿರು ದಿನವಿಡಿ ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯನ್ನು ಹೊ ರಲೇಬೇಕಾಗಿದೆ..!
‘ ಮಕ್ಕಳಿಗೆ ಎರಡು ಅಕ್ಷರ ಕಡಿಮೆ ಕಲಿಸಿದರು ಪರವಾಗಿಲ್ಲ, ಆದರೆ ಸಂಸ್ಕಾರವನ್ನು
ಕಲಿಸಲೇಬೇಕು’. ಇದರ ಜೊತೆಗೆ ಯಾವುದೇ ಸಮಸ್ಯೆಗಳು ಎದುರಾದಾಗ ಎದೆಗುಂದದೆ ಧೈ ರ್ಯದಿಂದ, ಸೃಜನಶೀಲತೆಯಿಂದ ಯೋಚಿಸಿ, ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ವರ್ತಿಸುವುದು, ಮಕ್ಕಳಲ್ಲಿ ಇರಬೇ ಕಾದ ಪ್ರಮುಖ ಗುಣಗಳು. ಇದನ್ನು ಪೋಷಕರು ಮಕ್ಕಳಿಗೆ ಮೊದಲಿನಿಂದಲೂ (ಅಂದರೆ ಚಿಕ್ಕ ವಯಸ್ಸಿನಿಂದಲೂ ) ಕೂಡ
ಹೇಳಿಕೊಡಬೇಕು.ಮಕ್ಕಳಿಗೆ ಅದು ಯಾವುದೇ ವಿಷಯವಾಗಲಿ ಅದು ಶಾಲೆಯಲ್ಲಿ ಆಟ ಅಥವಾ ಪಾಠದ
ವಿಚಾರವಾಗಿರಲಿ ಅವರಿಗೆ ಹಂತ – ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗದರ್ಶನ
ನೀಡಬೇಕು. ಹಾಗೆಯೇ
ಪ್ರತಿಯೊಂದು ಪರಿಹಾರಗಳ ಲಾಭ – ನಷ್ಟಗಳ ಬಗ್ಗೆ ಚರ್ಚಿಸಬೇಕು.
‘ ಯಥಾ ರಾಜ, ತಥಾ ಪ್ರಜಾ ‘ ಎನ್ನುವಂತೆ ಹೆತ್ತವರು ಹೇಗೆ ಇರುತ್ತಾರೋ ಹಾಗೆಯೇ ಮಕ್ಕಳು
ಕೂಡ ವರ್ತಿಸುವರು. ಇಂದಿನ ಅತಿಯಾದ ಒತ್ತಡದ ಜೀವನದಲ್ಲಿ ಸಹಾನುಭೂತಿ ಎನ್ನುವುದೇ ಮಾಯವಾಗುತ್ತಿದೆ. ಇದರಿಂದ
ಮಕ್ಕಳಲ್ಲಿ ಸಹಾನುಭೂತಿ ಮೂಡಿಸಿ ಅವರನ್ನು ಒಬ್ಬ ಸೌಜನ್ಯಯುತ ವ್ಯಕ್ತಿಯನ್ನಾಗಿ ಬೆಳೆಸಬೇಕಾಗಿದೆ.
‘ ಸೋಲೇ ಗೆಲುವಿನ ಸೋಪಾನ ‘ ಎಂಬ ಮಾತಿದೆ, ಅದೇ ರೀತಿಯಾಗಿ ಮಕ್ಕಳು ಸೋತಾಗ
ಅವರನ್ನು ಬೈಯುವ ಬದಲು ಪ್ರೋತ್ಸಾಹಿಸಿ ಮತ್ತು ಮುಂದೆ ಕೂಡ ಸೋಲನ್ನು ಮೆಟ್ಟಿ ಗೆಲುವನ್ನು ಪಡೆಯಬಹುದು.
ಸೋಲಿನಿಂದ ಬಹಳಷ್ಟು ಕಲಿಯಬಹುದು ಎಂಬ ಅರಿವು ಮತ್ತು ಜೀವನದಲ್ಲಿ ಸೋ ಲು ಹಾಗೂ ಗೆಲುವು ಎರಡು ಇರುವುದು ಎಂಬುದನ್ನು ಅವರಿಗೆ ತಿಳಿಸಬೇಕಾಗಿದೆ.
ಅದಲ್ಲದೆ ಮಕ್ಕಳು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರೋತ್ಸಾಹ ನೀಡಬೇಕು ಮತ್ತು ಇದರ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವುದನ್ನು ಹಾಗೂ ಅವರ ಆಲೋಚನೆಗಳ ಆಯ್ಕೆ
ಹೇಗೆ ಮಾಡಬೇಕು ಎಂಬುದರ ತಿಳಿ
ಹೇಳಬೇಕಾಗಿದೆ. ಕಠಿಣ
ಪರಿಶ್ರಮಕ್ಕಿಂತ ಮಿಗಿಲಾಗಿರುವುದು ಯಾವುದು ಇಲ್ಲ,ಎನ್ನುವುದನ್ನು ಮಕ್ಕಳಿಗೆ ಹೇಳಿಕೊಡಬೇಕು.
ಎಷ್ಟು ತಾಳ್ಮೆಯಿಂದ ಇರುತ್ತಿವೋ ಅಷ್ಟು ಅಗ್ರಸ್ಥಾನ. ಎಷ್ಟು ದೂರ ಇರುತ್ತೀವೋ ಅಷ್ಟು ಗೌರವ.ಎಷ್ಟು ಕಡಿಮೆ ಆಸೆ ಪಡುತ್ತೀವೋ ಅಷ್ಟು ಪ್ರಶಾಂತತೆ. ಎಷ್ಟು ಕಡಿಮೆ ಮಾತನಾಡುತ್ತೀವೋ ಅಷ್ಟು ಬೆಲೆ,ಎಂಬೆಲ್ಲವನ್ನು ಅವರಿಗೆ ತಿಳಿಸಿ ಹೇಳಿದರೆ ಅವರು ಮುಂದೆ ಈ ಭವ್ಯ ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿ ನಿಲ್ಲುತ್ತಾರೆ ನೋಡಿ….!!!
ಶ್ರೀ.ರಮೇಶ. ಎಸ್. ಬಿರಾದಾರ
ಶಿಕ್ಷಕರು : ಎಸ್. ಎಸ್. ಆರ್.ಪ್ರೌಢ ಶಾಲೆ , ಮೂಡಲಗಿ.
9964231143