Breaking News

Ad9 News

ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಈಗಿನಿಂದಲೇ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ : ಬಾಲಚಂದ್ರ ಜಾರಕಿಹೊಳಿ

  ಗೋಕಾಕ: ಕುಡಿಯುವ ನೀರಿನ ಆಹಾಕಾರ ತಪ್ಪಿಸಲು ಸ್ಥಳೀಯ ಪಿಡಿಓ, ವಿಎ ಮತ್ತು ಆರ್‍ಡಿಪಿಆರ್ ಇಂಜನೀಯರ್‍ಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರದಂದು ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಟಾಸ್ಕ್‍ಫೋರ್ಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ತಿಂಗಳಿನಿಂದ ಮೇ-ತಿಂಗಳಿನವರೆಗೆ …

Read More »

ಕೃಷಿ ವಿದ್ಯಾರ್ಥಿಗಳಿಂದ ಅಜೋಲಾ ಸಸ್ಯದ ಕೃಷಿ ಪ್ರಾತ್ಯಕ್ಷಿಕೆ

ಗೋಕಾಕ: ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಅಜೋಲಾ ಸಸ್ಯದ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಕರಕುಚ್ಚಿ ಗ್ರಾಮದಲ್ಲಿ ಮಾಡಿದರು. ವಿದ್ಯಾರ್ಥಿಗಳು ರೈತರಿಗೆ ಅಜೋಲಾ ಸಸ್ಯದ ಮಹತ್ವ ಹಾಗೂ ವಿವಿಧ ತಳಿಗಳು, ಬೆಳೆಯುವ ಹಂತಗಳು ಕುರಿತು ಮಾಹಿತಿಯನ್ನು ನೀಡಿದರು. ಪಶುವಿನ ಉತ್ತಮ ಹಾಲಿನ ಇಳುವರಿಗಾಗಿ ಪಶುಗಳಿಗೆ ಹಾಕುವ ಹಿಂಡಿಯೊಂದಿಗೆ ಅಜೋಲಾ ಮಿಶ್ರಣ ಮಾಡಿ ಉಪಯೋಗಿಸಬೇಕು.ಅಜೋಲಾ ಬೆಳೆಯುವ ವಿಧಾನ ಹಾಗೂ …

Read More »

ದೇಶದ ಆರ್ಥಿಕತೆಗೆ ಬಲ ತುಂಬಿದ ಬಜೆಟ್- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ

ಗೋಕಾಕ- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ದೇಶದ ಆರ್ಥಿಕ ರಂಗಕ್ಕೆ ಆಧಾರಸ್ತಂಭವಾಗಿರುವ ಒಟ್ಟು ಆರು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೃಷಿ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ, ಸಾರಿಗೆ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ. ಮಾತ್ರವಲ್ಲ, ಹೊಸ ಉದ್ಯೋಗ ಸೃಷ್ಟಿ, ಸಂಶೋಧನೆ, ಆವಿಷ್ಕಾರಕ್ಕೂ ಒತ್ತು ನೀಡಿದ್ದಾರೆ. ದೇಶದ ಬೆನ್ನೆಲುಬಾದ ರೈತರಿಗೆ …

Read More »

ಫೆ.2 ರಂದು ವಾರ್ಷಿಕ ಸ್ನೇಹ ಸಮ್ಮೇಳನ

ಮೂಡಲಗಿ: ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಶುಕ್ರವಾರ ಫೆ.2 ರಂದು ಮುಂಜಾನೆ 9 ಘಂಟೆಗೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲ್ಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ವಹಿಸುವರು, ಅರಬಾಂವಿ ಶಾಸಕ ಬಾಲಚಂದ್ರ ಲ. ಜಾರಕಿಹೊಳಿ ಸಮಾರಂಭವನ್ನು ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಹಳ್ಳೂರಿನ ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ವಾಯ್.ಬಿ.ಕಳ್ಳಿಗುದ್ದಿ. ಬಿಇಒ ಕಛೇರಿಯ …

Read More »

ಕೃತಿ : ನಿನ್ನೆ ಮೊನ್ನೆ ನಮ್ಮ ಜನ… ಜೇಬರ್ ಸರ್ ಅವರಿಗೆ ಹೃದಯಪೂರ್ವಕ ವಂದನೆಗಳು : ಡಾ. ನಂದಿನಿ

ಕೃತಿ : ನಿನ್ನೆ ಮೊನ್ನೆ ನಮ್ಮ ಜನ… ಸಾಹಿತಿ : ಜೆ.ಬಿ. ರಂಗಸ್ವಾಮಿ ( ನಿವೃತ್ತ. ಡಿ. ವೈ.ಎಸ್. ಪಿ ) ಜೇಬರ್ ಸರ್ ಅವರಿಗೆ ಅವರ ಕೃತಿಯನ್ನು ಓದುವ ಇಚ್ಛೆ ವ್ಯಕ್ತಪಡಿಸಿ ಮೆಸೇಜಿಸಿದವಳು ಹಾಗೇ ಮರೆತಿದ್ದೆ. ಕೆಲವೇ ದಿನಗಳಿಗೆ ಕಾಲೇಜ್ ಅಡ್ರೆಸ್ಸ್ ಗೆ ಪುಸ್ತಕದ ಪೋಸ್ಟ್ ಬಂದಿದ್ದು ನೋಡಿ ತೀರದ ಸಂಭ್ರಮ. ಒಬ್ಬ ನಿವೃತ್ತ ಡಿ. ವೈ. ಎಸ್. ಪಿ. ಅಧಿಕಾರಿ ತಮ್ಮ ಕೃತಿಯನ್ನು ಕಳುಹಿಸಿದ್ದಾರೆಂದರೆ ಕ್ಷಣ ನಂಬಲಾಗಲಿಲ್ಲ. …

Read More »

ಹಳಗನ್ನಡ ಸಾಹಿತ್ಯ ರಸಗ್ರಹಣ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಪಿ. ನಾಗರಾಜು ಅಭಿಮತ

ಸಾಹಿತ್ಯ ಬದುಕಿನ ಮೌಲ್ಯಗಳನ್ನು ಒಳಗೊಂಡಿದೆ. ಮೂಡಲಗಿ: ಹಳಗನ್ನಡ ಸಾಹಿತ್ಯ ಪರಂಪರೆಯಲ್ಲಿ ಅದ್ಭುತವಾದ ಮಾಹಾಕಾವ್ಯಗಳು ಸೃಷ್ಠಿಯಾಗಿದೆ. ಅವುಗಳನ್ನು ಪ್ರಸ್ತುತ ವಿಧ್ಯಮಾನದಲ್ಲಿ ಗ್ರಹಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ನಾಗರಾಜು ಹೇಳಿದರು. ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಹಳಗನ್ನಡ ಸಾಹಿತ್ಯ ರಸಗ್ರಹಣ ಎಂಬ ವಿಶೇಷ ಉಪನ್ಯಾಸ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಗಣ ರಾಜ್ಯೋತ್ಸವದ ಶುಭಾಶಯ

ಗೋಕಾಕ್– ನಾಡಿನ ಜನತೆಗೆ ಅರಭಾವಿ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿಯವರು ೭೫ ನೇ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಜಗತ್ತಿನ ಅತಿ ದೊಡ್ಡದಾದ ಸಂವಿಧಾನವನ್ನು ರಚಿಸಿ ಪ್ರಜಾಪ್ರಭುತ್ವ ದೇಶವನ್ನಾಗಿಸಲು ಹಗಲಿರುಳು ಹೋರಾಟ ನಡೆಸಿರುವ ಎಲ್ಲ ಮಹನೀಯರನ್ನು ಸ್ಮರಿಸುವ ಅವಕಾಶವು ಒದಗಿ ಬಂದಿದೆ. ಇವರು ಹಾಕಿಕೊಟ್ಟ ದೇಶ ಪ್ರೇಮದ ದಾರಿಯಲ್ಲಿ ನಾವೆಲ್ಲರೂ ಒಂದಾಗಿ ಸಾಗೋಣ. ದೇಶ ಪ್ರೇಮಿಗಳ ತ್ಯಾಗ, ಬಲಿದಾನವನ್ನು ಸ್ಮರಿಸೋಣ. ಸಂವಿಧಾನ ಪಿತಾಮಹ ಡಾ. ಬಾಬಾಸಾಹೇಬ್ …

Read More »

ಇಂದು ವಿದ್ಯುತ್ ವ್ಯತ್ಯಯ

ಮೂಡಲಗಿ : 110ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿಯಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಜ.23 ಮಂಗಳವಾರದಂದು ಕೈಗೊಳ್ಳಲು ಉದ್ದೇಶಿಸಿರುವುದರಿಂದ 110ಕೆವ್ಹಿ ಮೂಡಲಗಿ ವಿದ್ಯುತ್ ವಿಧಾನ ಕೇಂದ್ರದಿಂದ ಸರಬರಾಜು ಆಗುವ ಮೂಡಲಗಿ ಪಟ್ಟಣ ಮತ್ತು ಗುರ್ಲಾಪೂರ ಪಟ್ಟಣ ಹಾಗೂ ಎಲ್ಲಾ 11ಕೆವ್ಹಿ ನೀರಾವರಿ ಪಂಪ್ಸೆಟ್ ಮಾರ್ಗಗಳಲ್ಲಿ ಮತ್ತು 110ಕೆವ್ಹಿ ನಾಗನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ನಾಗ್ನೂರ್ ಪಟ್ಟಣ ಮತ್ತು ಎಲ್ಲಾ 11ಕೆವ್ಹಿ ನೀರಾವರಿ ಪಂಪ್ಸೆಟ್ ಮಾರ್ಗಗಳಲ್ಲಿ ಮುಂಜಾನೆ …

Read More »

ನಮ್ಮ ದೇಶದ ಇತಿಹಾಸದಲ್ಲಿ ಅತೀ ಮಹತ್ವದ ಭಕ್ತಿ ಭಾವದ ದಿವಸ : ಬಾಲಚಂದ್ರ ಜಾರಕಿಹೊಳಿ

    ಮೂಡಲಗಿ- ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಟಾಪನೆಯಾಗಿದ್ದು,ಸತತ ಐನೂರು ವರ್ಷಗಳ ಹೋರಾಟದ ನಂತರ ಭವ್ಯವಾದ ರಾಮ ಮಂದಿರದಲ್ಲಿ ಶ್ರೀ ರಾಮನು ವಿರಾಜಮಾನನಾಗಿದ್ದಾನೆ ಎಂದು ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಸೋಮವಾರದಂದು ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಪಟ್ಟಣದ ರಾಮ ಮಂದಿರ ಮತ್ತು ಮಾರುತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅವರು, ಇಂದು ಭಾರತದ ಚರಿತ್ರೆಯಲ್ಲಿಯೇ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ಐತಿಹಾಸಿಕ …

Read More »

ನಿಧನ ವಾರ್ತೆ ತಾಯಕ್ಕ ಬಸನಗೌಡ ಪಾಟೀಲ್

 ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣದಲ್ಲಿ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಚಂದರಗಿ ಕ್ರೀಡಾ ಶಾಲೆಯ ಚೇರ್ಮನರಾದ ಬಸನಗೌಡ ಪಾಟೀಲ ಇವರ ಧರ್ಮಪತ್ನಿ ಶ್ರೀಮತಿ ತಾಯಕ್ಕ ಬಸನಗೌಡ ಪಾಟೀಲ(84) ರವಿವಾರ ರಾತ್ರಿ ನಿಧನರಾದರು. ಮೃತರು ಪತಿ, ಮೂವರು ಪುತ್ರರರು, ಏಳು ಜನ ಪುತ್ರಿಯರು ಸೇರಿದಂತೆ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೇಯು ನಾಗನೂರು ಪಟ್ಟಣದ ತುಕ್ಕಾನಟ್ಟಿ ರಸ್ತೆಯ ತೋಟದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಜರುಗಲ್ಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ

Read More »