ಬೆಂಗಳೂರು : ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ) ವತಿಯಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮರಿಯಪ್ಪ ಮರಿಯಪ್ಪಗೋಳ ಅವರಿಗೆ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು.
ಕನ್ನಡ ರಾಜ್ಯೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದ್ಲಲಿ ಸಾಮಾಜಿಕ ಕಾರ್ಯಕರ್ತ ಮರಿಯಪ್ಪ ಮರಿಯಪ್ಪಗೋಳ ಅವರ ಸಾಮಾಜಿಕ ಸೇವೆ ಗುರುತಿಸಿ ” ಸಮಾಜ ಸೇವಕ ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಜನೇವರಿ 3 ರಂದು ಜ್ಞಾನಭಾರತಿ ಯುನಿವರ್ಸಿಟಿ ಕಾಲೇಜಿನ ಕಲಾಗ್ರಾಮ ಆಡಿಟೋರ್ ನ ಮಲ್ಲತಹಳ್ಳಿ ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಹತ್ತಿರ ಬೆಂಗಳೂರು ನಡೆಸಲಾಯಿತು. ಈ ಪ್ರದರ್ಶನವು ಆಯಾ ಕ್ಷೇತ್ರಗಳಲ್ಲಿ ಅನೇಕ ಜನರ ಸಾಧಕರಿಗೆ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿದರು. ಈ ಸಮಾರಂಭದಲ್ಲಿ ಅನೇಕ ರಾಜಕಾರಣಿಗಳು, ಗಣ್ಯರು, ಪತ್ರಕರ್ತರು ಮತ್ತು ಅನೇಕ ಖ್ಯಾತ ವ್ಯಕ್ತಿಗಳ ಉಪಸ್ಥಿತರಿದ್ದರು.