Breaking News
Home / ಬೆಳಗಾವಿ / ಪಾಪು ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

ಪಾಪು ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

Spread the love

ಗೋಕಾಕ: ಕನ್ನಡದ ಅಸ್ಮಿತೆ, ಕನ್ನಡ ಏಕೀಕರಣದ ರೂವಾರಿ,ಮೇರು ಪತ್ರಕರ್ತ -ಸಾಹಿತಿ, ಶತಾಯುಷಿ, ನಾಡೋಜ ಡಾ.ಪಾಟೀಲ್ ಪುಟ್ಟಪ್ಪ (ಪಾಪು) ನವರ ನಿಧನಕ್ಕೆ ಕೆಎಮ್ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ನೆಲ- ಜಲ, ಭಾಷೆ, ಕರ್ನಾಟಕ ಏಕೀಕರಣ, ಗೋಕಾಕ ವರದಿ ಜಾರಿಗೆಗಾಗಿ ತಮ್ಮ ಇಡೀ ಜೀವನವನ್ನೇ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಕನ್ನಡ ನಾಡಿನ ಸಂಸ್ಕೃತಿಗೆ ಸಾಕಷ್ಟು ಮೆರಗು ನೀಡಿದ ಪಾಟೀಲ್ ಪುಟ್ಟಪ್ಪ ಅವರ ಸಾಧನೆ ಅವಿಸ್ಮರಣಿಯವಾಗಿದೆ.

ಇಂತಹ ಒಬ್ಬ ಮಹಾನ್ ಸಾಧಕನ ಅಗಲಿಕೆಯಿಂದ ಕನ್ನಡ ನಾಡಿಗೆ ತುಂಬಲಾರದಷ್ಟು ನಷ್ಟವಾಗಿದೆ. ಪಾಟೀಲ್ ಪುಟ್ಟಪ್ಪರವರ ಹೋರಾಟದ ಬದುಕು ನಾಡಿನ ಜನತೆಗೆ ಅನುಕರಣಿಯವಾಗಲಿ. ಅವರ ಕುಟುಂಬ ವರ್ಗದವರಿಗೆ ದುಖಃವನ್ನು ಸಹಿಸುವ ಶಕ್ತಿ ಪರಮಾತ್ಮ ನೀಡಲಿ. ಮೃತರ ಆತ್ಮಕ್ಕೆ ಚಿರ ಶಾಂತಿ ನೀಡಲೆಂದು ಆ ಭಗವಂಥನಲ್ಲಿ ಪ್ರಾರ್ಥಿಸುವದಾಗಿ ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ.


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …