Breaking News

ಕವನ

🌹🌹 ಉಸಿರೇ…… 🌹🌹

🌹🌹 ಉಸಿರೇ…… 🌹🌹 ಬೆಳದಿಂಗಳೇ….. ಒಮ್ಮೆ ಕುಳಿತು ಮಾತಾಗುವ ನಕ್ಷತ್ರಗಳ ಉಯ್ಯಾಲೆ ಮಾಡಿ ಕಾಯುವೆಯಾ ಕದ ತಟ್ಟಿ ನಿಂತ ಸಾವನ್ನು ನಿಲ್ಲಿಸಿ ಬರುವೆ ಹುಣ್ಣಿಮೆ ಕಥೆಗಳ ಸಂಪ್ರೀತಿಯ ಸಾರ ಉಣ ಬಡಿಸು ಮಳೆಯೇ…. ಜಿಟಿ ಜಿಟಿಯ ಹಾಡೊಂದ ಹಾಡಿ ಕೇಳಿಸು ಹೃದಯಕ್ಕೆ ಗೀರಿದ ಗಾಯವಾಗಿದೆ ಅದರ ಮೇಲೆ ಹನಿ ಹನಿಯ ತುಂತುರ ಸ್ಪರ್ಶವಿರಲಿ ಎದೆಯಾಳಕ್ಕೆ ನೋವ ಇಳಿಸುತ್ತಾ ಮಾಗದ ಗಾಯ ಹಾಗೇ ಉಳಿಸಿ ಬಿಡು ಉಸಿರೇ…. ಬೆಳದಿಂಗಳಲಿ ನಕ್ಷತ್ರಗಳ ಉಯ್ಯಾಲೆ …

Read More »

“ಕುಂಚಕ್ಕೆ ಸಿಕ್ಕ ಕನ್ಯೆಯರು”

“ಕುಂಚಕ್ಕೆ ಸಿಕ್ಕ ಕನ್ಯೆಯರು” ಬಣ್ಣದಲ್ಲಿ ಮಿಂದೆದ್ದ ಬಹಳಷ್ಟು ಚೆಲುವೆಯರು ವರ್ಮನ ಕೈ ಕುಂಚ ಕ್ಕೆ ಸಿಕ್ಕು ಬದುಕಿ ಬಾಳಿದರು.. ಅದೇ ಸೀರೆ,ಅದೇ ನೀರೆ ಕೆಂದುಟಿಯ ಕನ್ಯೆಯರು ಬಣ್ಣ ಮಾಸದಷ್ಟು ಕೆನ್ನೆ ರಂಗೇರಿ ಹೊಳೆಯುವರು ಬೆಡಗಿನ ವೈಯಾರಕ್ಕೆ ಬಣ್ಣದ ಕೈ ಸೋಕಿ, ಇಂದಿಗೂ ಜೀವಂತದಲ್ಲಿ ಮನ ಮನವ ಕಾಡುವರು ಕುಂಚಕ್ಕೆ ಬಣ್ಣವಾದ ಚೆಲುವ ಚೆನ್ನೆಯರು… ಅಶ್ವಿನಿ.ಜೆ.ವಿ.ಶೇಟ್

Read More »

ಪುರುಷನೆಂದರೆ ಯಾರು..!?

ಪುರುಷನೆಂದರೆ ಯಾರು..!? ದಿಟ್ಟ ಮಹಿಳೆಯ ದಟ್ಟ ಅರಣ್ಯದಿ ಮೊನಚು ಹಲ್ಲು ಗೋರಟು ಉಗುರುಗಳಿಂದ ಆತಿಥ್ಯ ಮಾಡುವವನೇ.!? ಕೆಂಪು ಹಳದಿ ಬಣ್ಣತೀಡಿ ಕಂಪು ಸೂಸುವ ಭಾವ ಬಂಧನದಿ ಮಡದಿ ಬಾಳಲ್ಲಿ ಕಪ್ಪು ಮಸಿ ರಾಚುವವನೇ..!? ಹಸುವಿನ ಕವಚ ತೊಟ್ಟ ಪರಸ್ತ್ರೀಯ ಪರಮಾವಧಿಸಲು ಪರಾಕ್ರಮಿಸುವವನೇ..!? ನಯನದಿ ಅವನಿಗೆ ಭವ್ಯವಾಗಿ ವಂದಿಸುತ್ತಾ ಮನದಲ್ಲಿ ನವ್ಯ ವಿಕಾರ ಕೃತ್ಯಗಳ ಸಕಾರಗೋಳಿಸುವವನೇ..!? ಧನ್ಯತೆಯಲ್ಲಿ ದ್ರವರೂಪದ ಸ್ಫಟಿಕವಾಗಿ ಧಮನಿಯ ದೌಡಾಯಿಸಿ ಶಮನಗೊಳಿಸುವವನೇ..!? ವಿನಮ್ರ ವಿದ್ರಾವಕ ವಿತಂಡಕನಾಗಿ ಪರಮ ಪಾಪಗಳನ್ನು …

Read More »

ಓ ಹೃದಯವಾಸಿಯೇ (ಕಾಲ್ಪನಿಕ )

ಓ ಹೃದಯವಾಸಿಯೇ (ಕಾಲ್ಪನಿಕ ) ಮನ ಬಿಚ್ಚಿ ಹೇಳ್ತಿನಿ ಮನಸ್ಸು ಕೊಟ್ಟು ಕೇಳ್ತಿಯಾ!!! ತುಂಬಾನೇ ನೋಡ್ತಿನಿ ಕನಸಾಗಿ ಬರ್ತಿಯಾ!!! ರವಿಯಾಗಿ ಮೂಡ್ತೀನಿ ಶಶಿಯಾಗಿ ಕಾಣ್ತಿಯಾ!!! ಸಮುದ್ರದಲ್ಲಿ ಹುಟ್ಟುತಿನಿ ಮುತ್ತಾಗಿ ಸಿಗ್ತಿಯಾ!!! ಹೃದಯಪೂರ್ವಕವಾಗಿ ಕೇಳ್ತೀನಿ ಇನ್ನೊಂದು ಜನ್ಮ ನನಗಾಗಿ @ ಹುಟ್ಟುತಿಯಾ @ ಪೂಜಾ ಬೆಳಗಾವಿ…

Read More »

ನನ್ನವನೆ ???? (ಕಲ್ಪನೆಯ ಕವನ )

ನನ್ನವನೆ ???? (ಕಲ್ಪನೆಯ ಕವನ ) ???????????????????? ಹೆಜ್ಜೆ ಇಟ್ಟು ನೋಡು ಬಾರೋ ನನ್ನ ಎದೆಯಲಿ ಸಾವಿನಲ್ಲೂ ಹುಡುಕುವೆ ಮೋಡದ ಮರೆಯಲಿ!!! ಕಣ್ಣಿನ ಭಾಷೆಯಲ್ಲಿ ಸನಿಹ ಕರೆದವನೇ ಮನಸಿನ ಆಸೆಯ ಮೌನದಿ ತಿಳಿಸಿದವನೇ!!! ಕನಸಿಗೂ ಮನಸಿನಲ್ಲಿ ಪ್ರೀತಿ ತಂದವನೇ ಪ್ರತಿ ಜನ್ಮಕೂ ನೀ ನನ್ನವನೇ!!! ಮೂಡಿಪಿಟ್ಟ ಆಸೆಗಳು ನೀನಗಿರಲಿ ಕಡಲ ಮುಟ್ಟುವ ಕಣ್ಣ ಹನಿಗಳು ನನಗಿರಲಿ!!! ನಿನ್ನ ಹೆಸರ ಬರೆದಿರುವೆ ನನ್ನುಸಿರ ಕಣ ಕಣದಲ್ಲಿ ಒಂದು ಚೂರು ಜಾಗ ಕೊಡು …

Read More »

ಮರಳುಗಾಡ ಬಿಸಿಲ ಬೇಗೆಯನು ಅನುಭವಿಸಿದೆ ನನ್ನೊಲವೇ

  ಮರಳುಗಾಡ ಬಿಸಿಲ ಬೇಗೆಯನು ಅನುಭವಿಸಿದೆ ನನ್ನೊಲವೇ ಸರಿರಾತ್ರಿಯಲಿ ಮನನೊಂದು ಕಣ್ಣೀರು ಹರಿಯುತಿದೆ ನನ್ನೊಲವೇ// ಒಲವಿನ ರಥದಲಿ ಮೆರವಣಿಗೆ ಹೊರಟಿದೆ ಸಡಗರದಲಂದು ಚೆಂದದಿ ಕಳಾಹೀನಳಾಗಿ ಭಯದಬೇಗುದಿಯಲಿ ಚಡಪಡಿಸಿದೆ ನನ್ನೊಲವೇ// ಪ್ರೇಮಕುಸುಮ ಮುಡಿಸಿ ನಲಿಸಿದೆ ಚಂದ್ರಮನಂತೆ ಆ ಚಂದ್ರಿಕೆಯ ಚೆಲುವಲ್ಲಿ ತಮದ ಕಡಲೊಳಗೆ ತನುಮನವಿಂದು ಬೇಯುತಿದೆ ನನ್ನೊಲವೇ// ಮರುಭೂಮಿಯ ಝಳದಲೂ ಸಿಗುತಿದೆ ತಂಪು ಸಲಿಲ ಉಕ್ಕುಕ್ಕಿ ಮರುಮಾತಿಲ್ಲದೇ ಪ್ರೀತಿಯನು ದೂರ ಸರಿಸಿದೆ ನನ್ನೊಲವೇ// ಭೋರ್ಗರೆವ ಸಾಗರದಲೆಯದು ಅಣಕಿಸುತಿದೆ ಎನ್ನೆದೆಯ ಬಯಕೆಗಳ ಮಾರ್ಗವರಿಯದೆ …

Read More »

ಬೆಟ್ಟದಂತೆ ಪ್ರೀತಿ ಅಚಲವೆಂದವನು ಅದ ಮರೆಯುವ ಮುನ್ನ ಯೋಚಿಸಬೇಕಾಗಿತ್ತು ನೀ

  ಬೆಟ್ಟದಂತೆ ಪ್ರೀತಿ ಅಚಲವೆಂದವನು ಅದ ಮರೆಯುವ ಮುನ್ನ ಯೋಚಿಸಬೇಕಾಗಿತ್ತು ನೀ ಕೊಟ್ಟ ಮಾತನ್ನು ಕಡೆಗಣಿಸಿ ದೂರ ಸರಿಯುವ ಮುನ್ನ ಯೋಚಿಸಬೇಕಾಗಿತ್ತು ನೀ// ದಟ್ಟಕಾನನದಿ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿದೆ ಮಾನಿನಿಯ ಬದುಕು ಪಟ್ಟುಬಿಡದೆ ಪಡೆದ ಇಷ್ಟದ ಪ್ರೇಮವನು ಕೈಬಿಡುವ ಮುನ್ನ ಯೋಚಿಸಬೇಕಾಗಿತ್ತು ನೀ// ಕೆಟ್ಟಘಳಿಗೆಯೊಂದು ಕರಗಿ ಶುಭಕಾಲದ ಆಗಮನವಾಗುವ ಮುನ್ಸೂಚನೆಯಿತ್ತೇ,,? ನಟ್ಟನಡುವೆಯಲಿ ಕೈಬಿಟ್ಟು ಹೋಗುವ ಮುನ್ನ ಯೋಚಿಸಬೇಕಾಗಿತ್ತು ನೀ// ಅಷ್ಟೈಶ್ವರ್ಯವ ದೂರತಳ್ಳಿ ಬಂದವಳು ನಿನ್ನ ಅದಮ್ಯ ಒಲವಿಗಾಗಿ ಕಾತರಿಸಿ ಇಷ್ಟಪಟ್ಟು …

Read More »

ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ

ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ ಮನೆಯ ಸೂರು ಕಾಲನ ಹೊಡೆತಕೆ ಸಡಿಲಾಗಿದೆ ಜೀವ ಹೊಸ ಸೂರಿನ ಆಸರೆ ಹುಡುಕಿ ಸಾಗಿದೆ ಪ್ರಾಣ ಜಲವಾಗಿದ್ದ ಬಾವಿಯ ಸೆಲೆ ಬತ್ತಿದೆ ದಾಹ ತಣಿಸಲು ನದಿಯನರಸಿ ವಲಸೆ ಹೋಗಿದೆ ಎದೆಯ ಕ್ಷೀರ ಉಣಿಸಿದವಳು ಹಣ್ಣೆಲೆಯಾದಳು ಚಿಗುರೆಲೆ ಬಣ್ಣದ ಕನಸನರಸಿ ಪಯಣ ಬೆಳೆಸಿದೆ ‘ಆರಾಧ್ಯೆ’ “ಕಾಣದ ಕಡಲಿಗೆ ಮನ ಹಂಬಲಿಸಿದೆ” ಜಾಗತೀಕರಣದ ಹೆಸರಲಿ ತಾಯಿಬೇರು  ನಲುಗಿದೆ ಶ್ರೀಮತಿ …

Read More »

ರವಿ ಜಾರುವ ವೇಳೆಗೆ ನಬಕೆ ರಂಗೇರಿದೆ ನೀ ಬರುವ ಗಳಿಗೆಗೆ ಬಯಕೆ ರಂಗೇರಿದೆ

ಗಜಲ್ ರವಿ ಜಾರುವ ವೇಳೆಗೆ ನಬಕೆ ರಂಗೇರಿದೆ ನೀ ಬರುವ ಗಳಿಗೆಗೆ ಬಯಕೆ ರಂಗೇರಿದೆ ಹಾರುವ ಬೆಳ್ಳಕ್ಕಿ ಬಾನ ಸಿಂಗರಿಸಿವೆ ಕನಸಲಿ ನೀ ಬಂದು ಭಾವಕೆ ರಂಗೇರಿದೆ ಚಂದಿರನ ಚಲುವೊಂದು ಭುವಿಗಿಳಿದಿದೆ ಮಹಾಶ್ವೇತೆಯ ಆಗಮನ ಮನಕೆ ರಂಗೇರಿದೆ ಹಾಲಹೊಳೆಯೊಂದು ಹರಿದು ಬರುತಿದೆ ಬಾಳ ದೋಣಿಯಲಿ ಪ್ರೇಮಕೆ ರಂಗೇರಿದೆ ನಟ್ಟಿರುಳು ಬೆಳಗುವ ದೀಪಗಳ ಸಾಲು ‘ಆರಾಧ್ಯೆ’ ಯ ಬೆಳಕಿನಲಿ ಮನಕೆ ರಂಗೇರಿದೆ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ವಿಜಯಪುರ

Read More »

ನೀರುಕೋಳಿ

ತಲ ಷಟ್ಪದಿಯಲ್ಲಿ ************** ನೀರುಕೋಳಿ ****””**** ನೀರು ಕೋಳಿ ಭಾರಿಚೆಂದ ಜೋರಿನಿಂದ ತೇಲುತ! ಸಾರಿಜಗಕೆ ಬೇರೆಚಿಂತೆ ಯಾರ ಹಂಗುಬೇಡವು!! ಚೆಂದದಿಂದ ಬಂದಬವಣೆ ನಿಂದು ಛಲದಿ ನೂಕುತ! ಅಂದದಿಂದ ನೊಂದ ಮನಕೆ ಮುಂದೆ ಖುಷಿಯ ನೀಡುತ!! ಜೋಡಿಯಾಗಿ ಮೋಡಿಮಾಡಿ ಬಾಡಿಹೋದ ಮನವನು! ತೀಡಿತಿದ್ದಿ ನೋಡಿಕೊಳುತ ಮಾಡಿಜತನ ಜೀವವ!! ಕೆರೆಯ ನೀರು ತೆರೆಯಜೊತೆಗೆ ಮೆರೆದು ಸೊಗಸು ಸುಂದರ! ಬರುವ ಜನಕೆ ಕರವಬೀಸಿ ಬೆರಗು ಮಾಡಿ ನಲಿಯುವ!! ಸರಸದಿಂದ ವಿರಸ ಮರೆತು ಚಿರದಿ ಸುಖವ …

Read More »