Breaking News

ಕವನ

ಜಾಜಿ ಮೊಗ್ಗು

  ಜಾಜಿ ಮೊಗ್ಗು *********** ಹಸುರ ಗಿಡದಲಿ ಹೊಸೆದ ಜಾಜಿಯು ಬೆಸೆದಿದಿಬ್ಬನಿ ಹನಿಯ ಸೊಗಸಲಿ ಪಸಿಯನೀರಲಿ ಮೊಗ್ಗು ಕಳೆಯಲಿ ಘಮವ ಸೂಸುತಿದೆ! ನಸರಿಯೊಲವಿನುಡುಗೊರೆ ಕಾದಿದೆ ನುಸುಳಿಝೇಂಕರಿಸಿ ಹೀರಿ ಮಧವನು ಹೊಸತುಹೂವಾಗುತಲಿ ಧನ್ಯತೆ ಪಡೆವೆ ನೆನುತಲಿದೆ!! ತರಣಿಕಿರಣಕೆ ಹೊಳೆದು ಬೆಳಗಲಿ ಧರಣಿಯಂದಕೆ ಸೊಬಗ ನೀಡಿದೆ ತರುಣಿಮುಡಿಯಲಿ ನಲಿವೆನಿಲ್ಲವೆ ಶಿವನ ಪೂಜೆಯಲಿ! ಮೆರೆವೆ ದಿನದಲಿ ಮಾತ್ರ ಬದುಕಲಿ ಜರುಗುತಿರುವುದು ಭೂಮಿ ಮೇಗಡೆ ಬೆರೆತು ಬನದಲಿ ಜನರ ಮಧ್ಯದಿ ಕಾಲ ಕಳೆಯುವೆನು!! ಚೆಲುವೆ ಕನಸನು …

Read More »

:ರಂಗಿನೋಕುಕಳಿ

ಹೋಳಿ ಹಬ್ಬ ಕವನದ ಶೀರ್ಷಿಕೆ:ರಂಗಿನೋಕುಕಳಿ ಹೋಳಿಹುಣ್ಣಿಮೆಯ ಹಬ್ಬದಂದು ಮಕ್ಕಳೆಲ್ಲ ಸೇರಿ ಪಟ್ಟಿ ಎತ್ತಿ ಹಣ ತಂದು ರಂಗಿನೋಕುಳಿಯಾಡುತ ಖುಷಿಯಲಿ ಬೀದಿ ಬೀದಿ ಸುತ್ತಿ ಗೆಳೆಯರನುಡುಕುತಲಿ! ಹಸುರು,ಹಳದಿ,ನೀಲಿ,ಕೆಂಪು ನಾನಾ ಬಣ್ಣ ನೀರಿನಲಿ ಕಲಸಿ ಆಟವಾಡುವರಣ್ಣ ಮನದಿ ಮಧುರ ಭಾವದ ಸೆಳೆತ ಚೆನ್ನ ಒಲವಿನಿಂದ ಬೆಸೆಯುವವು ಮೈಮನ! ಹೋಳಿ ಕಾಮನ ಪ್ರೇಮ ಸಂಕೇತದ ಹಬ್ಬ ಪ್ರೇಮಿಗಳಿಬ್ಬರನು ನೆನೆವ ದಿನದ ಹಬ್ಬ ಗೊಂಬೆ ಮಾಡಿ ಅಂದು ಕೂಡಿಸುವರು ರಾತ್ರಿ ಗೋಳಾಡಿ ಸುಟ್ಟು ಹಾಕುವರು! ರಂಗು …

Read More »

ಶ್ರೀಗುರು ಪವಾಡ ಪುರುಷ ತಿಪ್ಪೇಸ್ವಾಮಿಯ ರಥ

  ಧರೆಯೊಳಗೆ ಮಾನವನಾಗಿ ಜನಿಸಿದ ಕೂಲಿಯಾಳಾಗಿ ನೆರೆಮನೆಯಲ್ಲಿ ದುಡಿದ ತಾಯಿ ಬಸುರಿಗೂ ಲೆಕ್ಕಹಾಕಿದ ಪವಾಡಗಳ ಸುರಿಮಳೆಯ ಸುರಿಸಿದ! ಕೊಬ್ಬರಿ ಸುಟ್ಟ ಬೆಳಕಿನಲಿ ಮುನ್ನಡೆದ ಫಣಿಯಪ್ಪನ ಮನೆಯಲಿ ಆಶ್ರಯಪಡೆದ ನಾಯ್ಕನಹಟ್ಟಿಯ ದೊರೆಯಾಗಿಮೆರೆದ ಬಿಳಿನೀರ ಚಿಲುಮೆಯ ಹರಿಸಿದ! ಸದೃಶ್ಯನಾಗಿ ಜಾತಿಭೇದತೊಲಗಿಸಿದ ಮಾರಮ್ಮನ ಗುಡಿಯಲಿ ಸ್ಥಾನವ ಬೇಡಿದ ಜೋಳಿಗೆ ಬೆತ್ತದಿ ಗುಡಿಯತುಂಬಿಸಿದ ಮಾರಮ್ಮಗೆ ತಡೆಯೊಡ್ಡಿ ತಾನೇ ನೆಲೆಸಿದ! ಐದುಗಾಲಿರಥ ಹರಕೆಕೂಸನು ದಾಟಿತು ನೆರೆದ ಜನದಲಿ ಮಗುವು ನಕ್ಕಿತು ಸತ್ತೆಮ್ಮಯ ಹಾಲನು ಕರೆದುಂಡ ತಿಪ್ಪೇಶ ಆಂಜನೇಯಗೆ …

Read More »

ಜೀವಜಲ

  ಜೀವಜಲ ******* ಜಲವು ಮುಖ್ಯವು ಜೀವಿ ಬದುಕಲು ಸೆಲೆಯುಕಾಣಲು ಹರುಷ ಮೈಮನ ಹಲವು ಜೀವಿಯು ನೀರಿನೊಳಗಡೆ ಬದುಕ ಕಂಡಿಹವು! ಮಲಿನವಾಗದೆ ನೋಡಿ ಜಲವನು ಜಲವೆ ಮನುಜನ ಬದುಕಿನಾಸರೆ ಕೊಳೆಯ ತೊಳೆಯುವ ಗಂಗೆ ಪವಿತ್ರ ಸಕಲ ಕಾರ್ಯದಲಿ!! ಹರಿವ ನದಿಗಳ ಶಬ್ಧ ಕೇಳಲು ಮರೆತು ಚಿಂತೆಯ ಮನಸು ನೆಮ್ಮದಿ ದೊರೆತು ಸಂತಸ ಕೇಳಿ ಜುಳುಜುಳು ನಾದ ಕಿವಿಗಳಿಗೆ! ಮೆರೆದು ಚೆಲುವನು ಸೆಳೆದು ಕಣ್ಮನ ಬೆರಗು ಮೂಡಿಸಿ ನೃತ್ಯ ಮಾಡಿತು ಮರೆಯದಂತಹ …

Read More »

ಹತ್ತಿ ಮರ

ಹತ್ ಬರುಡು ವೃಕ್ಷವು ವನದ ಮಧ್ಯದಿ ಸೊರಗಿನಿಂದಿದೆ ಹಸುರು ಕಾಣದೆ ಬೆರೆತು ಬಾನುವು ಕರುಣೆತೋರಿದೆ ತನ್ನ ನೆರಳನ್ನು! ಸೆರಗಿನಂತೆಯೆ ಮರಕೆಹಾಸಿದೆ ಬೆರಗು ಮೂಡಿದೆ ಕಂಡ ಮಂದಿಗೆ ಮರವು ಧವಳದಿ ಚೆಂದಗಾಣುತ ಹತ್ತಿಮರದಂತೆ!! ಬಾನು ಭವಿಯ ಸೊಬಗಕೂಟವು ತಾನು ನಲ್ಲೆಗೆ ಸೊಗಸನೀಡಿತು ಕಾನು ಸುಂದರ ಕಾಣುವಂತೆಯೆ ಮಾಡಿ ಚೆಂದದಲಿ! ಏನು ಬಣ್ಣವು ಶಿವನ ಲೀಲೆಯು ಬಾನ ನೀಲಿಯವರ್ಣ ಸಂಗಡ ಸನಿಹಹಸುರಿನ ಧರೆಯು ಬೆರೆಯುತ ಕಣ್ಗೆ ಕುಕ್ಕುತಲಿ!! ಕಲೆಯ ಬಲೆಯನು ಬೀಸಿನಿಂದನು ಚೆಲುವ …

Read More »

ಕವಿತೆಗೂ ರಾಗದ ಕೊರತೆ ನೀನಿಲ್ಲದೇ ನಗುವಿಗೂ ಭಾವದ ಕೊರತೆ ನೀನಿಲ್ಲದೇ

ಝಲ್ ಕವಿತೆಗೂ ರಾಗದ ಕೊರತೆ ನೀನಿಲ್ಲದೇ ನಗುವಿಗೂ ಭಾವದ ಕೊರತೆ ನೀನಿಲ್ಲದೇ ಸವಿ ಸಂಜೆಯಲಿ ಸೌಂದರ್ಯದ ಸುಳಿವಿಲ್ಲ ಮನಸಿಗೂ ಸೌಖ್ಯದ ಕೊರತೆ ನೀನಿಲ್ಲದೇ ವೇದನೆಯ ತಂಗುದಾಣವಾಗಿದೆ ಹೃದಯ ನಲಿವಿಗೂ ತಾಣದ  ಕೊರತೆ ನೀನಿಲ್ಲದೇ ಸಹಿ ಇರದ ಪತ್ರಗಳಾಗಿವೆ ಪ್ರತಿ ಹಗಲಿರುಳು ಕನಸಿಗೂ ಬಣ್ಣದ  ಕೊರತೆ ನೀನಿಲ್ಲದೇ ಕಣ್ಣೆವೆಗಳು ಮುನಿಸಾಗಿವೆ ನಿಶೆಯೊಡನೆ ಪ್ರಣತಿಗೂ ತೈಲದ ಕೊರತೆ ನೀನಿಲ್ಲದೇ ತಿರುವುಗಳ ಹಾಜರಿಯ ಭಯದಲ್ಲಿದೆ ಬಾಳು ಹೆಜ್ಜೆಗೂ ಧೈರ್ಯದ ಕೊರತೆ ನೀನಿಲ್ಲದೇ ಒಲವ ಹೊರತು …

Read More »