Breaking News

ಮೂಡಲಗಿ

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ- ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್

ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ *ಮೂಡಲಗಿ*: ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು ಪ್ರಪಂಚದಲ್ಲಿಯೇ ಬಲಾಢ್ಯ ರಾಷ್ಟ್ರವಾಗುತ್ತಿದ್ದು, ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಭಾರತ ದೇಶದ ಜನಪ್ರೀಯತೆಯನ್ನು ಕುಗ್ಗಿಸಲು ಕೆಲ ವಿರೋಧಿ ರಾಷ್ಟ್ರಗಳು ಕುತಂತ್ರ ನಡೆಸುತ್ತಿದ್ದು, ನರೇಂದ್ರ ಮೋದಿಯವರನ್ನು ಸೋಲಿಸಲು ಚೀನಾ ಸೇರಿದಂತೆ ಕೆಲ ವಿರೋಧಿ ರಾಷ್ಟ್ರಗಳು ಪಿತೂರಿ ನಡೆಸುತ್ತಿವೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದರು. ತಾಲೂಕಿನ ನಾಗನೂರ ಪಟ್ಟಣದ ಹೊರವಲಯದಲ್ಲಿರುವ …

Read More »

ಮರಿಯೆಪ್ಪ ಮರಿಯೆಪ್ಪಗೊಳ ಅವರಿಂದ ವಿಠ್ಠಲ ಹೊಸಮನಿ ಅವರಿಗೆ ಸನ್ಮಾನ

ಮೂಡಲಗಿ : ಪಟ್ಟಣದ ಸಾಯಿ ಬ್ಯಾಂಕ್ ನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನೂತನವಾಗಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆ ಯಾದ ವಿಠ್ಠಲ ಹೊಸಮನಿ ಅವರಿಗೆ ಸಾಯಿ ಬ್ಯಾಂಕ್ ಅಧ್ಯಕ್ಷ ಮರಿಯೆಪ್ಪ ಮರಿಯೆಪ್ಪಗೊಳ ಸನ್ಮಾನ ಮಾಡಿ ಮಾತನಾಡಿ  ವಿಠ್ಠಲ ಹೋಸಮಣಿ ಅವರು ತುಂಬಾ ವರ್ಷ ಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾ ಬಂದವರು ಇವರು ಎಲ್ಲಾ ಸಮಾಜದ ಜೊತೆ ಸಹೋದರಂತೆ ಒಡನಾಟ ಇಟ್ಟವರು ಇವರು …

Read More »

ಬಿಜೆಪಿ ಹೈ ಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಚುನಾವಣೆಯನ್ನು ಎದುರಿಸೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ

*ಬಿಜೆಪಿ ಟಿಕೆಟ್ ಯಾರಿಗೆ ನೀಡಿದ್ರೂ ಅವರ ಗೆಲುವಿಗೆ ಶ್ರಮಿಸುತ್ತೇವೆ.* ಮೂಡಲಗಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯು ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಗುರುವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಕಲ್ಲೋಳಿ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾ ಗೃಹದಲ್ಲಿ ಜರುಗಿದ ಅರಭಾವಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, …

Read More »

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ  ಪಿ ಎಸ್ ಐ ಹಾಲಪ್ಪ ವಾಯ್ ಬಾಲದಂಡಿ ಅವರು ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಸಿಪಿಐ ಹುದ್ದೆಗೆ  ಮುಂಬಡ್ತಿ ಹೊಂದಿ ಬೆಂಗಳೂರು  ಲೋಕಾಯುಕ್ತ  ಇಲಾಖೆಗೆ ಅಧಿಕಾರ ಸ್ವೀಕರಿಸಲು ಮಂಗಳವಾರ ಸಂಜೆ ತೆರಳುತ್ತಿರುವ ಸಂದರ್ಭದಲ್ಲಿ ಹಾಲಪ್ಪ ಬಾಲದಂಡಿ ಅವರನ್ನು ಮೂಡಲಗಿಯಲ್ಲಿ ಮೂಡಲಗಿ ಪತ್ರಕರ್ತರ ಬಳಗದಿಂದ ಸತ್ಕರಿಸಿ ಗೌರವಿಸಲ್ಲಾಯಿತು. ಈ ಸಂದರ್ಭದಲ್ಲಿ …

Read More »

ಮಲ್ಲಿಕಾರ್ಜುನ ಕಬ್ಬೂರ್ ಅವರಿಗೆ ಸಾಯಿ ಬ್ಯಾಂಕ್ ಅಧ್ಯಕ್ಷ ಮರಿಯಪ್ಪಗೋಳ ಅವರಿಂದ ಸನ್ಮಾನ

ಮೂಡಲಗಿ : ಪಟ್ಟಣದ ಸಾಯಿ ಬ್ಯಾಂಕ್ ನಲ್ಲಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಗೋಕಾಕ ಬೆಳಗಾವಿ ಜಿಲ್ಲೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆ ಯಾದ ಮಲ್ಲಿಕಾರ್ಜುನ ಕಬ್ಬೂರ್ ಅವರಿಗೆ ಸತ್ಕರಿಸಿ ಮಾತನಾಡಿದ ಸಾಯಿ ಬ್ಯಾಂಕ್ ಅಧ್ಯಕ್ಷ ಮರಿಯಪ್ಪ ಮಾರಿಯೆಪ್ಪಗೋಳ ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಗೋಕಾಕ, ಬೆಳಗಾವಿ ಜಿಲ್ಲೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಮಲ್ಲಿಕಾರ್ಜುನ ಭೀಮಪ್ಪಾ ಕಬ್ಬೂರ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ನಮ್ಮ …

Read More »

ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

ಮೂಡಲಗಿ: ಪಟ್ಟಣದ ತಾ.ಪಂ ಕಾರ್ಯಲಯದಲ್ಲಿ ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿಗೆ ಚಾಲನೆ ನೀಡಿದರು. ಸ್ವೀಪ್ ಸಮೀತಿಯ ಅಧ್ಯಕ್ಷ ಹಾಗೂ ತಾ.ಪಂ ಇಒ ನವೀನಪ್ರಸಾದ ಕಟ್ಟಿಮನಿ ಮತದಾನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೋಬ್ಬರು ತಮ್ಮ ಮತ ನೀಡುವ ಮೂಲಕ ಹಕ್ಕು ಚಲಾಯಿಸಿ ತಮ್ಮ ಅಕ್ಕ ಪಕ್ಕದಲ್ಲಿರು ಅರ್ಹ ಮತದಾರಿಗೆ ಮತದಾನ ಮಾಡಲು ಜಾಗೃತಿ ಮೂಡಿಸಬೇಕೆಂದರು. ಈ ಸಮಯದಲ್ಲಿ ತಾ.ಪಂ ಸಹಾಯಕ ನಿರ್ದೇಶಕರಾದ …

Read More »

ಈ ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ: ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಪ್ರತಿ ಮತಗಟ್ಟೆಗಳಲ್ಲಿ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ಅತಿ ಶಿಸ್ತಿನಿಂದ ಮಾಡುವಂತೆ ಶಾಸಕ ಮತ್ತು ಕ.ಹಾ.ಮ. ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಶನಿವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಬಿಜೆಪಿ ಅರಭಾವಿ ಮಂಡಲ ಏರ್ಪಡಿಸಿದ್ದ “ಗಾಂವ-ಚಲೋ ಅಭಿಯಾನ”ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನರಿಗೆ ಹತ್ತಿರವಾಗುವ ಯೋಜನೆಗಳನ್ನು ಜನರ …

Read More »

ಮೂಡಲಗಿಯಲ್ಲಿ ಐದು ಕೋಟಿ ರೂಪಾಯಿ ವೆಚ್ಚದ ಚರ್ಚ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಮೂಡಲಗಿಯಂತಹ ಪಟ್ಟಣ ಪ್ರದೇಶದಲ್ಲಿ ದುಡ್ಡು ನೀಡಿದರೂ ನಿವೇಶನಗಳು ಸಿಗದ ಇಂದಿನ ದಿನಗಳಲ್ಲಿ ಚರ್ಚ ನಿರ್ಮಾಣಕ್ಕೆ ೧೭ ಗುಂಟೆ ನಿವೇಶನವನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾದ ಮರೆಪ್ಪ ಮರೆಪ್ಪಗೋಳ ಅವರ ಸಾಮಾಜಿಕ ಕಾರ್ಯಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಪಟ್ಟಣದ ರಾಜೀವ ಗಾಂಧಿ ನಗರದಲ್ಲಿ ಸುಮಾರು ೫ ಕೋ. ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚರ್ಚ್ ನಿರ್ಮಾಣ ಕಾಮಗಾರಿಗೆ ಬುಧವಾರದಂದು ಗುದ್ದಲಿ …

Read More »

ಹಳಗನ್ನಡ ಸಾಹಿತ್ಯ ರಸಗ್ರಹಣ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಪಿ. ನಾಗರಾಜು ಅಭಿಮತ

ಸಾಹಿತ್ಯ ಬದುಕಿನ ಮೌಲ್ಯಗಳನ್ನು ಒಳಗೊಂಡಿದೆ. ಮೂಡಲಗಿ: ಹಳಗನ್ನಡ ಸಾಹಿತ್ಯ ಪರಂಪರೆಯಲ್ಲಿ ಅದ್ಭುತವಾದ ಮಾಹಾಕಾವ್ಯಗಳು ಸೃಷ್ಠಿಯಾಗಿದೆ. ಅವುಗಳನ್ನು ಪ್ರಸ್ತುತ ವಿಧ್ಯಮಾನದಲ್ಲಿ ಗ್ರಹಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ನಾಗರಾಜು ಹೇಳಿದರು. ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಹಳಗನ್ನಡ ಸಾಹಿತ್ಯ ರಸಗ್ರಹಣ ಎಂಬ ವಿಶೇಷ ಉಪನ್ಯಾಸ …

Read More »

ಇಂದು ವಿದ್ಯುತ್ ವ್ಯತ್ಯಯ

ಮೂಡಲಗಿ : 110ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿಯಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಜ.23 ಮಂಗಳವಾರದಂದು ಕೈಗೊಳ್ಳಲು ಉದ್ದೇಶಿಸಿರುವುದರಿಂದ 110ಕೆವ್ಹಿ ಮೂಡಲಗಿ ವಿದ್ಯುತ್ ವಿಧಾನ ಕೇಂದ್ರದಿಂದ ಸರಬರಾಜು ಆಗುವ ಮೂಡಲಗಿ ಪಟ್ಟಣ ಮತ್ತು ಗುರ್ಲಾಪೂರ ಪಟ್ಟಣ ಹಾಗೂ ಎಲ್ಲಾ 11ಕೆವ್ಹಿ ನೀರಾವರಿ ಪಂಪ್ಸೆಟ್ ಮಾರ್ಗಗಳಲ್ಲಿ ಮತ್ತು 110ಕೆವ್ಹಿ ನಾಗನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ನಾಗ್ನೂರ್ ಪಟ್ಟಣ ಮತ್ತು ಎಲ್ಲಾ 11ಕೆವ್ಹಿ ನೀರಾವರಿ ಪಂಪ್ಸೆಟ್ ಮಾರ್ಗಗಳಲ್ಲಿ ಮುಂಜಾನೆ …

Read More »