ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಹಾಗೂ ಭಾಗ್ಯ ಶ್ರೀ ಗ ಹಳ್ಳಿಕೇರಿಮಠ ರವರ ನಾಡು ನುಡಿಯ ಸೇವೆಯನ್ನು ಪರಿಗಣಿಸಿ ಕವಿತಾ ಮೀಡಿಯಾ ಸೊರ್ಸ್ ಲಿಮಿಟೆಡ್ ಕೊಪ್ಪಳ ಮಾಧ್ಯಮ ಲೋಕದಲ್ಲಿ ಕಲೆ ಕನ್ನಡ ಕಲಾವಿದರ ದ್ವನಿಯಾಗಿ ಸಾಧಕರ ಸುದ್ಧಿಯ ಮೂಲಕ ಮುನ್ನುಗ್ಗುತ್ತಿರುವ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ತನ್ನ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಜಿ.ಎಮ್ .ರಿಜಾಯ್ಸ್ ಮಲ್ಲೇಶ್ವರಂ ದಲ್ಲಿ ಹಮ್ಮಿಕೊಂಡಿದ್ಧ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ “ನಮ್ಮ ಸ್ಟಾರ್ಸ್” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಂಸ್ಥಾಪಕರಾದ ಶ್ರೀ ಬಿ.ಎನ್. ಹೊರಪೇಟಿ
ಉದ್ಯಮಿಗಳಾದ ಶ್ರೀ ದೀಪಕ್ ರಾಠೋಡ,ಕೊಪ್ಪಳದ ಹಿರಿಯ ಸಾಹಿತಿಗಳಾದ ಶ್ರೀ ಮಹಾಂತೇಶ ಮಲ್ಲನಗೌಡರ,ಮಿಸೆಸ್ ಸೌತ್ ಇಂಡಿಯಾ 2021ರ ವಿನ್ನರ್ ಶ್ರೀಮತಿ ಶಿಲ್ಪಾ ಸುಧಾಕರ್,ಚಲನಚಿತ್ರ ನಟರಾದ ಸಂಗಮೇಶ ಉಪಾಸೆ,ಗಂಗಾವತಿಯ ಸಮಾಜ ಸೇವಕರಾದ ಶ್ರೀ ಸಂಗಮೇಶ ಸುಗ್ರಿವಾ,ಸಿಂದನೂರಿನ ಡಾ.ನಾಗವೇಣಿ ಪಾಟೀಲ,ಹಿರಿಯ ಸಾಹಿತಿಗಳಾದ ಶ್ರೀ ಷನ್ಮುಖಯ್ಯ ತೋಟದ,ಚಲನಚಿತ್ರ ಕಲಾವಿದರಾದ ಶ್ರೀ ಮೈಸೂರು ರಾಮಾನಂದ ,ಶ್ರೀಮತಿ ಮಾಲತಿ ಶ್ರೀ ಮೈಸೂರು ,ಶ್ರೀಮತಿ ರೇಖಾದಾಸ,ಡಾ.ಎನ್.ಬಿ ಜಯಪ್ರಕಾಶ್, ಕನ್ನಡಪರ ಹೋರಾಟಗಾರ ಶ್ರೀ ರೂಪೇಶ ರಾಜಣ್ಣ,ಬೆಂಗಳೂರಿನ ಸಹಾಯಕ ಪೋಲಿಸ್ ಆಯುಕ್ತರಾದ ಶ್ರೀ ಎ ಬಿ ಸುಧಾಕರ,ಶಿವಗಂಗೆ ಗವಿಮಠದ ಪ.ಪೂ.ಶ್ರೀ ಷ.ಬ್ರ.ಡಾ.ಮಲಯಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಗಜೇಂದ್ರಗಡದ ಕಾಲಜ್ಞಾನ ಮಠದ ಶ್ರೀ ಬ್ರಹ್ಮ ಸದ್ಗರು ಶ್ರೀ ಶರಣ ಬಸವ ಮಹಾಸ್ವಾಮಿಗಳು, ಬಳ್ಳಾರಿಯ ಪ.ಪೂ ಕಲ್ಯಾಣ ಮಹಾಸ್ವಾಮಿಗಳು, ನುಗ್ಗಿಹಳ್ಳಿಯ ಶ್ರೀ ಷ್.ಬ್ರ.ಡಾ.ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಸೇರಿದಂತೆ ನಾಡಿನ ಸಾಹಿತಿಗಳು ಕಲಾವಿದರು ಪಾಲ್ಗೊಂಡಿದ್ಧರು.
ಬಿ.ಎನ್ ಹೊರಪೇಟಿ. ಅಧ್ಯಕ್ಷರು ಕವಿತಾ ಮಿಡಿಯಾ ಸೊರ್ಸ್ ಲಿಮಿಟೆಡ್ ಕೊಪ್ಪಳ -ಕರ್ನಾಟಕ. 9980248730,9663132663.