Breaking News

ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Spread the love

 ಘಟಪ್ರಭಾ :  ನಗರದಲ್ಲಿ ತನಗೆ ಸಿ.ಎ (Chartered Accountants) ಮಾಡಲು ಮನಸಿಲ್ಲ ಎಂದು ಹೇಳಿ ಕಳೆದ ನಾಲ್ಕು ದಿನಗಳ ಹಿಂದೆ ತನ್ನ ಮನೆಗೆ ಬಂದಿದ್ದ ಯುವತಿ ಗುರುವಾರ ಸಾಯಂಕಾಲ ಮನೆಯಲ್ಲಿ ಫ್ಯಾನ ಒಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದಿದೆ.
ಮೃತ ದುರ್ದೈವಿ ಯುವತಿಯನ್ನು ಶೆರ್ಲಿ ದನಂಪಾಲ ಕುರಪಾಟಿ (19) ಎಂದು ಹೇಳಲಾಗುತ್ತಿದೆ. ಯುವತಿ ತಂದೆ-ತಾಯಿಯೊಂದಿಗೆ ಪಟ್ಟಣದ ರೇಲ್ವೆ ಕ್ವಾಟರ್ಸ್ ದಲ್ಲಿ ವಾಸವಾಗಿದರೆಂದು ತಿಳಿದು ಬಂದಿದೆ.
ಯುವತಿ ನಿನ್ನೆ ಸಾಯಂಕಾಲ 5-6 ಗಂಟೆಯ ಸುಮಾರಿಗೆ ಮನೆಯಲ್ಲಿ ಫ್ಯಾನಿಗೆ ನೇತಾಡುವುದನ್ನು ಕಂಡ ಆಕೆ ತಮ್ಮ ಕೂಡಲೆ ತಂದೆಯನ್ನು ಕೆರೆ ತಂದಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು ಕೂಡ ಯುವತಿ ಮೃತಪಟ್ಟಿದ್ದಾಳೆ.
ಶೆರ್ಲಿ ತನ್ನ ಮನಸ್ಸಿನಿಂದಲೆ ಸಿ. ಎ. ಮಾಡುತ್ತೇನೆಂದು ಆಂದ್ರದ ಗುಂಟೂರದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಏಕೋ ಅಲ್ಲಿ ನನಗೆ ಹೊಂದಾಣಿಕೆ ಆಗುತ್ತಿಲ್ಲ, ಇಲ್ಲೆ ಇಂಜಿನಿಯರಿಂಗ ಓದುತ್ತೇನೆಂದು ಮನೆಯಲ್ಲಿ ತಿಳಿಸಿದ್ದಾಳೆ. ಮನೆಯವರು ಸಹ ಆಯಿತು ಓದು ಹಾಗಾದರೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ತನ್ನಿಂದ ಸಿ.ಎ ಓದಲು ತುಂಬಾ ಹಣ ಖರ್ಚು ಆಯಿತಲ್ಲಾ ಎಂದು ಮಾನಸಿಕವಾಗಿ ಮನನೊಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಘಟಪ್ರಭಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Ad9 News

Check Also

ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ. ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Spread the love ಗೋಕಾಕ್- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಎಲ್ಲ ಕ್ಷೇತ್ರಗಳಿಗೆ ಅನುದಾನದ ಮಹಾಪೂರವೇ ಹರಿದು …