Breaking News

ದೇಶದ ಜನತೆಗೆ ಅಚ್ಚೆ ದಿನ್ ಬದಲಾಗಿ ಸಮಾದಿ ದಿನ್ ನೀಡಿದ್ದಾರೆ ಮೋದಿ

Spread the love

 

ಮೋದಿಯವರು ಚಹಾ ಮಾರಿದರೆ ರೈತರಿಗೆ ಇವತ್ತು ಬೀದಿಯಲ್ಲಿ ತಮ್ಮ ಹಕ್ಕಿಗಾಗಿ ಹೊರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ಗೋಕಾಕದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಗೋಕಾಕ ಘಟಕದಿಂದ ಕರೆದ ಪತ್ರಾಕಗೊಷ್ಟಿಯಲ್ಲಿ ರಾಜ್ಯಾದಕ್ಷ. ಚೂನಪ್ಪ ಪೂಜೇರಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ

ದೇಶದ ಜನತೆಗೆ ಅಚ್ಚೆ ದಿನ್ ಬರುತ್ತೆ ಎಂಬ ಉದ್ದೇಶದಿಂದ ನಾವೆಲ್ಲರೂ ಬಿಜೆಪಿಗೆ ಮತ ಹಾಕಿದ್ದಕ್ಕೆ ಇವತ್ತು ನಮಗೆ ಅಚ್ಚೆ ಬದಲಾಗಿ ಸಮಾದಿ ದಿನ್ ತಂದು ಬಿಟ್ಟಿದ್ದಾರೆ ಎಂದು ಮೋದಿಯವರ ವಿರುದ್ಧ ಹರಿಹಾಯ್ದರು.

ಅದಲ್ಲದೆ ಮೋದಿಯವರು ಅದಾನಿ, ಅಂಬಾನಿಯಂತಹ ಕಾರ್ಪೋರೆಟರಗಳಿಗೆ ಚುನಾವಣೆಯಲ್ಲಿ ಗೆದ್ದು ಬಂದ ನಂತರ ನಿಮ್ಮ ಕೈಗೆ ದೇಶ ಕೊಡುತ್ತೇನೆಂದು ಮಾತು ಕೊಟ್ಟಿರಬಹುದು ಅದಕ್ಕಾಗಿಯೆ ಮೋದಿಯವರು ರೈತ ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆಯುತ್ತಿಲ್ಲವೆಂದು ಮಾದ್ಯಮದವರಿಗೆ ಉತ್ತರಿಸಿದರು.

ಮೋದಿಯವರು ಹಿಂದುತ್ವ ಎಂಬ ಅಜೆಂಡಾ ಇಟ್ಟುಕೊಂಡು ಇವತ್ತು ನಮ್ಮನ್ನೆ ದಿವಾಳಿ‌ ಮಾಡಿದ್ದಾರೆ,ಅನಾವಶ್ಯಕವಾದ ಕಾಯಿದೆಗಳನ್ನು ತಂದು ಹಳ್ಳಿಗಳಲ್ಲಿ ನೆಮ್ಮದಿ ಜೀವನ ಮಾಡುತ್ತಿರುವ ನಮ್ಮ ಜೀವನವನ್ನು ಹಾಳು ಮಾಡುತಿದ್ದಾರೆ, ಪ್ರಣಾಳಿಕೆಯಲ್ಲಿ ಹೇಳಿದವುಗಳನ್ನು ಅವರೆ ಕಾರ್ಯರೂಪಕ್ಕೆ ತರುತ್ತಿಲ್ಲ ಎಂದರು.

ಇದೆ ಸಮಯದಲ್ಲಿ ಬರುವ ಉಪಚುನಾವಣೆಯಲ್ಲಿ ಮತದಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಾರ್ಚ 31 ರಂದು ಬೆಳಗಾವಿಯಲ್ಲಿ ನಡೆಯುವ ರೈತ ಸಮಾವೇಶದಲ್ಲಿ ರಾಜ್ಯದ ರೈತ ಮುಖಂಡರ ಜೊತೆ ಚರ್ಚಿಸಿ ಮತ ಚಲಾಯಿಸುವ ಬಗ್ಗೆ ತಿರ್ಮಾನ ಮಾಡುತ್ತೇವೆ,ಪಕ್ಷ ವಿರೋದ ಮಾಡಿಯಾದರು ರೈತ ವಿರೋದ ಕಾಯಿದೆಗಳನ್ನು ತಂದಿರುವ ಪಕ್ಷಕೆ ಲೊಕಸಭಾ ಉಪಚುನಾವಣೆಯಲ್ಲಿ ನೊಟಾ ಮತ ಚಲಾಯಿಸುತ್ತೇವೆಂದು ಹೇಳಿದರು.

ಈ ಸಂದರ್ಭದಲ್ಲಿ ಗೋಕಾಕ ತಾಲೂಕಿನ ಅದ್ಯಕ್ಷರಾದ ಮಂಜು ಪೂಜೇರಿ, ಇನ್ನೂಳಿದ ಮುಖಂಡರು ಉಪಸ್ಥಿತರಿದ್ದರು.

 


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …