ಗೋಕಾಕ: ಭೂಮಿಯನ್ನು ಉತ್ತಿಬಿತ್ತಿ ಕೃಷಿ ಸಂಸ್ಕøತಿಯನ್ನು ಆರಂಭ ಮಾಡಿದ ಹೆಣ್ಣೇ ಕಾಡು ಮಾನವನನ್ನು ನಾಡು ಮಾನವನನ್ನಾಗಿ ರೂಪಿಸಿದಳು. ಈ ಸಂಸ್ಕøತಿಯನ್ನು ಬಿಂಬಿಸುವ ಹಾಡು, ಕಥೆ, ಗಾದೆ, ಒಗಟು, ಒಡಪು, ಒಡಬುಗಳನ್ನು ತೋಂಡಿಯಾಗಿ ರಚಿಸಿದ ಹೆಣ್ಣೇ ಜನಪದ ಸಾಹಿತ್ಯದ ಜನನಿ ಎಂದು ಜಾನಪದತಜ್ಞ ಡಾ| ಸಿ.ಕೆ.ನಾವಲಗಿ ಅಭಿಪ್ರಾಯಿಸಿದ್ದಾರೆ.
ಅವರು, ಕರ್ನಾಟಕ ಜಾನಪದ ಪರಿಷತ್ತು, ಬೆಳಗಾವಿ ಜಿಲ್ಲಾ ಘಟಕ, ಜಾಗೃತಿ ಮಹಿಳಾ ಸಮಾಜ ಮತ್ತು ‘ಭೂಮಿ ಬಳಗ’- ಜಾನಪದ ಮಹಿಳಾ ವೇದಿಕೆಗಳು, ಜಂಟಿಯಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು, ನಗರದ ಬಣಗಾರ ಓಣ ಯ ಶ್ರೀ ಶಂಕರಲಿಂಗ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಸಜೀವತೆಗೆ ಜನಪದ ತಾಯಿ ಹಾಡಿನ ಹಾಲನ್ನೇ ಕುಡಿಯಬೇಕು. ಅದಕ್ಕಾಗಿ ತವರುನಾಡಿನ ಹಳ್ಳಿಗೆ ಮರಳಬೇಕಾಗಿದೆ; ಜನರೊಡನೆ ಜನರಾಗಬೇಕಾಗಿದೆ. ಕೃಷಿಕಾಯಕದಲ್ಲಿ ತೊಡಗಬೇಕಾಗಿದೆ. ಹಳ್ಳಿಯ ಭಾಷೆ, ಆ ಜೀವನ, ಆ ಸಂಸ್ಕøತಿ, ಆ ಹಾಡು, ಆ ಛಂದಸ್ಸು ಮತ್ತೆ ಪುನರುತ್ಥಾನಗೊಂಡು ಹೊಳಪುಗೊಳ್ಳಬೇಕು. ಇದು ಇಡೀ ಪ್ರಪಂಚಕ್ಕೆ ಅನ್ವಯಿಸುವ ವಿಚಾರವೆಂದು ಕಜಾಪ ಜಿಲ್ಲಾಧ್ಯಕ್ಷ ಡಾ| ಸಿ.ಕೆ. ನಾವಲಗಿ ಮುಂದುವರಿದು ಮನೋಜ್ಞವಾಗಿ ಮಾತನಾಡಿದರು.
ಸ್ತ್ರೀರೋಗತಜ್ಞೆ ಡಾ|| ಮಂಗಲಾ ಸನದಿ ಮಾತನಾಡುತ್ತ -ನಮ್ಮಲ್ಲಿನ್ನೂ ಲಿಂಗತಾರತಮ್ಯವಿದೆ. ನಿತ್ಯ ಭ್ರೂಣ ಹತ್ಯೆ ನಡೆಯುತ್ತಿದೆ. ಗಂಡು-ಹೆಣ ್ಣನ ಸಂಖ್ಯೆಯಲ್ಲಿ ಏರುಪೇರು ಜಾಸ್ತಿಯಾಗುತ್ತಿದೆ ಎಂದು ಕಳವಳ ವ್ಯಕ್ತ ಮಾಡಿದರು. ಶಶಿಕಲಾ ಕೌತನಾಳಿ ಅಧ್ಯಕ್ಷಸ್ಥಾನದಿಂದ ಮಾತನಾಡುತ್ತ, ಇಂದು ‘ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗುತ್ತಿದೆ” ಎಂದು ಸಂತಸ ಹಂಚಿಕೊಂಡರು.
‘ಅವ್ವ’ ಪ್ರಶಸ್ತಿ ಪುರಸ್ಕøತೆ ಪ್ರೊ.ಶಕುಂತಲಾ ಹಿರೇಮಠ, ಆಜೂರೆ ಪ್ರತಿಷ್ಠಾನ ಪ್ರಶಸ್ತಿ ಪುರಸ್ಕøತೆ ಪ್ರೊ.ವಿದ್ಯಾ ರೆಡ್ಡಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ವಿನೂತಾ ನಾವಲಗಿ, ಶೈಲಾ ಮುರ್ತೆಲಿ, ಸುನಂದಾ ಹೆಬ್ಬಳ್ಳಿ, ಮಮತಾ ಮಟ್ಟಿ, ಶಿವಲೀಲಾ ಆಲತಗಿ, ರೂಪಾ ಮುರ್ತೆಲಿ ಉಪಸ್ಥಿತರಿದ್ದರು.
ತೇಜಸ್ವಿನಿ ಮುರ್ತೆಲಿ-ದೀಪಾ ಸಂಕಪಾಳ, ರಾಜೇಶ್ವರಿ ಆಲತಗಿ, ಜ್ಯೋತಿ ಕುರೇರ, ಶಿವಲೀಲಾ ಆಲತಗಿ-ಸಂಗಡಿಗರು, ವಿಜಯಲಕ್ಷ್ಮೀ ಹಿರೇಮಠ, ಶೈಲಾ-ರೂಪಾ ಮುರ್ತೆಲಿ, ಗಿರಜಾ ದೊಡಮನಿ-ರಾಜೇಶ್ವರಿ ಆಲತಗಿ, ಮೀನಾಕ್ಷಿ ಗುಲ್ಲ, ಪುಷ್ಪಾ ಹಿಂಡಿಹೊಳಿ-ಶಶಿಕಲಾ ಕೌತನಾಳಿ, ಮೊದಲಾದ ಕಲಾವಿದೆಯರು ಜಾನಪದ ಹಾಡು, ನೃತ್ಯ, ಕೋಲಾಟ, ಹಾಸ್ಯ, ಸೋಬಾನೆ, ಮೋಜಿನವೇಷ ಮುಂತಾದ ಜಾನಪದ ವೈವಿಧ್ಯ ಕಾರ್ಯಕ್ರಮ ನೀಡಿದರು.
ಜ್ಯೋತಿ ದೊಡ್ಡಣ್ಣವರ ಪ್ರಾರ್ಥಿಸಿದರು, ರಾಜಶ್ವರಿ ಆಲತಗಿ ಪರಿಚಯಿಸಿದರು, ಗಿರಿಜಾ ದೊಡಮನಿ ನಿರೂಪಿಸಿದರು, ಅಂಬಿಕಾ ಹಿಂಡಿಹೊಳಿ ವಂದಿಸಿದರು.
Check Also
ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?
Spread the love ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …