Breaking News

ಗೋಕಾಕದಲ್ಲಿ ಅಧಿಕಾರಿಗಳಿಂದಲೆ ಕೊರಾನಾ ನಿಯಮ ಉಲ್ಲಂಘನೆ

Spread the love

 

ಗೋಕಾಕ:ರಾಜ್ಯಾದ್ಯಾಂತ ಕೊರಾನಾದ ಒಂದು ನಿಯಮವಾದರೆ ಗೋಕಾಕದ ಅಧಿಕಾರಿಗಳಿಗೆ ಒಂದು ನಿಯಮಾನಾ,,??

 

ರಾಜ್ಯದಲ್ಲಿ ಎಲ್ಲಾ ಕಡೆಗು ಲಾಕ್ ಡೌನ್ ಮಾಡುಲು ಸರ್ಕಾರ ಆದೇಶ ಮಾಡಿದೆ ಆದರೆ ಈ ಆದೇಶಕ್ಕೆ ಇಲ್ಲಿ ಕವಡೆ ಕಾಶಿನ ಕಿಮ್ಮತ್ತು ಇಲ್ಲ ಯಾಕೆಂದರೆ ಇದು ಗೋಕಾಕ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಸರಕಾರ ಬಹುಶ ಬೇರೆನೆ ಕೊರಾನಾ ನಿಯಮದ ಮಾರ್ಗಸೂಚಿ ಜಾರಿ ಮಾಡಿದಂತೆ ಕಾಣುತ್ತಿದೆ.

ಹೌದು ಬೆಳಗಾವಿ ಜಿಲ್ಲೆ ಗೋಕಾಕ ಕರದಂಟಿಗೆ ಹೆಸರು ವಾಸಿ ಆದರೆ ಇಲ್ಲಿನ ಗೋಕಾಕ ತಹಸಿಲ್ದಾರ ಕಚೇರಿಯಲ್ಲಿರುವ ಉಪನೊಂದಣಿ ಅಧಿಕಾರಿಗೆ ಕೊರಾನಾ ನಿಯಮ ಅನ್ವಯವಾಗುವುದಿಲ್ಲ ಅಂತ ಕಾಣಿಸುತ್ತದೆ

ಇವತ್ತು ಕೊರಾನಾ 2 ನೆ ಅಲೆಯು ಸಾವಿನ ರೂಪದಲ್ಲಿ ವಕ್ಕರಿಸಿದೆ,ಅದಕ್ಕಾಗಿ ಸರ್ಕಾರ ಖಡ್ಡಾಯವಾಗಿ ಮಾಸ್ಕ್, ದರಿಸಬೇಕೆಂದು ಅಧಿಕಾರಿಗಳ ಮೂಲಕ ಜಾಗೃತಿ ಮೂಡಿಸುತ್ತಲೆ ಇದ್ದಾರೆ.

ಆದರೆ ಜಾಗೃತಿ ಮೂಡಿಸಬೇಕಾದ ಗೋಕಾಕ ತಹಸಿಲ್ದಾರ ಕಚೇರಿಯಲ್ಲಿಯೆ ಯಾವುದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರಾನಾ ಇಲ್ಲವೇನೋ ಎಂದು ವರ್ತಿಸುತಿದ್ದಾರೆ,

ಅಷ್ಟೆ ಯಾಕೆ ಇಲ್ಲಿರುವ ಹಿರಿಯ ಉಪನೊಂದಣಿ ಅಧಿಕಾರಿಗಳು ಸಹ ಮುಖದ ಮೇಲೆ ಅರ್ದ ಮಾಸ್ಕ ಹಾಕಿಕೊಂಡು ಕಾರ್ಯನಿರ್ಹಿಸುತಿದ್ದರು.

ಇದನ್ನೆ ಚಿತ್ರೀಕರಿಸಲು ಹೋದ ಮಾದ್ಯಮದವರ ಗುರುತಿನ ಚೀಟಿ ತೊರಿಸಲು ಕೇಳಿದ್ದಲ್ಲದೆ ಮಾದ್ಯಮದವರ ಜೊತೆಯಲ್ಲಿ ವಾಗ್ವಾದ ಮಾಡಿದ ಘಟನೆ ನಡೆಯಿತು.

ಒಟ್ಟಾರೆಯಾಗಿ ಕೊರಾನಾ ನಿಯಮ ಕೇವಲ ಜನಸಾಮಾನ್ಯರಿಗೆ ಮಾತ್ರನಾ ಅಥವಾ ಅಧಿಕಾರಿಗಳಿಗೂ ಇದೆನಾ ಎಂಬುದು ಗೋಕಾಕ ತಹಸಿಲ್ದಾರ ಕಚೇರಿಯಲ್ಲಿನ ವ್ಯವಸ್ಥೆ ನೋಡಿ ಇಂತವರಿಂದಲೆ ಕೊರಾನಾ ಸಮುದಾಯಕ್ಕೆ ಹರಡುತ್ತಿರುವುದು ನಿಜವೆಂದು ಮಾತನಾಡುತಿದ್ದಾರೆ.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …