ಗೋಕಾಕ : ಸಮಗ್ರ ಅಭಿವೃದ್ಧಿಗಾಗಿ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಕಲ್ಯಾಣಪರ ಹಾಗೂ ಪ್ರಗತಿಪರ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿರುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಮಂಗಳವಾರ ಸಂಜೆ ಆರ್‍ಡಿಪಿಆರ್ ಇಲಾಖೆಯ 25 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮೆಳವಂಕಿ ಗ್ರಾಮ ಪಂಚಾಯತಿ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಜನೋಪಯೋಗಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೋವಿಡ್-19 ನಮ್ಮನ್ನು ಕಳೆದ ಒಂದೂವರೆ ವರ್ಷದಿಂದ ಕಾಡುತ್ತಿದೆ. ಮಹಾಮಾರಿಯ ನಿಯಂತ್ರಣಕ್ಕಾಗಿ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಅಧಿಕಾರಿಗಳು ಮತ್ತು ಟೀಂ ಎನ್‍ಎಸ್‍ಎಫ್ ಅವಿರತವಾಗಿ ಕ್ಷೇತ್ರದಲ್ಲಿ ಸಂಚರಿಸಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇಷ್ಟಾದರೂ ಸಾರ್ವಜನಿಕರು ಇನ್ನೂ ಕೊರೋನಾ ಇಲ್ಲ ಎಂಬಂತೆ ಮಾರ್ಗಸೂಚಿಗಳನ್ನು ಬದಿಗಿಟ್ಟು ಓಡಾಡುತ್ತಿದ್ದಾರೆ. ಕೋವಿಡ್ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ತುಂಬಾ ಇಳಿಮುಖವಾಗಿದೆ. ಇದರರ್ಥ ಕೋವಿಡ್ ಇಲ್ಲ ಎಂಬುವುದನ್ನು ತಿಳಿಯಬಾರದು. ದೇವರ ದಯೆಯಿಂದ ನಾವೆಲ್ಲರೂ ಮೂರನೇ ಅಲೆ ಬರಬಾರದು ಎಂಬುದನ್ನು ಪ್ರಾರ್ಥಿಸಿಕೊಳ್ಳೋಣ. ಸರ್ಕಾರ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದು ಹೇಳಿದರು.
ಮೆಳವಂಕಿ ಗ್ರಾಮ ಪಂಚಾಯತಿ ವ್ಯಾಪ್ತಿ ಮುಖಂಡರು ಅಭಿವೃದ್ಧಿ ಕಾರ್ಯಗಳಿಗಾಗಿ ಒಂದಾಗಿ ಒಗ್ಗಟ್ಟಾಗಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದ ಅವರು, ಅಭಿವೃದ್ಧಿ ಕಾರ್ಯಗಳಲ್ಲಿ ಒಂದಾಗಿದ್ದರೆ ಮಾತ್ರ ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಮೆಳವಂಕಿ ಗ್ರಾಪಂ ಅಧ್ಯಕ್ಷೆ ಯಲ್ಲವ್ವಾ ಶಿಂತ್ರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಮುಖಂಡರಾದ ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ಈರಪ್ಪ ಬೀರನಗಡ್ಡಿ, ಸತ್ತೆಪ್ಪ ಬಬಲಿ, ಅಲ್ಲಪ್ಪ ಕಂಕಣವಾಡಿ, ದೊಡ್ಡಪ್ಪ ಕರೆಪ್ಪನವರ, ನಾಗಪ್ಪ ಮಂಗಿ, ರಾಮಣ್ಣಾ ಕಾಪಸಿ, ರಮೇಶ ಬೀರನಗಡ್ಡಿ, ಅಡಿವೆಪ್ಪ ಕಂಕಾಳಿ, ಜಿಪಂ ಇಂಜನೀಯರಿಂಗ್ ಉಪವಿಭಾಗದ ಎಇಇ ಉದಯಕುಮಾರ ಕಾಂಬಳೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Check Also
ಕೌಜಲಗಿಯ ಕಳ್ಳಿಗುದ್ದಿ ಕ್ರಾಸ್-ಕೆವ್ಹಿಜೆ ಬ್ಯಾಂಕ್‍ವರೆಗಿನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love ಗೋಕಾಕ: ರಸ್ತೆಯ ಅಕ್ಕ-ಪಕ್ಕದ ಸಾರ್ವಜನಿಕರ ಆಶಯದಂತೆ ಕೌಜಲಗಿ-ಕಳ್ಳಿಗುದ್ದಿ ಕ್ರಾಸದಿಂದ ಕೆವ್ಹಿಜಿ ಬ್ಯಾಂಕ್‍ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಶೀಘ್ರದಲ್ಲಿಯೇ …