ಮೂಡಲಗಿ: ಪ್ರಸಕ್ತ ಸಾಲಿನ 2022 ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ 81 ಪ್ರೌಢ ಶಾಲೆಗಳ 26 ಪರೀಕ್ಷಾ ಕೇಂದ್ರಗಳಲ್ಲಿ ಮೂಡಲಗಿ ವಲಯದ 7041 ಪರೀಕ್ಷೆ ಎದುರಿಸುತ್ತಿದ್ದು, ಪರೀಕ್ಷೆಗಳು ಸುಗಮ ರೀತಿಯಲ್ಲಿ ಸಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅವರು ಗುರುವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಪೂರ್ವ ತಯಾರಿ ಕುರಿತು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯುವಂತೆ ಪರೀಕ್ಷಾ ಮಂಡಳಿಯ ಮಾರ್ಗದರ್ಶನದಂತೆ ಅಧಿಕ್ಷಕರು, ಉಪದಿಕ್ಷಕರು, ಸ್ಥಾನಿಕ ಜಾಗೃತದಳ, ಅನ್ಯ ಇಲಾಖೆಯ ಜಾಗೃತದಳಗಳು, ಪ್ರಶ್ನೆ ಪತ್ರಿಕೆ ಸರಬರಾಜು ಮಾರ್ಗಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲದೆ ಮೋಬೈಲ್ ಸ್ವಾಧಿನ ಅಧಿಕಾರಿಗಳನ್ನು ನಿಯಮಿಸಿದ್ದು ಅನಗತ್ಯ ಅಡಚನೆಗಳಿಗೆ ತಡೆಯೊಡ್ಡಲಾಗಿದೆ. ಒಟ್ಟು 353 ಪರೀಕ್ಷಾ ಕೊಠಡಿಗಳಿದ್ದು ಅಗತ್ಯ ಪೋಲಿಸ್ ಬಂದೋಬಸ್ತ ನಿಯಮಿಸಲಾಗಿದೆ ಎಂದರು.
ಕೋವಿಡ್-19 ಅನುಸಾರ 26 ಜನ ದೈಹಿಕ ಶಿಕ್ಷಕರನ್ನು ಎಸ್.ಒ.ಪಿ ನಿಯಮಗಳ ಪಾಲನೆಗೆ ನಿಯೋಜಿಸಲಾಗಿದೆ. ಆರೋಗ್ಯದ ಹಿತದೃಷ್ಠಿಯಿಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯಮಿಸಲಾಗಿದೆ. ಅನ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಸೇಕ್ಷನ್ 144 ಜಾರಿಯಲ್ಲಿದ್ದು ಸಾರ್ವಜನಿಕರು ಸಹಕರಿಸಬೇಕು. ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಗಾಳಿ ಬೆಳಕಿನ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಪರೀಕ್ಷೆಗಳಲ್ಲಿ ಯಾವ ಅಹಿತಕರ ಘಟನೆ ಜರುಗದಂತೆ ಪರೀಕ್ಷಾ ಮಂಡಳಿಯ ನಿಯಮಾನುಸಾರ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಪರಿವೀಕ್ಷಣಾಧಿಕಾರಿ ಜುನೇದ ಪಟೇಲ್, ಎಸ್.ಎಸ್.ಎಲ್.ಸಿ ತಾಲೂಕಾ ನೋಡಲ್ ಅಧಿಕಾರಿ ಸತೀಶ್.ಬಿ,.ಎಸ್, ಇಸಿಒ ಟಿ ಕರಿಬಸವರಾಜು, ಕಛೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.