ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಬಿ.1.1529 ಕೊರೊನಾ ರೂಪಾಂತರಿ ವೈರಸ್ ಸಾಮಾನ್ಯ ಕೊರೊನಾಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಮತ್ತು ಇಮ್ಯುನಿಟಿ ಪವರ್ ನಿಂದ ತಪ್ಪಿಸಿಕೊಳ್ಳುವ ಚಾಣಕ್ಷವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರೊಫೆಸರ್ ಗಗನ್ ದೀಪ್ ಕಂಗ್ ಮುನ್ನೆಚ್ಚರಿಸಿದ್ದಾರೆ.
ಆಫ್ರಿಕಾದ ಬೊಸ್ವಾನಾದಲ್ಲಿ ಮೊದಲ ಬಾರಿ ಪತ್ತೆಯಾದ ಕೊರೊನಾ ರೂಪಾಂತರಿ ವೈರಸ್ ಗೆ ಓಮ್ರಿಕಾನ್ ಹಲವಾರು ದೇಶಗಳಲ್ಲಿ ಹರಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 9ರಂದು ಮೊದಲ ಬಾರಿ ಈ ವೈರಸ್ ಪತ್ತೆಯಾಗಿದ್ದು, ಇಷ್ಟು ಅಲ್ಪಾವಧಿಯಲ್ಲಿ ಈ ಸೋಂಕಿನ ಲಕ್ಷಣಗಳು ಪತ್ತೆ ಹಚ್ಚುವುದರಲ್ಲಿ ಸಫಲರಾಗಿದ್ದೇವೆ. ಈ ವೈರಸ್ ಅತ್ಯಂತ ಸುಲಭವಾಗಿ ಹರಡುತ್ತದೆ ಎಂದು ಅವರು ಹೇಳಿದರು.