ಮೂಡಲಗಿ: ಕಳೆದ 111 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುಸುತ್ತ ಬಂದಿರುವ ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಂಘವು 2023-24ನೇ ಸಾಲಿನಲ್ಲಿ 54.89 ಲಕ್ಷ ರೂ ಲಾಭ ಹೊಂದಿ ಪ್ರಗತಿ ಪಥತ ದತ್ತ ಸಾಗಿದೆ. ಸಂಘದ ಶೇರುದಾರರಿಗೆ ಶೇ.5 ರಷ್ಟು ಲಾಭವಂಶ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಲ್ಲಪ್ಪ ಪರಪ್ಪ ಕಡಾಡಿ ಹೇಳಿದರು.
ಅವರು ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನಸಹಕಾರಿ ಸಂಘದ 111 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಮಾರ್ಚ ಆರ್ಥಿಕ ವರ್ಷದ ಅಂತ್ಯಕ್ಕೆ 2738 ಶೇರುದಾರರಿಂದ 2.63 ಕೋಟಿ ರೂ ಶೇರು ಬಂಡವಾಳ, 5.20 ಕೋಟಿ ರೂ ನಿಧಿಗಳು, ವಿವಿಧ ಬ್ಯಾಂಕುಗಳಲ್ಲಿ 6.44 ಕೋಟಿ ಗುಂತಾವಣಿಗಳು ಹೊಂದಿದು, ಪ್ರಸಕ್ತ ಸಾಲಿನಲ್ಲಿ ಸಂಘದ 1449 ಸದಸ್ಯರಿಗೆ 15.88 ಕೋಟಿ ರೂ ಬೆಳೆಸಾಲ ಹಾಗೂ ನಾಲ್ಕು ಸದಸರಿಗೆ 22.86 ಲಕ್ಷ ರೂ ಟ್ರ‍್ಯಾಕ್ಟರ ಸಾಲ, 14 ಸದಸ್ಯರಿಗೆ 3.91 ಲಕ್ಷ ರೂ ಹೈನುಗಾಲಕೆ ಸಾಲವನ್ನು ಬಿಡಿಸಿಸಿ. ಬ್ಯಾಂಕಿನಿAದ ವಿತರಿಸಲಾಗಿದೆ ಎಂದರು.
ಸನ್ 2023-24 ನೇ ಸಾಲಗಾಗಿ ಹೊಸ ಪತ್ತ ಮಂಜೂರು ಪಡೆದು ಪ್ರತಿ ಎಕರೆಗೆ 40 ಸಾವಿರ ರೂ
ಗಳಂತೆ 16.40 ಕೋಟಿ ಸಾಲ ವಿತರಿಸಲಾಗಿದೆ. ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಸೇವೆ ಒದಗಿಸಲು ಸಂಘವು ಸಂಪೂರ್ಣ ಗಣಕೀಕರಣಗೊಂಡಿದ್ದು, ಸಂಘವು ಪ್ರಗತಿ ಪಥತದಲ್ಲಿ ಸಾಗಲು ಸಿಬ್ಬಂದಿಗಳ ಪರಿಶ್ರಮ ಮತ್ತು ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಸಂಘವು ಈ ವರ್ಷವು ಕೂಡ ಶೇಕಡಾ 100 ರಷ್ಟು ವಸೂಲಾತಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ ಎಂದ ಅವರು ಸಂಘದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕರಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಹಾಗೂ ಅಧಿಕಾರಿ ವರ್ಗದವರು ಸಹಕಾರವನ್ನು ಸ್ಮರಿಸಿದರು
ಸಭೆಯ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಪ್ಪ ವ್ಯಾಪಾರಿ ನಿರ್ದೇಶಕರಾದ ಬಸವರಾಜ ಬೆಳಕೂಡ, ಬಾಳಪ್ಪ ಕಂಕಣವಾಡಿ, ಪರಪ್ಪ ಪಾಟೀಲ, ಈರಪ್ಪ ಹೆಬ್ಬಾಳ, ಬಸವಂತ ದಾಸನವರ, ಕೆಂಪವ್ವ ಗೋರೋಶಿ, ಪಾರ್ವತೆವ್ವ ಖಾನಗೌಡ್ರ, ಯಮನಪ್ಪ ಗೋಕಾಂವಿ, ಧರ್ಮಣ್ಣ ನಂದಿ, ಬಿ.ಡಿ.ಸಿ.ಸಿ.ಬ್ಯಾಂಕ ಪ್ರತಿನಿಧಿ ವಸಂತ ತಹಶೀಲದಾರ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಬಾಗೇವಾಡಿ ವಾರ್ಷಿಕ ವರದಿಯನ್ನು ಮಂಡಿಸಿದರು. ಅಕೌಟಂಟರಾದ ಮಲ್ಲಪ್ಪ ಹೆಬ್ಬಾಳ ವಂದಿಸಿದರು.
Check Also
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಗೋಕಾಕ*: ರೈತ ಬಾಂಧವರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗದೇ ಧೈರ್ಯದಿಂದ ಎದುರಿಸುವಂತೆ ಶಾಸಕ ಹಾಗೂ ಬೆಳಗಾವಿ …