ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿರುವುದು ವರದಿಯಾಗಿದೆ. ಇದರಿಂದ ರಾಜ್ಯದ ಜನ ಆತಂಕಕ್ಕೆ ಒಳಗಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೇ 32 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ರಾಜ್ಯ ಸರ್ಕಾರವೇ ಅಧಿಕೃತ ಮಾಹಿತಿ ನೀಡಿ, ಜನರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ.
ಇತ್ತ ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು (ಕೋಡಿಶ್ರೀ) ಈ ಮಹಾಮಾರಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಈ ಸಂವತ್ಸರದಲ್ಲಿ ಒಂದು ಹೊಸ ರೋಗ ಬರುವ ಸೂಚನೆ ಇದೆ. ಇದು ಐದು ವರ್ಷಗಳವರೆಗೆ ಇರುತ್ತೆ. ಈ ರೋಗ ಮತ್ತೊಂದು ರೂಪವನ್ನು ತಾಳಲಿದೆ. ಈ ಬಾರಿ ವಾಯು ರೂಪದಲ್ಲಿ ಈ ರೋಗ ಬರುತ್ತೆ. ವಾಯುಮಾಲಿನ್ಯ ಆಗಿದೆ. ಭೂಮಾಲಿನ್ಯ ಆಗಿದೆ, ಜಲಮಾಲಿನ್ಯವೂ ಆಗಿದೆ. ಯಾವುದೂ ನಮಗೆ ಒಳ್ಳೆ ರೀತಿಯಲ್ಲಿ ಸಿಕ್ತಿಲ್ಲ. ಹಾಗಾಗಿ ಜನರ ತಮ್ಮ ಹುಷಾರಿನಲ್ಲಿರುವುದು ಒಳ್ಳೆಯದು ಎಂದಿದ್ದಾರೆ.
ಈ ಬಾರಿ ಬರುವಂತಹ ಖಾಯಿಲೆ ಬಹಳ ಘೋರವಾಗಿದೆ. ವಾಯುರೂಪದಲ್ಲಿ ಕಫ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಲಕ್ಷ್ಮಣಗಳಿವೆ. ಈ ಗಂಡಾಂತರ ಇಡೀ ಲೋಕಕ್ಕೇ ಇದೆ. ಇದರ ಆಯಸ್ಸು ಐದು ವರ್ಷ ಇರಬಹುದು. ಮಧ್ಯದಲ್ಲಿ ಕಡಿಮೆಯಾಗಿ ಮತ್ತೆ ಹೆಚ್ಚಾಗಬಹುದು ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ರೋಗ್ಯ ಸಚಿವ ಹೇಳಿದ್ದೇನು?
ಈ ವರ್ಷ ನಾವು ಕರ್ನಾಟಕದಲ್ಲಿ ಇದುವರೆಗೆ 35 ಕೋವಿಡ್ ಪ್ರಕರಣಗಳನ್ನು ಕಂಡಿದ್ದೇವೆ. ಅದರಲ್ಲಿ 32 ಕೇಸ್ ಬೆಂಗಳೂರಿನಲ್ಲಿ ವರದಿಯಾಗಿವೆ. ಕಳೆದ 20 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ. ಆದರೆ ಯಾವುದೇ ಗಂಭೀರ ಪರಿಸ್ಥಿತಿ ವರದಿಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಕೋವಿಡ್-19 ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.