Breaking News
Home / ರಾಜ್ಯ / ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಕೆಲವೇ ಕ್ಷಣಗಳಲ್ಲಿ ಎಸ್‌ಎಂಎಸ್‌

ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಕೆಲವೇ ಕ್ಷಣಗಳಲ್ಲಿ ಎಸ್‌ಎಂಎಸ್‌

Spread the love

 

ಬೆಂಗಳೂರು : ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಮುಂದಾಗಿದ್ದು, ಈಗ ವಾಹನ ಸವಾರರು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ ಕೆಲವೇ ನಿಮಿಷಗಳಲ್ಲಿ ಅವ್ರ ಮೊಬೈನ್‌ ಸಂಖ್ಯೆಗೆ ಸಂದೇಶ ಹೋಗಲಿದೆ.

ಈ ಹಿಂದೆ ನಿಯಮ ಉಲ್ಲಂಘನೆ ಪೋಟೋಗಳನ್ನ ತೆಗೆದು, ವಾಹನ ಮಾಲೀಕರಿಗೆ ಐ.ಎಂ.ವಿ ಕಲಂ 133 ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘನಾ ನೋಟೀಸ್‌ ಮುದ್ರಿಸಿ, ಅಂಚೆ ಮೂಲಕ ಕಳಿಸಲಾಗ್ತಿತ್ತು. ಇದ್ರಿಂದ ಖರ್ಚು ಹೆಚ್ಚಾಗುವುದ್ರ ಜೊತೆಗೆ ಸಿಬ್ಬಂದಿಯೂ ಶ್ರವವೂ ವ್ಯಯವಾಗ್ತಿತ್ತು.

ಹಾಗಾಗಿ ಪರಿಣಾಮಕಾರಿ ನಿಯಮಗಳನ್ನ ಅಳವಡಿಸಲು ಪೊಲೀಸರು ಮುಂದಾಗಿದ್ದಾರೆ.

ವಾಹನಗಳ ರಿಜೇಸ್ಟ್ರೇಷನ್‌ ಜೊತೆಅಮಾಲೀಕರ ಮೊಬೈಲ್‌ ನಂಬರ್‌ ನೀಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದ್ದು, ಸಧ್ಯ ಈ ನಿಯಮವನ್ನ ಬಳಸಿಕೊಂಡ ಬೆಂಗಳೂರು ಸಂಚಾರ ಪೊಲೀಸರು ಸಾರಿಗೆ ಇಲಾಖೆಯ ಬಳಿ ನಂಬರ್‌ ಪಡೆದುಕೊಂಡಿದೆ.

ಇನ್ನು ಇನ್ಮುಂದೆ ವಾಹನಗಳು ಯಾವುದೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ, ಉಲ್ಲಂಘನೆಯ ವಿವರದ ಸಹಿತ ದಂಡದ ಮೊತ್ತ ಮತ್ತು ಪಾವತಿಸುವ ವಿಧಾನದ ಲಿಂಕ್‌ನ್ನ ಎಸ್‌ಎಂಎಸ್‌ ಮೂಲಕ ಕಳಿಸಲಾಗುತ್ತೆ. ಈ ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಕೆಲವೇ ಕ್ಷಣಗಳಲ್ಲಿ ಎಸ್‌ಎಂಎಸ್‌ ಬರಲಿದ್ದು, 7 ದಿನಗಳೊಳಗಾಗಿ ದಂಡ ಪಾವತಿಸಬೇಕಾಗುತ್ತೆ. ಒಂದ್ವೇಳೆ ದಂಡ ಪಾವತಿಸಲು ತಡವಾದ್ರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.


Spread the love

About Ad9 Haberleri

Check Also

ಎನ್‍ಸಿಡಿಎಫ್‍ಆಯ್ ನಿರ್ದೇಶಕರಾಗಿ ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಪುನರಾಯ್ಕೆ

Spread the love  *ಅಧ್ಯಕ್ಷರಾಗಿ ಮೀನೇಶ್ ಷಾ ಅಧಿಕಾರ ಸ್ವೀಕಾರ* *ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ನಡೆದ ಆಡಳಿತ ಮಂಡಳಿಯ …