Breaking News

ರಾಜ್ಯಾಧ್ಯಂತ ನೈಟ್ ಕರ್ಪ್ಯೂ ಜಾರಿ

Spread the love

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊರೋನಾ ( Corona Virus ) ಹಾಗೂ ಓಮಿಕ್ರಾನ್ ( Omicron Variant ) ನಿಯಂತ್ರಣಕ್ಕೆ ತಡೆ ನೀಡೋ ಕಾರಣದಿಂದಾಗಿ ಡಿಸೆಂಬರ್ 28, 2021ರಿಂದ ಜಾರಿಗೆ ಬರುವಂತೆ ನೈಟ್ ಕರ್ಪ್ಯೂ ( Night Curfew ) ಜಾರಿಗೊಳಿಸಲಾಗಿದೆ.

ಇದಷ್ಟೇ ಅಲ್ಲದೇ ಡಿಸೆಂಬರ್ 30 ರಿಂದ ಜನವರಿ 2ರವರೆಗೆ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ ಗಳಿಗೆ ಶೇ.50ರಷ್ಟು ಜನರಿಗೆ ಮಿತಿಯನ್ನು ಹೇರಿ ಹೊಸ ಮಾರ್ಗಸೂಚಿಯನ್ನು ( Guideline ) ಜಾರಿಗೊಳಿಸಿದೆ. ಈ ಸಂದರ್ಭದಲ್ಲಿ ಯಾವುದಕ್ಕೆ ಅನುಮತಿ, ಯಾವುದಕ್ಕೆ ಇಲ್ಲ ಎನ್ನುವ ಬಗ್ಗೆ ಮುಂದೆ ಓದಿ..

ಈ ಬಗ್ಗೆ ರಾಜ್ಯ ಸರ್ಕಾರದ ( Karnataka Government ) ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ದಿನಾಂಕ 28-12-2021ರಿಂದ 07-01-2022ರವರೆಗೆ ರಾಜ್ಯಾಧ್ಯಂತ ನೈಟ್ ಕರ್ಪ್ಯೂವನ್ನು ಜಾರಿಗೊಳಿಸಲಾಗಿದೆ.

ದಿನಾಂಕ 30-12-2021ರಿಂದ ದಿನಾಂಕ 02-01-2022ರವರೆಗೆ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಪಬ್ ಗಳಲ್ಲಿ ಶೇ.50ರಷ್ಟು ಜನರು ಸೇರೋದಕ್ಕೆ ಅವಕಾಶ ನೀಡಲಾಗಿದೆ. ಎಲ್ಲಾ ಸಿಬ್ಬಂದಿಗಳು ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಅಲ್ಲದೇ ಸಂಪೂರ್ಣ ಲಸಿಕೆ ಪಡೆದವರಿಗೆ ಮಾತ್ರವೇ ಅವಕಾಶ ನೀಡುವಂತೆ ಸೂಚಿಸಲಾಗಿದೆ.

ದಿನಾಂಕ 28-12-2022ರಿಂದ ಸಭೆ, ಸಮಾರಂಭ, ಕಾನ್ಫೆರೆನ್ಸ್, ಮದುವೆ ಸೇರಿದಂತೆ ಇತರೆ ಹೆಚ್ಚು ಜನರು ಸೇರುವಂತ ಕಾರ್ಯಕ್ರಮಗಳಿಗೆ 300 ಜನರಿಗೆ ಮಾತ್ರವೇ ಸೇರೋದಕ್ಕೆ ಅವಕಾಶ ನೀಡಲಾಗಿದೆ. ಈ ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಇನ್ನೂ ರಾಜ್ಯದ ಗಡಿ ಭಾಗಗಳಲ್ಲಿ ಅದರಲ್ಲೂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಬರೋ ಪ್ರಯಾಣಿಕರಿಗೆ ತಪಾಸಣೆಗೆ ಹಾಗೂ ಕೋವಿಡ್ ನೆಗೆಟಿವ್, ಇಲ್ಲವೇ ಸಂಪೂರ್ಣ ಲಸಿಕೆ ಪಡೆದಿರೋ ವರದಿ ಕಡ್ಡಾಯವಾಗಿ ಪರಿಶೀಲಿಸುವಂತೆ ತಿಳಿಸಲಾಗಿದೆ.

ನೈಟ್ ಕರ್ಪ್ಯೂ ಸಂದರ್ಭದಲ್ಲಿ ಯಾವುಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.?

 • ನೈಟ್ ಕರ್ಪ್ಯೂ ಸಂದರ್ಭದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ
 • ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ಕೇವಲ ತುರ್ತು ಸಂದರ್ಭದಲ್ಲಿ ಮಾತ್ರವೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
 • ಎಲ್ಲಾ ಕೈಗಾರಿಕೆಗಳಿಗೆ ರಾತ್ರಿ ವೇಳೆಯಲ್ಲಿ ಕಾರ್ಯ ನಿರ್ವಹಿಸೋದಕ್ಕೆ ಅನುಮತಿ ನೀಡಲಾಗಿದೆ. ನೌಕರರು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಅವಕಾಶ ನೀಡಲಾಗಿದೆ.
 • ಟೆಲಿಕಾಂ, ಇಂಟರ್ನೆಟ್ ಪ್ರವೈಡರ್ ಓಡಾಟಕ್ಕೂ ಅವಕಾಶ ನೀಡಲಾಗಿದೆ.
 • ಅಗತ್ಯ ಸೇವೆ ಒದಗಿಸುವಂತ ಸಿಬ್ಬಂದಿಗಳ ಓಡಾಟಕ್ಕೆ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಅನುಮತಿಸಲಾಗಿದೆ.
 • ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಮಾತ್ರವೇ ಅವಕಾಶ ನೀಡಲಾಗಿದೆ.
 • ಮೆಡಿಕಲ್ ಶಾಪ್ ಗಳು ನೈಟ್ ಕರ್ಪ್ಯೂ ಸಂದರ್ಭದಲ್ಲಿ ತೆರೆದಿರುತ್ತದೆ.
 • ಯಾವುದೇ ಕಮರ್ಷಿಯಲ್ ಶಾಪ್ ಗಳನ್ನು ತೆರೆಯೋದಕ್ಕೆ ಅವಕಾಶವಿಲ್ಲ
 • ಹೋಂ ಡಿಲಿವರಿ ಪುಡ್ ಸರಬರಾಜಿಗೆ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಅನುಮತಿಸಲಾಗಿದೆ.
 • ಗೂಡ್ಸ್ ವೆಹಿಕಲ್, ಟ್ರಕ್, ಗೂಡ್ಸ್ ಕ್ಯಾರಿಯರ್, ಖಾಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
 • ರಾತ್ರಿ ಸಂದರ್ಭದಲ್ಲಿ ಬಸ್, ಟ್ರೈನ್, ಮೆಟ್ರೋ ರೈಲ್ ಹಾಗೂ ವಿಮಾನ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
 • ನೈಟ್ ಕರ್ಪ್ಯೂ ಸಂದರ್ಭದಲ್ಲಿ ಟ್ಯಾಕ್ಸಿ, ಬಸ್, ಆಟೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Spread the love

About Ad9 News

Check Also

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ

Spread the love ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ Chief Minister of Karnataka ಅವರೊಂದಿಗೆ ಭಾಗವಹಿಸಿ, …