ಜೀವಜಲ
*******
ಜಲವು ಮುಖ್ಯವು ಜೀವಿ ಬದುಕಲು
ಸೆಲೆಯುಕಾಣಲು ಹರುಷ ಮೈಮನ
ಹಲವು ಜೀವಿಯು ನೀರಿನೊಳಗಡೆ ಬದುಕ ಕಂಡಿಹವು!
ಮಲಿನವಾಗದೆ ನೋಡಿ ಜಲವನು
ಜಲವೆ ಮನುಜನ ಬದುಕಿನಾಸರೆ
ಕೊಳೆಯ ತೊಳೆಯುವ ಗಂಗೆ ಪವಿತ್ರ ಸಕಲ ಕಾರ್ಯದಲಿ!!
ಹರಿವ ನದಿಗಳ ಶಬ್ಧ ಕೇಳಲು
ಮರೆತು ಚಿಂತೆಯ ಮನಸು ನೆಮ್ಮದಿ
ದೊರೆತು ಸಂತಸ ಕೇಳಿ ಜುಳುಜುಳು ನಾದ ಕಿವಿಗಳಿಗೆ!
ಮೆರೆದು ಚೆಲುವನು ಸೆಳೆದು ಕಣ್ಮನ
ಬೆರಗು ಮೂಡಿಸಿ ನೃತ್ಯ ಮಾಡಿತು
ಮರೆಯದಂತಹ ಸೊಗಸನುಣಿಸಿತು ಸೃಷ್ಟಿ ತಾಣದಲಿ!!
ನೀರು ಕುಡಿಯಲು ದಾಹತೀರಲು
ಬೇರು ಚಿಗುರಿತು ನೀರನುಣಿಸಲು
ನೀರಿನೊಳಗಡೆ ಬಿಡುತಿರಲುಸಿರುಕೆಲವು ಜೀವಿಗಳು!
ಬೇರೆಯಾವುದು ಸಾಟಿಯಿಲ್ಲವು
ನೀರು ತುಂಬವೆ ಮುಖ್ಯ ಬದುಕಲು
ನೀರನುಳಿಸಲು ಮಾಡಿ ನಾನಾ ಬಗೆಯ ಯೋಚನೆಯ!!
ಧರಣೀ ಪ್ರಿಯೆ
ದಾವಣಗೆರೆ