ನನ್ನವನೆ ????
(ಕಲ್ಪನೆಯ ಕವನ )
????????????????????
ಹೆಜ್ಜೆ ಇಟ್ಟು ನೋಡು ಬಾರೋ
ನನ್ನ ಎದೆಯಲಿ
ಸಾವಿನಲ್ಲೂ ಹುಡುಕುವೆ
ಮೋಡದ ಮರೆಯಲಿ!!!
ಕಣ್ಣಿನ ಭಾಷೆಯಲ್ಲಿ
ಸನಿಹ ಕರೆದವನೇ
ಮನಸಿನ ಆಸೆಯ
ಮೌನದಿ ತಿಳಿಸಿದವನೇ!!!
ಕನಸಿಗೂ ಮನಸಿನಲ್ಲಿ
ಪ್ರೀತಿ ತಂದವನೇ
ಪ್ರತಿ ಜನ್ಮಕೂ
ನೀ ನನ್ನವನೇ!!!
ಮೂಡಿಪಿಟ್ಟ ಆಸೆಗಳು
ನೀನಗಿರಲಿ
ಕಡಲ ಮುಟ್ಟುವ
ಕಣ್ಣ ಹನಿಗಳು ನನಗಿರಲಿ!!!
ನಿನ್ನ ಹೆಸರ ಬರೆದಿರುವೆ
ನನ್ನುಸಿರ ಕಣ ಕಣದಲ್ಲಿ
ಒಂದು ಚೂರು ಜಾಗ
ಕೊಡು ನಿನ್ನ ಮನಸಲ್ಲಿ!!!
ಆಕಾಶದ ಮಡಿಲಲ್ಲಿ
ಸಮುದ್ರದ ಅಲೆಯಲ್ಲಿ
ಮಿನುಗು ದೀಪ ಹಚ್ಚಿದವನೇ
ಕನಸಿನೂರಲಿ ನನಗಾಗಿ ಬಂದವನೇ!!!
ಸ್ವಲ್ಪ ಸಮಯ
ಮಿಸಲಿಡು ನನಗಾಗಿ
ನಾ ಕಾಯುತಿರುವೆ
ನಿನ್ನ ಪ್ರೀತಿಯ ಕರೆಗಾಗಿ!!!
ಎಲ್ಲಿದ್ದರು ಬೇಗ ಬಾ
ಪ್ರತಿಜನ್ಮದಲ್ಲೂ ಒಂದಾಗುವ
ಎಂದೆಂದಿಗೂ ನೀ
????????ನನ್ನವನೇ ????????
ರಚನೆ
ಪೂಜಾ ಬೆಳಗಾವಿ