ಮೂಡಲಗಿ: ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರ ಶಾಖೆ ಮೂಡಲಗಿಯ ಅರುಣ ಗುರೂಜೀ ಅವರ ಮಾರ್ಗದರ್ಶನದಲ್ಲಿ ಏ.೧೦ರಂದು ಸಾಯಂಕಾಲ ೫.೩೦ಕ್ಕೆ ಸಿದ್ಧ ಸಮಾಧಿ ಯೋಗ-ಎಸ್‌ಎಸ್‌ವೈ ಶಿಬಿರವನ್ನು ಸ್ಥಳೀಯ ಶಿವಬೋಧರಂಗ ಮಠದ ಆವರಣದಲ್ಲಿ ಏರ್ಪಡಿಸಿರುವರು.
ಪ್ರಾಣಾಯಾಮ, ಧ್ಯಾನ, ಯೋಗಾಸನ, ಸೂರ್ಯ ನಮಸ್ಕಾರ, ಗಾಯತ್ರಿ ಮಹಾಮಂತ್ರೋಪದೇಶ ಇವುಗಳ ಜೋತೆಗೆ ಉದ್ವೇಗ, ಒತ್ತಡ ನಿವಾರಣೆ, ಆಹಾರ ಕ್ರಮ, ವಿವಿಧ ಕಾಯಿಲೆಗಳ ನಿವಾರಣೋಪಾಯಗಳಿಗೆ ಶಿಬಿರದಲ್ಲಿ ಹೇಳಿಕೊಡುವರು.
ಶಿಬಿರದ ಬಗ್ಗೆ ಪರಿಚಯ ಕಾರ್ಯಕ್ರಮವು ಏ.೯ರಂದು ೧೧.೦೦ಕ್ಕೆ ಶ್ರೀ ಶಿವಬೋಧ ರಂಗ ಮಠದ ಆವರಣದಲ್ಲಿ ಜರುಗಲಿದೆ. ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ಅಧಿಕ ಮಾಹಿತಿ ಪಡೆಯಲು ಸಂಪರ್ಕಕ್ಕಾಗಿ: ಮೊ. ೯೪೪೮೬೩೭೯೧೬, ೯೪೪೮೦೨೧೪೫೮, ೯೭೩೧೧೬೭೬೬೨, ೯೩೪೨೪೩೯೮೧೧ ಸಂಪರ್ಕಿಸಲು ತಿಳಿಸಿದ್ದಾರೆ.
