Breaking News

ಕ್ಷೇತ್ರವು ಇನ್ನಷ್ಟೂ ಅಭಿವೃದ್ದಿಯಾಗಲು ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ : ಬಾಲಚಂದ್ರ ಜಾರಕಿಹೊಳಿ

Spread the love


ಮೂಡಲಗಿ: ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿ ಹಾಗೂ ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ. ಕ್ಷೇತ್ರವು ಇನ್ನಷ್ಟೂ ಅಭಿವೃದ್ದಿಯಾಗಲು ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಮತದಾರಲ್ಲಿ ಬಿಜೆಪಿಗೆ ಮತ ನೀಡಲು ಶ್ರಮಿಸಬೇಕೆಂದು ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದರು.
ಬುಧವಾರ ಸಂಜೆ ಕಲ್ಲೋಳಿ, ಮೂಡಲಗಿ- ಗುರ್ಲಾಪೂರದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೇ.10 ರಂದು ನಡೆಯುವ ಚುನಾವಣೆಯಲ್ಲಿ ನನ್ನಗೆ ಅಂತ್ಯಂತ ಹೆಚ್ಚಿನ ಮತಗಳಿಂದ ಆಯ್ಕೆಯಾಗಲು ತಾವುಗಳು ಶ್ರಮಿಶಬೇಕು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ, ಮೂಡಲಗಿ ಮತ್ತು ಗುರ್ಲಾಪೂರ ಪಟ್ಟಣದ ಶ್ರೇಯೋಭಿವೃದ್ದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಜನರಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಭಿವೃದ್ದಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆಂದು ತಿಳಿಸಿದರು.
ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ವ್ಯವಸ್ಥಿತವಾಗಿ ಸಂಘಟಿತರಾಗಲು ಪ್ರಯತ್ನಿಸಿದ್ದೇನೆ. ಸಣ್ಣ-ಪುಟ್ಟ ಸಮಾಜಗಳು ಸಹ ಸಮಾಜದ ಮುಖ್ಯವಾಹಿನಿಗೆ ತರಲು ನನ್ನಿಂದ ಆಗುವಷ್ಟು ಕೆಲಸ ಮಾಡಿದ್ದೇವೆ. ಎಲ್ಲ ಸಮಾಜಗಳು ಪರಸ್ಪರ ಸಹೋದರತ್ವ ಮನೋಭಾವನೆಯನ್ನು ಬೆಳೆಸಿಕೊಂಡು ಸೌಹಾರ್ಧಯುತವಾಗಿ ಬದುಕು ನಿರ್ವಹಿಸಲು ಸಾಕಷ್ಟು ಶ್ರಮ ವಹಿಸಿದ್ದೇನೆಂದು ಹೇಳಿದರು.
ದೇವರು, ತಾಯಿ-ತಂದೆ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಅರಭಾವಿ ಕ್ಷೇತ್ರವನ್ನು ಅಭಿವೃದ್ದಿ ಮಾಡಿದ್ದೇನೆ. ಇದಕ್ಕೆ ನಾನು ಕೈಗೊಂಡಿರುವ ನಾನಾ ಕಾಮಗಾರಿಗಳೇ ಸಾಕ್ಷಿಯಾಗಿವೆ. ಕೆಲವರು ತಮ್ಮ ತಪ್ಪನ್ನು ಮರೆ ಮಾಚಿಕೊಳ್ಳಲು ಇಲ್ಲ ಸಲ್ಲದ ಆರೋಪಗಳನ್ನು ಈ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಅಭಿವೃದ್ದಿ ಕಾರ್ಯಗಳನ್ನು ಸಹಿಸದ ಅಂತವರಿಂದ ಜನರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ಜನರ ಕಷ್ಟಗಳು ಏನು ಎಂಬುವುದು ಅಂತವರಿಗೆ ಅರ್ಥವಾಗುವದಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಕರ್ನಾಟಕದ ಅಭಿವೃದ್ದಿಯಾಗಬೇಕಾದರೇ ಅದು ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯವಿದೆ. ರಾಜ್ಯದಲ್ಲಿಯೂ ಬಿಜೆಪಿ ಮತ್ತೋಮ್ಮೆ ಅಧಿಕಾರಕ್ಕೆ ಬರಲಿದೆ. ನನಗೆ ನಿಮ್ಮ ಅಮೂಲ್ಯ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಗಳನ್ನು ಬಲ ಪಡಿಸಬೇಕು. ಶೇಜ್ ನಂ 5 ಇದ್ದು ಕಮಲದ ಗುರ್ತಿಗೆ ಪ್ರಚಂಡ ಮತ ನೀಡುವಂತೆ ಅವರು ಮನವಿ ಮಾಡಿಕೊಂಡು ಮತಯಾಚಿಸಿದರು.
ಈ ಸಂಧರ್ಭದಲ್ಲಿ ಅರಭಾವಿ ಕ್ಷೇತ್ರದ ವಿವಿಧ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ಮೂಡಲಗಿ ಮತ್ತು ಗುರ್ಲಾಪೂರ ವ್ಯಾಪ್ತಿಯ ಮುಖಂಡರನ್ನುದ್ದೇಶಿಸಿ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡುತ್ತಿರುವುದು.


Spread the love

About Ad9 News

Check Also

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ : ಎರಡನೇ ಸ್ಥಾನಕ್ಕೆ ಯಾರು ಬರುತ್ತಾರೆಂದು ವಿರೋಧಿಗಳಿಬ್ಬರೂ ಪೈಪೋಟಿ ನಡೆಸಿದ್ದಾರೆ: ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ: ಕ್ಷೇತ್ರದ ಮತದಾರರು ಈಗಾಗಲೇ ನಿರ್ಧಾರ ಮಾಡಿದ್ದು, ನನಗೆ ಮೊದಲ ಸ್ಥಾನ ನೀಡಲಿದ್ದಾರೆ. ಆದರೆ, ವಿರೋಧ …

Leave a Reply

Your email address will not be published. Required fields are marked *