Breaking News

ಮೂಡಲಗಿ ಕಸಾಪ ಕಾರ್ಯಕಾರಿಣ ಪದಾಧಿಕಾರಿಗಳ ಪದಗ್ರಹಣ

Spread the love


ಗಣ್ಯರ ಮೆರವಣ ಗೆ; ‘ಶುದ್ಧಿ’ ಪುಸ್ತಕ ಬಿಡುಗಡೆ
ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ದ ನೂತನ ಘಟಕದ ಕಾರ್ಯಕಾರಿ ಸಮಿತಿಯ ಪದಗ್ರಹಣ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಫೆ. 18ರಂದು ಮಧ್ಯಾಹ್ನ 3ಗಂಟೆಗೆ ಸ್ಥಳೀಯ ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಜರುಗಲಿದೆ.
ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿವಹಿಸುವರು. ಸಮಾರಂಭದ ಗೌರವಾಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾಗವಹಿಸುವರು. ಉದ್ಘಾಟಕರಾಗಿ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಅಧ್ಯಕ್ಷರಾಗಿ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಭಾಗವಹಿಸುವುರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಬಾಲಶೇಖರ ಬಂದಿ, ಬಿಇಒ ಅಜಿತ ಮನ್ನಿಕೇರಿ, ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್. ಸೊಸೈಟಿ ಅಧ್ಯಕ್ಷ ಬಸವಣ ್ಣ ಮುಗಳಖೋಡ, ಹೊಸಟ್ಟಿಯ ಸಿದ್ದಪ್ಪ ನಾಯಿಕ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಭಾಗವಹಿಸುವರು.
ಪುಸ್ತಕ ಬಿಡುಗಡೆ: ಕರ್ನಲ್ ಪರಶುರಾಮ ನಾಯಿಕ ಅವರ ‘ಶುದ್ಧಿ’ ಪುಸ್ತಕದ ಬಿಡುಗಡೆ ಇರುವುದು.
ಮೆರವಣ ಗೆ: ಕಾರ್ಯಕ್ರಮದ ಪೂರ್ವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶ್ರೀಗಳನ್ನು, ಗಣ್ಯರನ್ನು, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಕಾರ್ಯಕಾರಿಣ ನೂತನ ಪದಾಧಿಕಾರಿಗಳು, ಸಾಹಿತಿಗಳನ್ನು ವಿವಿಧ ವಾದ್ಯಗಳೊಂದಿಗೆ ಮೆರವಣ ಗೆಯಲ್ಲಿ ಕುರುಹಿನಶೆಟ್ಟಿ ಸೊಸೈಟಿಯ ಸಭಾಭವನಕ್ಕೆ ಬರಮಾಡಿಕೊಳ್ಳಳಾಗುವುದು. ತಾಲ್ಲೂಕಿನ ಎಲ್ಲ ಕನ್ನಡ ಮನಸ್ಸಿನ ಮಹನೀಯರು ಭಾಗವಹಿಸಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *