ಮೂಡಲಗಿ : ಹುಬ್ಬಳ್ಳಿ ನಗರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿರುವ ಹಿನ್ನೆಲೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ ಕ್ಕಿಂತ ಹೆಚ್ಚಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ರವಿವಾರದಂದು ತಹಶೀಲ್ದಾರ ಕಚೇರಿಯ ಸಿಬ್ಬಂದಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮೂಡಲಗಿ ಪಟ್ಟಣ ಅಯ್ಯಪ್ಪ ಸ್ವಾಮಿ ಸನ್ನಿಧಾನದ ರವಿ ನೇಸೂರ ಗುರುಸ್ವಾಮಿ ಮಾತನಾಡಿ, ಡಿಸೆಂಬರ್ 22ರಂದು ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 8 ಮಂದಿ ಅಯ್ಯಪ್ಪ ಮಾಲಾಧಾರಿಗಳು ಕೊನೆಯುಸಿರೆಳೆದಿದ್ದಾರೆ. ಮಾಲಾಧಾರಿಗಳು ಕುಟುಂಬಗಳು ಕಡು ಬಡತನದಿಂದ ಕೂಡಿದ್ದು, ಮೃತಪಟ್ಟಿರುವ ಹಿನ್ನೆಲೆ ಆ ಕುಟುಂಬಗಳು ತುಂಬಾ ನೋವನ್ನು ಅನುಭವಿಸುತ್ತಿವೆ ಹಾಗಾಗಿ ಸರ್ಕಾರ ಕುಟುಂಬಗಳ ಏಳಿಗೆಗಾಗಿ 5ಲಕ್ಷ ಕ್ಕಿಂತ ಹೆಚ್ಚಿನ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಬಾಳಯ್ಯ ಹಿರೇಮಠ, ದಾದು ಜಂಡೇಕುರುಬರ, ಕೃಷ್ಣ ಗಿರೆಣ್ಣವರ, ಗುರು ಗಂಗನ್ನವರ, ವಿನೋದ ಎಮ್ಮಿ, ಸಂಜು ಕಮತೆ, ಬಸವರಾಜ ಕಬ್ಬೂರ್, ಶಿವು ಮೆಣಸಿ, ಸಂಜು ಕಮತೆ, ಶ್ರೀಶೈಲ್ ವಂಟಗೋಡಿ, ಮೌನೇಶ್ ಬಡಿಗೇರ್, ಹೊಳೆಪ್ಪ ಶಿವಾಪೂರ, ಪ್ರಜ್ವಲ್ ಪುಟಾಣಿ, ಸದಾಶಿವ ಗುಡ್ಲಮನಿ, ರಾಘುವೀರ ಕಪ್ಪಲಗುದ್ದಿ, ಬಸವರಾಜ ತೇಲಿ, ಚಂದ್ರು ಜಂಡೆಕುರುಬರ, ಸುರೇಶ್ ಮೆಳವಕಿ,
ಚಿಟ್ಟೆ ಬಾಬು ಸೇರಿದಂತೆ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಉಪಸ್ಥಿತರಿದ್ದರು.