Breaking News
Home / ಮೂಡಲಗಿ / ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ : ಶೋಭಾ ಗಸ್ತಿ

ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ : ಶೋಭಾ ಗಸ್ತಿ

Spread the love

 

ಮೂಡಲಗಿ: ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ ಎಂದು ರಾಷ್ಟೀಯ ನಾರಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಹೇಳಿದರು.
ಅವರು ಪಟ್ಟಣದಲ್ಲಿ ಬಿಇಒ ಕಾರ್ಯಾಲಯ, ಸರಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಲಯನ್ಸ್ ಪರಿವಾರದಿಂದ ನಾರಿಶಕ್ತಿ ಪ್ರಶಸ್ತಿ ವಿಜೇತೆಯರಿಗೆ ಸನ್ಮಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ಸೆçöÊರ್ಡ್ ಅವಾರ್ಡ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿರುವ ಶೋಷಿತ ವರ್ಗದವರಿಗೆ ಸಂಘ ಸಂಸ್ಥೆಗಳು ವಿಚಾರವಂತರ ಸಹಕಾರ ಮುಖ್ಯವಾಗಿದೆ. ದೇವದಾಸಿ ಪದ್ದತಿ, ಅತ್ಯಾಚಾರ, ಅನ್ಯಾಯಗಳನ್ನು ಮೂಡನಂಭಿಕೆ ಹೆಸರಿನಲ್ಲಿ ನಡೆಯುವ ಪದ್ದತಿಗಳನ್ನು ನಿರ್ಮೂಲನೆ ಮಾಡಬೇಕು. ಅಮ್ಮಾ ಪೌಂಢೇಶನವತಿಯಿಂದ ೩೬೦ ಗ್ರಾಮಗಳಲ್ಲಿ ಶೋಷಿತ ದೇವದಾಸಿಯರ ವಸತಿ, ಮಕ್ಕಳ ಶಿಕ್ಷಣ, ಸ್ವ ಉದ್ಯೋಗ, ಸಮಾಜಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯಕರ್ತೆಯರ ಸಹಾಯದಿಂದ ಮಾಡಿದ ಫಲವಾಗಿ ಕೇಂದ್ರ ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದೆಹಲಿಯಲ್ಲಿ ರಾಷ್ಡçಪತಿ ರಾಮನಾಥ ಕೊವಿಂದ ಅವರಿಂದ ನಾರಿಶಕ್ತಿ ಪ್ರಶಸ್ತಿ ಸ್ವೀಕರಿಸಿರುವದು ಸಂತಸವಾಗಿದೆ ಎಂದರು.
ಮೂಡಲಗಿಯಲ್ಲಿ ಜನಿಸಿ ನಮ್ಮ ತಾಯಿ ಪುರಸಭೆಯಲ್ಲಿ ಪೌರಕಾರ್ಮಿಕಳಾಗಿ ದುಡಿದು ಶಿಕ್ಷಣ ಕೊಡಿಸಿದ್ದಾರೆ. ಕಲಿತ ಶಾಲೆಯಲ್ಲಿ ಸತ್ಕಾರ ಸ್ವೀಕರಿಸುತ್ತಿರುವದು ಹೆಮ್ಮೆ ಎನಿಸುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಡುವ ನಿಟ್ಟಿನಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ. ಹೆಣ್ಣಿನ ಶೋಷನೆಯ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತ ಬೇಕು ಅಂದಾಗ ಮಾತ್ರ ನಾರಿ ಮನಿಗಳಿಗೆ ತಲೆ ಎತ್ತಿ ಸಮುದಾಯದಲ್ಲಿ ಬಾಳಿ ಬದುಕಲು ಸಾಧ್ಯವಾಗುವದು. ರಾಷ್ಟೀಯ ಪ್ರಶಸ್ತಿ ಪಡೆಯುವಲ್ಲಿ ಸಹಕಾರ ನೀಡಿದ ಸಂಘ ಸಂಸ್ಥೆಗಳು, ಗುರುಬಳಗ, ಸಾಮಾಜಿಕ ಹಿತಚಿಂತಕರ ಆಚಾರ ವಿಚಾರ ಧಾರೆಗಳು ಪ್ರಮುಖವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಹಶೀಲ್ದಾರ ಡಿ.ಜೆ ಮಹಾತ್ ಮಾತನಾಡಿ, ಸುಮಾರು ೨೦ ವರ್ಷಗಳಿಂದ ಪರಿಚಯವಿರುವ ಶೋಭಾ ಗಸ್ತಿಯವರು ಸದಾ ಕಾಲ ಶೋಷಿತ ವರ್ಗಗಳ ಪರ ನಿಂತು ಅವರ ಕಷ್ಟ ಕಾರ್ಪನ್ಯಗಳಿಗೆ ಸ್ಪಂದಿಸುತ್ತಾ ಬಂದಿರುತ್ತಾರೆ. ಸದ್ಯ ಘಟಪ್ರಭಾ ನಿವಾಸಿಯಾಗಿದ್ದರು ಮೂಡಲಗಿಯ ಹೆಮ್ಮೆಯ ಮನೆ ಮಗಳಾಗಿದ್ದಾರೆ. ಇನ್ನು ಮುಂದೆಯು ಇಂತಹ ದಿಟ್ಟ ಮಹಿಳೆಯರು ಸಮಾಜದಲ್ಲಿ ಗುರ್ತಿಸುವಂತಾಗಲಿ ಎಂದು ನುಡಿದರು.
ಬಿಇಒ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ನಿವೃತ್ತ ಗ್ರಂಥಪಾಲಕ ಬಾಲಶೇಖರ ಬಂದಿ ಮಾತನಾಡಿ, ರಾಷ್ಟಿçÃಯ ಪ್ರಶಸ್ತಿಯಾಗಿರುವ ನಾರಿಶಕ್ತಿ ಪ್ರಶಸ್ತಿ ಪಡೆಯುವ ಮೂಲಕ ಈ ಭಾಗದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕವಾಗಿ ನೊಂದ ಕುಟುಂಭಗಳ ಆಶಾ ಕಿರಣವಾಗಿರುವ ಶೋಭಾ ಗಸ್ತಿಯವರ ಕಾರ್ಯ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳಿಂದ ಶೋಭಾ ಗಸ್ತಿಯವರನ್ನು ಸತ್ಕರಿಸಿ, ಜಿಲ್ಲಾ ಮಟ್ಟದಲ್ಲಿ ಇನ್ಪೆöÊರ್ಡ್ ಅವಾರ್ಡ್ನಲ್ಲಿ ಪ್ರಶಸ್ತಿ ಪುರಸ್ಕೃತ ವಿದ್ಯಾಥಿಗಳಿಗೆ ಪ್ರಮಾಣ ಪತ್ರ ವಿತರಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಪುರಸಭೆ ಸದಸ್ಯರಾದ ಈರಣ್ಣ ಕೊಣ್ಣೂರ, ಖೂರ್ಷಿದಾ ಅನ್ವರ ನದಾಫ್, ಜಲಕುಂಭ ದಾನಿ ಅನ್ವರ ನದಾಫ್, ಬಸು ಝಂಡೆಕುರುಬರ, ಕಾಂಚನಾ ಮೇತ್ರಿ, ಪ್ರಧಾನ ಗುರು ಬಿ.ಎಚ್ ಹುಲ್ಯಾಳ, ಶಿಕ್ಷಕ ಸಂಘಟನೆಯ ಎಡ್ವಿನ್ ಪರಸಣ್ಣವರ, ಬಿ.ಎ ಡಾಂಗೆ, ಕೆ.ಎಲ್.ಮೀಶಿ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಆರ್. ಎ ದೊಡಮನಿ ನಿರೂಪಿಸಿದರು. ಆರ್. ಡಿ ಮಳಲಿ ಸ್ವಾಗತಿಸಿ, ಆರ್.ಬಿ ಕಾಖಂಡಕಿ ವಂದಿಸಿದರು.


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *