Breaking News

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ರವರು ಯಾವುದೇ ಸಮುದಾಯಕ್ಕೆ ಸಿಮೀತವಲ್ಲ

Spread the love

 

ಮೂಡಲಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ರವರು ಯಾವುದೇ ಸಮುದಾಯಕ್ಕೆ ಸಿಮೀತವಲ್ಲ, ಇಡೀ ಪ್ರಪಂಚದಲ್ಲೇ ದೊಡ್ಡ ಸಂವಿಧಾನವನ್ನು ಭಾರತಕ್ಕೆ ನೀಡಿದ ಮಹಾನಾಯಕರಾಗಿದ್ದು ಅವರು ಎಲ್ಲ ಸಮುದಾಯದ ಆಸ್ತಿ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಗುರುವಾರದಂದು ಪಟ್ಟಣದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲಾ ಆವರಣದಲ್ಲಿ ತಾಲೂಕಾಡಳಿ, ತಾಪಂ, ಪುರಸಭೆ, ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಜರುಗಿದ ಡಾ. ಬಿ ಆರ್ ಅಂಬೇಡ್ಕರ ರವರ 131ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಸೈನಿಕನ ಮಗನಾಗಿ ಬಾಲ್ಯದಿಂದಲೇ ಸಮಾನತೆಗಾಗಿ ಹೋರಾಟ ಮಾಡಿದ ಮಹಾನ್ ಧೀರ ಅಂಬೇಡ್ಕರ ರವರು. ಅವರನ್ನು ಒಂದೇ ಸಮುದಾಯಕ್ಕೆ ಸಿಮೀತಗೋಳಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಅಂಬೇಡ್ಕರ ಈ ದೇಶದ ಬಹುದೊಡ್ಡ ಆಸ್ತಿಯಾಗಿದ್ದರು. ಅವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಸಿಕೊಳ್ಳುವಂತೆ ಹೇಳದಿರು.
ಯಾದವಾಡ ಪಿಯೂ ಕಾಲೇಜಿನ ಉಪನ್ಯಾಸಕ ವಾಯ್ ಎಚ್ ಚಲವಾದಿ ಮಾತನಾಡಿ, ಅಂಬೇಡ್ಕರ ಅವರ ಬದುಕಿದಂಹತ ದಿನಗಳು ಸುಖದ ಜೀವನವನ್ನು ನಡಿಸದೇ ಇಡೀ ಭಾರತ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಂತಹ ಮಹಾನಾಯಕ ಎಂದರು.
ತಹಶೀಲ್ದಾರ ಡಿ ಜಿ ಮಹಾತ್ ಹಾಗೂ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಅತ್ಯಂತ ಕಡು ಬಡತನ ಮತ್ತು ಸ್ಪಶ್ಯತೆಯ ಬೆಂಕಿಯ ಕುಲುಮೆಯಲ್ಲಿ ಬೆಂದರು ಸಹ ಕಷ್ಟಗಳಿಗೆ ಭಾಗದೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ಪ್ರಪಂಚದಲ್ಲಿ ಅತಿ ಹೆಚ್ಚು ಡಿಗ್ರಿಗಳನ್ನು ಪಡೆದಿರುವ ವಿಶ್ವದ ಮೊದಲ ವ್ಯಕ್ತಿ ಅಂಬೇಡ್ಕರ. ವಿದೇಶದಲ್ಲಿ ಪಿ.ಎಚ್.ಡಿ ಮುಗಿಸಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ. ಸಂವಿಧಾನವನ್ನು ರಚಿಸಿ ಕೋಟ್ಯಂತರ ಕಮರ ಹಣೆಬೆಹವನ್ನೇ ಬದಲಾಯಿಸಿದ ಮಹಾ ಶಿಲ್ಪಿ ಅಂಬೇಡ್ಕರ ರವರ ಬದುಕು ಜಗತ್ತಿಗೆ ಸ್ಪೂರ್ತಿ ಆದರ್ಶ ಮತ್ತು ದೊಡ್ಡ ಸಂದೇಶ ಎಂದರು.
ಕಾರ್ಯಕ್ರಮ ಮುಂಚೂಣಿಯಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿಯವರು ಡಾ. ಬಿ.ಆರ್ ಅಂಬೇಡ್ಕರ ರವರ ಭಾವಚಿತ್ರಕ್ಕೆ ಪುಚ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಪರಿಶಿಷ್ಟ ಜಾತಿಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರಿಕ್ಷೇಯಲ್ಲಿ ಅತಿ ಹೆಚ್ಚು ಅಂಕ ಗಳಿಂದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವಿಸಿದರು.
ಈ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಿಪಿಐ ವೆಂಕಟೇಶ ಮುರನಾಳ, ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ಹೆಸ್ಕಂ ಅಧಿಕಾರಿ ಎಮ್ ಎಸ್ ನಾಗನ್ನವರ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ಮುಖಂಡರಾದ ಮರೇಪ್ಪ ಮರೇಪ್ಪಗೋಳ, ರಮೇಶ ಸಣ್ಣಕ್ಕಿ, ಪ್ರಕಾಶ ಮಾದರ, ಶಾಬು ಸಣ್ಣಕ್ಕಿ, ಸತ್ಯಪ್ಪ ಕರವಾಡಿ, ರವಿ ಸಣ್ಣಕ್ಕಿ, ರಮೇಶ ಮಾದರ, ಬಾಳೇಶ ಬನಹಟ್ಟಿ, ಲಕ್ಷö್ಮಣ ಕೆಳಗಡೆ, ಬಸು ಕಾಡಾಪೂರ, ಯಶವಂತ ಮಂಟೂರ ಹಾಗೂ ಪುರಸಭೆ ಸದಸ್ಯರು, ಪರಿಶಿಷ್ಟ ಜಾತಿ ವಿವಿಧ ಸಂಘಟನೆಗಳ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು.


Spread the love

About Ad9 News

Check Also

ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

Spread the love ಮೂಡಲಗಿ: ಪಟ್ಟಣದ ತಾ.ಪಂ ಕಾರ್ಯಲಯದಲ್ಲಿ ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿಗೆ ಚಾಲನೆ …

Leave a Reply

Your email address will not be published. Required fields are marked *