Breaking News

ಉಪ್ಪಾರ ಸಮಾಜಕ್ಕೆ ಪಜಾ/ಪಪಂ ಮೀಸಲಾತಿಗಾಗಿ ಬೃಹತ ಪಾದಯಾತ್ರೆ,

Spread the love


ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟಿಸಿ ಸರಕಾರಕ್ಕೆ ಮನವಿ

ಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿಗೆ ಬಗ್ಗೆ ಬೆಂಬಲ ನೀಡಿರುವುದ ಸ್ವಾಗತಿಸುತ್ತೇವೆ, ಬಾಲಚಂದ್ರ ಜಾರಕಿಹೊಳಿ ಅವರು ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಮಾಜಿ ಎಮ್.ಎಲ್.ಸಿ ಎಚ್.ಸಿ.ನೀರಾವರಿ ಅವರ ನೇತೃತ್ವದಲ್ಲಿ ಉಪ್ಪಾರ ಸಮಾಜಕ್ಕೆ ಎಸ್.ಸಿ/ಎಸ್.ಟಿ ಮಿಸಲಾತ್ತಿಗಾಗಿ ಮನವಿ ನೀಡಿದೆವು ಆಗಲೇ ಅವರು ಶಿಪಾರಸ್ಸು ಮಾಡಿದರೆ ಈಗ ಪ್ರತಿಭಟನೆ ಮಾಡುವ ಅವಶ್ಯಕತೆ ಬರುತ್ತಿರಲ್ಲಿ, ಈಗಲಾದರೂ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉಪ್ಪಾರ ಸಮಾಜದ ಮೀಸಲಾತಿಗಾಗಿ ಧ್ವನಿ ಎತ್ತಿ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಉಪ್ಪಾರ ಸಮಾಜದ ಮುಖಂಡ ಬಿ.ಬಿ.ಹಂದಿಗುಂದ ಆಗ್ರಹಿಸಿದರು.
ಪಟ್ಟನದಲ್ಲಿ ಶುಕ್ರವಾರದಂದು ನಡೆದ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸ ಬೇಕೆಂದು ಆಗ್ರಹಿಸಿ ಪಟ್ಟಣದ ಈರಣ್ಣ ದೇವಸ್ಥಾನದಿಂದ ಕಲ್ಮೇಶ್ವರ ವೃತ್ತ ದವರಿಗೆ ಮೂಡಲಗಿ ತಾಲೂಕಾ ಉಪ್ಪಾರ ಸಮಾಜ ಮತ್ತು ಶ್ರೀ ಮಹರ್ಷಿ ಭಗೀರಥ ಉಪ್ಪಾರ ಸಮಾಜ ಸಂಘದಿಂದ ಸಮಾಜದ ಅಪಾರ ಜನಸ್ತೋಮದಿಂದ ಕೂಡಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ಮತ್ತು ಮುಖ್ಯ ಮಂತ್ರಿ ದೇವೆಗೌಡ್ರ ಅವರು ಉಪ್ಪಾರ ಸಮಾಜದ ಮೀಸಲಾತಿ ಕೋಡುವ ಬಗ್ಗೆ ಸಂಸತಿನಲ್ಲಿ ಧ್ವನಿ ಎತ್ತಿದ್ದಾರೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಅಷ್ಟೇ ಅಲ್ಲದೇ ಔದ್ಯೋಗಿಕವಾಗಿ ಸಹಿತ ಅತೀ ಹಿಂದುದಲಿದ ಸಮಾಜವಾದ ಉಪ್ಪಾರ ಸಮಾಜವನ್ನು ಮುಖ್ಯ ಮಂತ್ರಿ ಬೋಮ್ಮಾಯಿ ಅವರು ಉಪ್ಪಾರ ಸಮಾಜಕ್ಕೆ ಈ ಹಿಂದೆ ತಾವು ಜಲ ಸಂಪನ್ಮೂಲ ಸಚೀವರಾಗಿದ್ದಾಗ ಅಂದಿನ ಮುಖ್ಯ ಮಂತ್ರಿಗಳಿಗೆ ಶಿಫಾರಸ್ಸು ಮಾಡಿರುವಂತೆ ಸದ್ಯ ತಾವೇ ಮುಖ್ಯ ಮಂತ್ರಿಗಳಾಗಿರುವರಿಂದ ಉಪ್ಪಾರ ಸಮಾಜವನ್ನು ಎಸ್.ಸಿ/ಎಸ್.ಟಿ ಮಿಸಲಾತ್ತಿ ನೀಡುವ ಬಗ್ಗೆ ತಮ್ಮದೆ ಸರಕಾರ ಇರುವ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು ಆಗ್ರಹಿಸಿದರು.
ನ್ಯಾಯವಾದಿ ಎಸ್.ಎಮ್.ಹತ್ತಿಕಟ್ಟಗಿ, ಉಪ್ಪಾರ ಸಮಾಜವು ಕರ್ನಾಟಕ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅತೀ ಹಿಂದುಳಿದ ಜಾತಿಯಾಗಿರುತ್ತದೆ. ಉಪ್ಪಾರ ಸಮಾಜವನ್ನು ಹಲವು ದಶಕಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಮಾಜದ ಪೂಜ್ಯರು ಹಾಗೂ ಹಿರಿಯರು ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಉಪ್ಪಾರ ಸಮಾಜ ತಾಲೂಕಾ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುಂದ ಮಾತನಾಡಿ, ಉಪ್ಪಾರ ಸಮಾಜದ ನ್ಯಾಯುತ್ತ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಅರ್ಜುನ ನಾಯಿಕವಾಡಿ, ಪರಸಪ್ಪ ಬಬಲಿ, ಶಿವಪುತ್ರಪ್ಪ ಜಕ್ಕಬಾಳ, , ಶಿವಬಸು ಹಂದಿಗುಂದ, ಸದಾಶಿವ ಗುದುಗಗೋಳ, ಕಸ್ತುರಿ ಹೆಗ್ಗಾಣಿ ಮಾತನಾಡಿ,
ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಿದ ಮೂಡಲಗಿ ತಹಶೀಲ್ದಾರ ಮಾತನಾಡಿ, ತಮ್ಮ ಬೇಡಿಕೆಯನ್ನು ಶೀಘ್ರವಾಘಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ತಲುಪ್ಪಿಸಲ್ಲಾಗುವುದು ಎಂದರು.
ಈ ಸಂದರ್ಭದಲ್ಲಿ ಈಶ್ವರ ಕಂಕಣವಾಡಿ, ಬಸವರಾಜ ಖಾನಪ್ಪನವರ, ಸುಭಾಸ ಪೂಜೇರಿ, ಅಪ್ಪಯ್ಯ ಬಡ್ನಿಗೋಳ, ಶಂಕರ ಬೀಲಕುಂದಿ, ವಿಠಲ ಸವದತ್ತಿ, ವಿಷ್ಣು ಲಾತೂರ, ಮುತ್ತೆಪ್ಪ ಕುಳ್ಳೂರ, ಚಂದ್ರು ಬೆಳಗಲಿ, ಶಿವಪ್ಪ ಅಟಮಟ್ಟಿ, ಶ್ರೀಶೈಲ್ ಪುಜೇರಿ, ಗುರುನಾಥ ಗಂಗಣ್ಣವರ, ಹನುಮಂತ ಕಂಕಣವಾಡಿ, ಸಾಬಪ್ಪ ಬಂಡ್ರೋಳಿ, ಮಹಾದೇವ ಕಂಕಣವಾಡಿ, ಲಕ್ಷ್ಮಣ ಬಂಡ್ರೋಳಿ, ಶಿವಪ್ಪ ಮರ್ದಿ, ವಿಠ್ಠಲ ಗುಡೆನ್ನವರ, ಮಲ್ಲಿಕಾರ್ಜುನ ಚೌಕಾಶಿ, ಅಶೋಕ ಕಸ್ತೂರಿ, ಅಡಿವೇಪ್ಪ ಕಿತ್ತೂರ, ಹನಮಂತ ಪೂಜೇರಿ, ಸಿದ್ದಪ್ಪ ಹಮನ್ನವರ, ಬಸವರಾಜ ಆಯಟ್ಟಿ, ಮಹಾದೇವ ಮಲಗೌಡರ, ಶಂಭುಲಿಂಗ ಮುಕ್ಕನವರ, ಸುಭಾಸ ಗೊಡ್ಯಾಗೋಳ, ರಮೇಶ ಉಪ್ಪಾರ ಸೇರಿದಂತೆ ಮೂಡಲಗಿ-ಗೋಕಾಕ ತಾಲೂಕಿನ ವಿವಿಧ ಗ್ರಾಮದ ಉಪ್ಪಾರ ಸಮಾಜ ಭಾಂದವರು ಭಾಗವಹಿಸಿದರು.
ಪೋಟೋ ಕ್ಯಾಪ್ಸನ್> ಮೂಡಲಗಿಯಲ್ಲಿ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸ ಬೇಕೆಂದು ಆಗ್ರಹಿಸಿ ಶುಕ್ರವಾರ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *