Breaking News

ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಪರೀಕ್ಷೆಗೆ ಹಾಜರಾಗಿರುವದು ಸರ್ವಕಾಲಿಕ ದಾಖಲೆ

Spread the love

ಮೂಡಲಗಿ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಕೌಶಲಗಳನ್ನು ರೂಪಿಸುವ ನಿಟ್ಟಿನಲ್ಲಿ ಶಿಷ್ಯವೇತನಕ್ಕಾಗಿ ನಡೆಯುವ ನ್ಯಾಶನಲ್ ಮೀನ್ಸ್ ಕಮ್ ಮೇರಿಟ್ ಸ್ಕಾಲರಶೀಫ್ (ಎನ್‌ಎಮ್‌ಎಮ್‌ಎಸ್) ಸ್ಪರ್ಧಾತ್ಮಕ ಪರೀಕ್ಷೆಗಳು ಮನೊಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಹಾಯಕವಾಗುತ್ತವೆ ಎಂದು ಚಿಕ್ಕೋಡಿ ಡೈಟ್ ಪ್ರಾಚಾರ್ಯ ಮೋಹನ ಜೀರಗ್ಯಾಳ ಹೇಳಿದರು.
ಅವರು ರವಿವಾರ ಪಟ್ಟಣದಲ್ಲಿ ಜರುಗಿದ ಎನ್‌ಎಮ್‌ಎಮ್‌ಎಸ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಭಿಪ್ರಾಯ ವ್ಯಕ್ತಪಡಿಸಿ, ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಪರೀಕ್ಷೆಗೆ ಹಾಜರಾಗಿರುವದು ಸರ್ವಕಾಲಿಕ ದಾಖಲೆಯಾಗಿರುತ್ತದೆ. ಇಲ್ಲಿಯ ಶಿಕ್ಷಕ ಸಮೂದಾಯ ಶಾಲಾ ಹಂತದಲ್ಲಿ ಮಕ್ಕಳನ್ನು ಇಂತಹ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುತ್ತಿರುವದು ಮೆಚ್ಚುವಂತಹದು. ಮಕ್ಕಳ ಉನ್ನತ ವ್ಯಾಸಂಗ ಹಾಗೂ ಸರ್ವಾಂಗೀಣ ಅಭಿವೃದ್ಧಿಯಾಗುವಲ್ಲಿ ಸ್ಪರ್ಧಾತ್ಮಕತೆ ಎನ್ನುವದು ಯಶಸ್ಸು ತರುವದಾಗಿ ಅಭಿಪ್ರಾಯ ಪಟ್ಟರು.
ಚಿಕ್ಕೋಡಿಯ ಡಿಡಿಪಿಐ ಕಛೇರಿ ಪ್ರಧಾನ ಮಂತ್ರಿ ಪೊಷನ್ ಅಭಿಯಾನದ ಶಿಕ್ಷಣಾಧಿಕಾರಿ ರಾಜೇಂದ್ರ ತೇರದಾಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಪಾಲಕ ಪೋಷಕರ ಹಾಗೂ ಶಿಕ್ಷಕರು ಪರೀಕ್ಷೆಗೆ ತಯಾರಾಗಿರುವದು ನೀಜಕ್ಕೂ ಮಾದರಿಯಾಗಿದೆ. ಸಕಲ ರೀತಿಯ ತಯಾರಿಯೊಂದಿಗೆ ಶಿಸ್ತು ಬದ್ದವಾಗಿ ಪರೀಕ್ಷೆಗಳು ನಗರದಲ್ಲಿ ಜರುಗಿವೆ. ವಿದ್ಯಾರ್ಥಿಗಳ ಜ್ಞಾನದ ಮಟ್ಟ ಪರೀಕ್ಷಿಸುವದರಾಗಿರುವದರಿಂದ ಮಾನಸಿಕವಾಗಿ ದೈಹಿಕವಾಗಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಪರೀಕ್ಷಾ ಬದ್ದತೆಯನ್ನು ತೋರಿಸಿದ್ದಾರೆ ಎಂದರು.
ಎನ್‌ಎಮ್‌ಎಮ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಪಟ್ಟಣದ ೧೬ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೪೦೩೮ ವಿದ್ಯಾರ್ಥಿಗಳ ಪೈಕಿ ೧೨೨ ಗೈರಾಗಿ ೩೯೧೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಪ್ರತಿಸಲದಂತೆ ಈ ಸಲವು ಮೂಡಲಗಿ ಶೈಕ್ಷಣಿಕ ವಲಯ ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಬಿಇಒ ಅಜಿತ ಮನ್ನಿಕೇರಿ ತಿಳಿಸಿದರು.
ಪರೀಕ್ಷಾ ಸಂದರ್ಭದಲ್ಲಿ ಚಿಕ್ಕೋಡಿ ಡಿಡಿಪಿಐ ಕಛೇರಿಯ ವಿಷಯ ನಿರ್ವಾಹಕರಾದ ಅರಿಹಂತ ಬಿರಾದಾರ ಪಾಟೀಲ, ಶಿಂದೆ, ಚಿಕ್ಕೋಡಿ ಡೈಟ್‌ನ ಕೆಂಪಣ್ಣ ತಳವಾರ, ಭಾರತಿ ಸನದಿ, ಮಲ್ಲಿಕಾರ್ಜುನ ನಾಮದಾರ, ಪರೀಕ್ಷಾ ನೋಡಲ ಅಧಿಕಾರಿ ಸತೀಶ ಬಿ.ಎಸ್, ಇಸಿಒ ಕರಿಬಸವರಾಜ ಟಿ, ಆರ್.ವಿ ಯರಗಟ್ಟಿ ಹಾಗೂ ಮುಖ್ಯಅಧಿಕ್ಷಕರು, ಸ್ಥಾನಿಕ ಜಾಗೃತ ದಳ, ಮಾರ್ಗಾಧಿಕಾರಿ, ಪರೀಕ್ಷಾ ಸಿಬ್ಬಂದಿ ಹಾಜರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಭದ್ರತೆಯೊದಗಿಸಲಾಗಿತ್ತು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *