Breaking News
Home / ಬೆಳಗಾವಿ / ಹರಪ್ಪ ನಾಗರೀಕತೆಯಿಂದ ಬೆಳೆದು ಬಂದು ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನಗಳಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಜನರಿಗೆ ಸೇವಾ ಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೇಟ್ಟಿಲಾಯಿತು

ಹರಪ್ಪ ನಾಗರೀಕತೆಯಿಂದ ಬೆಳೆದು ಬಂದು ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನಗಳಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಜನರಿಗೆ ಸೇವಾ ಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೇಟ್ಟಿಲಾಯಿತು

Spread the love


ಮೂಡಲಗಿ : ಹರಪ್ಪ ನಾಗರೀಕತೆಯಿಂದ ಬೆಳೆದು ಬಂದು ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನಗಳಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಜನರಿಗೆ ಸೇವಾ ಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೇಟ್ಟಿಲಾಯಿತು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಹೇಳಿದರು.

ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಸೇವಾಲಾಲ್ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡುತ್ತಾ ಸೇವಾಭಾಯ, ಸೇವಾಲಾಲ್ ಎಂಬ ನಾಮದೊಂದಿಗೆ ಬಡ ಜನರ ಅಜ್ಞಾನ ದೂರಮಾಡಲು ಭೀಮ ನಾಯ್ಕ ಮತ್ತು ಶ್ರೀಮತಿ ಧರ್ಮಿಣಿ ಮಾತೆ ಎಂಬ ದಂಪತಿಗಳ ಉದರದಲ್ಲಿ ಕರ್ನಾಟಕದ ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೋಪ್ಪ ಎಂಬಲ್ಲಿ ಈ ದೈವ ಪುರುಷನ ಜನನವಾಯಿತು ಎಂದು ಮಾತನಾಡಿದರು.

ಸಂಸ್ಥೆಯ ಸಂಸ್ಥಾಪಕ ಎಲ್.ವಾಯ್.ಅಡಿಹುಡಿ ಮಾತನಾಡುತ್ತಾ ಈ ದೈವ ಪುರುಷನನ್ನ ಮೋತಿವಾಲೋ ಲಾಲ್ ಮೋತಿ ಎಂದು ಕರೆಯುತ್ತಾರೆ. ಕಾರಣ ಮುಂಬಯಿಯ ಸ್ಮಿತ್ ಭಾವುಚಾ ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿ ಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದರು. ಅದಕ್ಕೆ ಪ್ರತಿಯಾಗಿ ಪೋರ್ಚುಗೀಸರು ಇವÀರಿಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಅದಕ್ಕಾಗಿ ಇವರನ್ನು ಮೋತಿವಾಲೋ ಎಂದು ಕರೆಯುತ್ತಾರೆ ಎಂದು ಹೇಳಿದರು.

ಪ್ರಧಾನ ಗುರುಗಳಾದ ಎಸ್.ವಿ.ಸೋಮವ್ವಗೊಳ ಮಾತನಾಡಿದರು ಕಾರ್ಯಕ್ರಮದಲ್ಲಿ, ಆರ್.ಎಲ್.ಲಮಾಣಿ ಪಿ.ಬಿ.ಚವ್ಹಾಣ ಸುನೀಲ ರಾಠೋಡ ಬಿ.ಎನ್. ಕಲ್ಡಾಪ್ಪಾಗೊಳ ಎಮ್.ಬಿ.ಇನಾಮ್‍ದಾರ ಹಾಗೂ ಮನೋಹರ. ಲಮಾಣಿ ಮಂಜುನಾಥ ಕುಂಬಾರ ಶಶಿಧರ ಆರಾಧ್ಯಾ ರಾಮಣ್ಣ ಮಂಟೂರ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ನೂರಾರು ಶಿಭಿರಾರ್ಥಿಗಳು ಭಾಗಿಯಾಗಿದ್ದರು.


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …