ಮೂಡಲಗಿ- ಮೂಡಲಗಿಯ ಶ್ರೀ ಶ್ರೀಪಾಧಬೋಧ ಸರಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾತನಾಡಿದರು
ಪ್ರಾಸ್ತಾವಿಕವಾಗಿ ಮಾತನಾಡಿದ, ಮಹಿಳಾ ಘಟಕದ ಸಂಯೋಜಕರಾದ. ಶೀತಲ ತಳವಾರ ಅವರು, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು
ಶಿವಬೋಧರಂಗ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ಡಾ.ರೇಖಾ ಬಿರಾದಾರ ಅವರು, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಸಾಧನೆ ತೋರುತ್ತಿದ್ದಾಳೆ. ಈ ಮಹಿಳಾ ದಿನಾಚರಣೆ ಎನ್ನುವುದು ವರ್ಷ ಪೂರ್ತಿ ನಡೆಯಬೇಕು. ಪ್ರಧಾನಿ, ರಾಷ್ಟ್ರಪತಿಗಳಂಥ ಸ್ಥಾನಗಳನ್ನು ಅಲಂಕರಿಸಿರುವ ಮಹಿಳೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದಾಗಬೇಕಾಗಿದೆ. ಅದಕ್ಕಾಗಿ ಮಹಿಳೆಗೆ ಶಿಕ್ಷಣ ದೊರಕುವ ಅಗತ್ಯವಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶ, ಸಮಾನ ವೇತನ ಕೂಡ ದೊರೆಯಬೇಕಾದ ಅವಶ್ಯಕತೆಯಿದೆ ಎಂದರು.
ಸ್ವಾಮಿ ವಿವೇಕಾನಂದ ಸಂಸ್ಥೆಯ ಉಪಾಧ್ಯಕ್ಷ ಉಮೇಶ ಬೆಳಕೂಡ ಮಾತನಾಡಿ, ಮಹಿಳೆಯರಿಗೆ ಹಕ್ಕು ಬಾಧ್ಯತೆ ಗಳು ಜನ್ಮದಿಂದಲೇ ಬಂದಿವೆ. ಅವುಗಳ ಬಗ್ಗೆ ಎಲ್ಲ ಮಹಿಳೆಯರಿಗೆ ತಿಳಿವಳಿಕೆ ಇರಬೇಕು. ಅವರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಮಹಿಳಾ ಜಾಗೃತಿಯು ಮನೆಯಿಂದಲೇ ಆರಂಭವಾಗಬೇಕು ಎಲ್ಲರೂ ತಂತಮ್ಮ ಮನೆಯ ಪುರುಷರಿಗೆ ಮಹಿಳಾ ರಕ್ಷಣೆಯ ಬಗ್ಗೆ ಅರಿವು ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಆರ್ ಬಿ ಕೊಕಟನೂರ ಅವರು ಮಾತನಾಡಿ, ಪ್ರಾಚೀನ ಕಾಲದಿಂದಲೂ ಮಹಿಳೆಯರು ಎಲ್ಲ ಕಾರ್ಯಕ್ರಮಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತ ಬಂದಿದ್ದಾರೆ. ಆದರೆ ಮಹಿಳೆಯರ ಮೇಲೆ ಶೋಷಣೆ ಇತ್ತೀಚೆಗೆ ಹೆಚ್ಚಾಗುತ್ತ ಬಂದಿದೆ. ಆದರೂ ಅನೇಕ ಸಂಘ ಸಂಸ್ಥೆಗಳು ಸರ್ಕಾರಗಳ ವತಿಯಿಂದ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಕಾರ್ಯ ಆಗುತ್ತಿದೆ. ಎಲ್ಲ ಇಲಾಖೆಗಳಲ್ಲಿಯೂ ಇಂದು ಮಹಿಳೆಯರು ರಾರಾಜಿಸುತ್ತಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಶೇರೆಗಾರ ಮತ್ತು ಆಶಾ ಕಾರ್ಯಕರ್ತೆ ಇಂದುಮತಿ ರಾಜನಾಳ ಅವರನ್ನು ಸನ್ಮಾನ ಮಾಡಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಸಂತ್ರಾಮ ನಾಶಿ ಉಪಸ್ಥಿತರಿದ್ದರು.ಸೌಭಾಗ್ಯ ಕರಡಿಮಠ ವಂದಿಸಿದರುು.
ವರದಿ: ಕೆ.ವಾಯ್.ಮೀಶಿ