ಶಿಕ್ಷಣಾಧಿಕಾರಿಗಳ ಮಾತಿಗೆ ಕಿವಿ ಕೋಡದ ಖಾಸಗಿ ಶಿಕ್ಷಣ ಸಂಸ್ಥೆಗಳು
ಮೂಡಲಗಿ :
ಮಾನ್ಯ ಆಯುಕ್ತರು ಶಿಕ್ಷಣ ಇಲಾಖೆ ಬೆಂಗಳೂರು ರವರ ಸುತ್ತೋಲೆ ದಿನಾಂಕ:13-3-2020ರನ್ವಯ ಕಡ್ಡಾಯವಾಗಿ ಕ್ರಮ ವಹಿಹಿಸಿರಿ. 1ರಿಂದ 6 ನೆಯ ತರಗತಿ ಶಾಲೆಗಳುಗೆ ದಿನಾಂಕ14-3-2020 ರಿಂದ ಕಡ್ಡಾಯವಾಗಿ ಬೇಸಿಗೆ ರಜೆ ಘೋಷಣೆ ಮಾಡಿದೆ.
ಕಾರಣ ಮಕ್ಕಳು ಶಾಲೆಗೆ ನಾಳೆಯಿಂದ ಹಾಜರಾಗದಂತೆ ಕ್ರಮ ವಹಿಸಿರಿ. ಶಿಕ್ಷಕರಿಗೆ ಮಾತ್ರ ರಜೆ ಇರುವುದಿಲ್ಲ
ನಂತರ ಇಗಾಗಲೇ ದಿನಾಂಕ:23-3-2020 ರೊಳಗೆ 7 ರಿಂದ 9 ನೆಯ ತರಗತಿ ಮಕ್ಕಳಿಗೆ ಪರೀಕ್ಷೆ ಮುಗಿಸಿ ಅವರಿಗೂ ರಜೆಗೆ ಕಳಿಸಿರಿ. ಎಸ್ ಎಸ್ ಎಲ್ ಪರೀಕ್ಷೆ ಗಳು ನಿಗಧಿತ ದಿನಾಂಕ ದಂತೆ ನಡೆಯುತ್ತವೆ ಎಂದುಬ ತಿಳಿಸಿರಿ. ಮಕ್ಕಳು ಮಾಸ್ಕ ಹಾಕಿಕೊಂಡು ಬಂದರೆ ಅವಕಾಶ ನೀಡಿರಿ. ಸದರಿ ಸುತ್ತೋಲೆಯ ಸೂಚನೆಗಳನ್ನು
ಕಡ್ಡಾಯವಾಗಿ ಅನುಪಾಲನೆ ಮಾಡಲು ತಿಳಿಸಿದೆ.
ಆದೇಶದಂತೆ ಮೂಡಲಗಿನಲ್ಲಿ ಎಲ್ಲ ಶಾಲಾ ಕಾಲೇಜುಗಳು ರಜೆ ನೀಡಿದರೆ ಇನ್ನು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದಾರೆ.
ಇದರ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತಂದರೆ ಅವರಮಾತಿಗು ಕಿವಿ ಕೊಡದೆ ಇರೋದು ವಿಪರ್ಯಾಸದ ಸಂಗತಿಯಾಗಿದೆ.
ಈ ವಿಷಯದ ಬಗ್ಗೆ ಉಪನಿರ್ದೇಶಕ ಶಿಕ್ಷಣ ಇಲಾಖೆ ಚಿಕ್ಕೋಡಿ ಇವರ ಗಮನಕ್ಕೆ ತಂದಾಗ ತ್ವರಿತವಾಗಿ ಸ್ಪಂದಿಸಿ ಶಿಕ್ಷಣ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಆ ಸಂಸ್ಥೆಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ರಜೆ ನೀಡುವಂತೆ ಕ್ರಮ ಕೈಗೊಂಡಿದ್ದಾರೆ.