Breaking News
Home / ರಾಜ್ಯ>ಬೆಳಗಾವಿ / ಸತೀಶ ಜಾರಕಿಹೊಳಿ ಗೆಲವು ನಿಶ್ಚತ ಮಾಜಿ ಸಚಿವ ಪುಟ್ಟರಂಗ ಶೆಟ್ಟಿ

ಸತೀಶ ಜಾರಕಿಹೊಳಿ ಗೆಲವು ನಿಶ್ಚತ ಮಾಜಿ ಸಚಿವ ಪುಟ್ಟರಂಗ ಶೆಟ್ಟಿ

Spread the love

ಮೂಡಲಗಿ: ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷದಷ್ಟು  ಉಪ್ಪಾರ ಸಮಾಜದ ಮತದಾರರು ಇದ್ದು, ಸಮಜ ಭಾಂಧವರಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೇಸ್ ಅಭ್ಯರ್ಥಿಯಾದ ಸತೀಶ ಜಾರಕಿಹೊಳಿ ಪರ ಮತಯಾಚಿಸುತ್ತಿದು ಈ ಚುನಾವಣೆಯಲ್ಲಿ ಜಾರಕಿಹೊಳಿ ಗೆಲವು ನಿಶ್ಚತ ಎಂದು ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರಂಲದು ಗೋಕಾಕ-ಅರಭಾವಿ ಮತಕ್ಷೇತ್ರದ ಮಲ್ಲಾಪೂರ ಪಿಜಿ, ಬಡಿಗವಾಡ, ದುರದುಂಡಿ, ತುಕ್ಕಾನಟ್ಟಿ, ನಾಗನೂರ ಹಾಗೂ ಮೂಡಲಗಿ ಕಾಂಗ್ರೇಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಮತಯಾಚಿಸಿ ನಂತರ ಸ್ಥಳಿಯ ಕಾಂಗ್ರೇಸ್ ಮುಖಂಡ ಭೀಮಪ್ಪ ಹಂದಿಗುಂದ ಅವರ ನಿವಾಸದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೇಸ್ ಪಕ್ಷ ನಮ್ಮ ಉಪ್ಪಾರ ಸಮಾಜಕ್ಕೆ ರಾಜಕೀಯ ಸ್ಥಾನ ಮಾನ ಕೋಡುವುದರ ಜೋತೆ ದೇವರಾಜ ಅರಸು ಕಾಲದಿಂದ ನಮ್ಮ ಸಮಾಜಕ್ಕೆ ಸ್ಥಾನ ಮಾನ ಕೊಟ್ಟು ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜ ಇದೇ ಎಂಬ ಪತ್ತೆ ಮಾಡಿದೆ ಕಾಂಗ್ರೇಸ್ ಪಕ್ಷ, ನಮ್ಮ ಉಪ್ಪಾರ ಸಮಾಜಕ್ಕೆ ಪ್ರ ವರ್ಗ 1ರಲ್ಲಿ ಸೇರಿಸಿದ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಸಲ್ಲುತ್ತದೆ, ಸಿದ್ರಾಮಯ್ಯಾ ಸರಕಾರ ಇದ್ದಾಗ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಅನೇಕ ಯೋಜನೆಗಳನ್ನು ನಮ್ಮ ಸಮಾಜಕ್ಕೆ ನೀಡಿದ್ದಾರೆ ಆದರಿಂದ ಬೆಳಗಾವಿಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಸರಳ ಸಜ್ಜನಿಕೆಯ ವ್ಯಕ್ತಿಯಾದ ಸತೀಶ ಜಾರಕಿಹೊಳಿ ಅವರಿಗೆ ಎಲ್ಲ ಸಮೂದಾಯದ ಜನರ ವಿಶ್ವಾಸಕ್ಕೆ ತೆಗೆದುಕೊಂಡು ಮತ ನೀಡಬೇಕೆಂದರು.

ಈ ಸಂದರ್ಭದಲ್ಲಿ ಪುನರ್ ವಸತಿ ಕೇಂದ್ರ ಮಾಜಿ ಅಧ್ಯಕ್ಷ ಯು ವೆಂಕೊಬ್ಬ, ವಿಜಯಪುರ ಮಾಜಿ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಮುಖಂಡರಾದ ಭೀಮಶಿ ಹಂದಿಗುAದ, ರಾಮಣ್ಣ ತೋಳಿ, ಅರ್ಜುನ ನಾಯವಾಡಿ, ಭೀರಣ್ಣ ಉಪ್ಪಾರ, ಸುಭಾಷ ಪೂಜೇರಿ, ಗುರುರಾಜ ಪೂಜೇರಿ, ರಾಮಣ್ಣ ಹಂದಿಗುAದ, ಎಲ್ ವೈ ಅಡಿಹುಡಿ, ಗುರುನಾಥ ಗಂಗನ್ನವರ ಹಾಗೂ ಅನೇಕ ಸಮಾಜ ಮುಖಂಡರು ಉಪಸ್ಥಿತರಿದ್ದರು.

ಬಾಕ್ಸ್ ನ್ಯೂಸ್ : ಸಚಿವ ಪ್ರಲ್ಹಾದ ಜೋಶಿಗೆ ತಿರುಗೇಟ್ಟು ನೀಡಿದಪುಟ್ಟರಂಗ ಶೆಟ್ಟಿ :  ಕಾಂಗ್ರೇಸ್ ಪಕ್ಷವು ನಸಿಸಿ ಹೋಗುತ್ತಿದೆ ಇನ್ನೂ ಮುಂದೆ ದುರಂಬಿನ್ನು ಹಾಕಿ ಹೊಡುಕಬೇಕು ಎಂದು ಹೇಳಿದ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆಗೆ ಪ್ರತಿಕ್ರೀಯಿಸಿದ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಬರಿ ಸುಳ್ಳು ಭರವಸೆಗಳನ್ನು ನೀಡಿ ಜನತೆಗೆ ಮೋಸ ಮಾಡುತ್ತಿವೆ. ಅವರು ಬರಿ ಮಾತಿನ ಮಲ್ಲರಾಗಿದ್ದಾರೆ ರೈತರ ಬೇಡಿಕೆಗಳನ್ನು ಈರೇಡಿಸದಿರುವುದು, ಬೆಲೆ ಏರಿಕೆ ಇವೆ ಬಿಜೆಪಿ ಪಕ್ಷದ ಸಾಧನೆಗಳು ಎಂದು ಬಿಜೆಪಿ ವಿರುದ್ದ  ವೆಂಗ್ಯವಾಡಿದರು.


Spread the love

About Ad9 Haberleri

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …