Breaking News

ಭದ್ರತಾ ಪಡೆಗಳ ಪ್ರಥಸಂಚಲ : ವಿನಾಕಾರಣ ಹೊರೆಗೆ ಬಂದರೆ ಕಠಿಣ ಕ್ರಮ ತಹಶೀಲ್ದಾರ ಭಸ್ಮೆ

Spread the love

ಮೂಡಲಗಿ: ಜಿಲ್ಲಾದ್ಯಾಂತ 22ರಿಂದ 24ರ ವರೆಗೂ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಘೋಷಣೆ ಹಿನ್ನೆಲೆ ಭದ್ರತಾ ಬಗ್ಗೆ ಸಾರ್ವಜನಿಕರಿಗೆ ಮನೆ ಬಿಟ್ಟು ಹೊರಗೆ ಬರದಂತೆ ಪಥಸಂಚಲನ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಹೇಳಿದರು.

ಬುಧುವಾರದಂದು ತಹಶೀಲ್ದಾರ ಕಚೇರಿ ಹಾಗೂ ಪೊಲೀಸ್ ಇಲಾಖೆಯ ಸಯೋಗದಲ್ಲಿ ಜರುಗಿದ ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಪಥಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿನಾಕಾರಣ ಸಾರ್ವಜನಿಕರು ಓಡಾಡಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಆದರಿಂದ ತಮ್ಮ ಜೀವ ರಕ್ಷಿಸಲು ಇಡೀ ತಾಲೂಕಾಡಳಿತವೇ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದಾ ಸಾರ್ವಜನಿಕರ ಸೇವೆಗೆ ಇಡೀ ತಾಲೂಕಾಡಾಳಿತ ನಿಮ್ಮ ಜೊತೆಗೆ ಇರುತ್ತದೆ. ಕೊರೋನಾ ತಡೆಗಟ್ಟಲು ಹೋರಾಡುತ್ತಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಹೇಳಿದರು.

ಪಿಎಸ್‍ಐ ಎಚ್,ವೈ. ಬಾಲದಂಡಿ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪಥಸಂಚಲನ ಮಾಡಿ ಸಂಪೂರ್ಣ ಲಾಕ್‍ಡೌನ್ ಬಗ್ಗೆ ಜಾಗೃತಿ ಮೂಡಿಸಲಾಗುವುದು ಹಾಗೂ ಸಾರ್ವಜನಿಕರು ಇಷ್ಟು ದಿನ ನಮ್ಮ ಇಲಾಖೆಯ ಜೊತೆ ಸಹಕಾರ ನೀಡುತ್ತಾ ಬಂದಿದ್ದಾರೆ. ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಇರುವುದುರಿಂದ ಸಾರ್ವಜನಿಕರು ಹೊರಗೆ ಬರದೆ ಸಹಕಾರ ನೀಡಿ ತಮ್ಮ ಜೀವವನ್ನು ರಕ್ಷಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಕರ್ನಾಟಕ ರಾಜ್ಯ ಶಶಸ್ತ್ರ ಪೊಲೀಸ್ ಮೀಸಲು ಪಡೆ, ಸ್ಥಳೀಯ ಸಿಬ್ಬಂದಿಗಳು ಇದ್ದರು.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …