ಮೂಡಲಗಿ : ಲಾಕ್‍ಡೌನ್ ಸಂದರ್ಭದಲ್ಲಿ ಪರ್ಯಾಯ ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಪಟ್ಟಣದ ವಿವಿಧ ಪತ್ರಿಕಾ ವಿತರಕರಿಗೆ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ್ ಅವರ ಅಭಿಮಾನಿ ಬಳಗದಿಂದ ಸೋಮವಾರ ಆಹಾರ ಕಿಟ್ ವಿತರಿಸಲಾಯಿತು.
ಈ ವೇಳೆ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ಪತ್ರಿಕಾ ವಿತರಕರು ಚಳಿ, ಮಳೆ ಲೇಕ್ಕಿಸದೇ ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿಯೂ ಬೆಳಗಿನ ಜಾವ ಎದ್ದು ಮನೆ ಮನೆಳಿಗೆ ಪತ್ರಿಕೆ ವಿತರಿಸುವ ಕಾರ್ಯ ಶ್ಲಾಘನೀಯ. ಇಡೀ ದೇಶದ ಸಮಾಚಾರವನ್ನು ಜನರು ಓದಲು ಮನೆ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ವಿತರಕರ ಲಾಕ್‍ಡೌನ್ ಸಂಕಷ್ಟದ ಹಿನ್ನೆಲೆ ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ್ ಅವರ ಅಭಿಮಾನಿ ಬಳಗದಿಂದ ಆಹಾರ ಕಿಟ್ ನೀಡಿದ್ದು ಒಂದು ಒಳ್ಳೆಯ ಕಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜದ ಪತ್ರಿಯೊಬ್ಬರೂ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಾಧ್ಯವಾದಷ್ಟು ನೆರವಿಗೆ ಧಾವಿಸುವುದು ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಗೋಕಾಕ ಬಿಜೆಪಿ ಬ್ಲಾಕ್ ಅಧ್ಯಕ್ಷ ಭೀಮಶಿ ಭರಮಣ್ಣವರ, ಅಡವೇಶ ಮಜ್ಜಗಿ, ಮುತ್ತು ಜಮಖಂಡಿ, ಶಿವು ಹಿರೇಮಠ, ಸತೀಶ ಮನ್ನಿಕೇರಿ ಪತ್ರಕರ್ತರಾದ ಕೃಷ್ಣ ಗಿರೆನ್ನವರ, ಮಲ್ಲು ಬೋಳನವರ, ಭೀಮಶಿ ತಳವಾರ, ಹಣಮಂತ ಕಂಕಣವಾಡಿ, ಯಾಕೂಬ ಸಣ್ಣಕ್ಕಿ, ಸುಭಾಷ ಕಡಾಡಿ ಹಾಗೂ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.