ಹೌದು ಇದು ಮೂಡಲಗಿಯ ಪುರಸಭೆ ಎದುರುಗಡೆ ಇರುವ ಜಾಗದಲ್ಲಿ ನಿರ್ಮಾಣವಾಗಿದೆ ಸೆಡ್
ಪುರಸಭೆಯ ಎದುರುಗಡೆ ಇರುವ ಗೇಟ್ ಬಳಿ ಹೋಗುವ ಬಲಭಾಗ ದಲ್ಲಿ ನಿರ್ಮಾಣವಾಗಿದೆ. ಇದೇ ರೀತಿ ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಖುಲ್ಲಾ ಜಾಗವೆಲ್ಲಾ ಅತಿಕ್ರಮ ವಾಗುತ್ತಿವೆ ಸಾರ್ವಜನಿಕರು ತಮಗೆ ಬೇಕಾದ ಖಾಲಿ ಜಾಗದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಹಾಕುತ್ತಿದ್ದಾರೆ.
ಇದಕ್ಕೆ ಪುರಸಭೆ ಅಧಿಕಾರಿಗಳು ಸದಸ್ಯರು ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಖಾಲಿ ಜಾಗದಲ್ಲಿ ಕೆಲವು ವ್ಯಕ್ತಿಗಳು ಸೆಡ್ ಹಾಕಿಕೊಂಡು ಬೇರೆ ಅವರಿಗೆ ಬಾಡಿಗೆ ಕೊಡುತ್ತಿದ್ದಾರೆ.
ಪುರಸಭೆ ಎದುರುಗಡೆ ಇರುವ ಮಳಿಗೆ ಗಳಲ್ಲಿ ಹಲವಾರ ಅಂಗಡಿ ಮಳಿಗೆಗಳಿಗೆ ಬಾಡಿಗೆ ಇದು ಒಬ್ಬರ ಹೆಸರು ಎರಡೆರಡು ಮಳಿಗೆಗಳು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಇರುವ ಮಳಿಗೆಗಳನ್ನು ಬೇರೆಯವರಿಗೆ ಬಾಡಿಗೆ ಕೊಟ್ಟಿದ್ದಾರೆ.
ಇದ್ದನ್ನು ನೋಡಿದ ಅಧಿಕಾರಿಗಳು ಎಲ್ಲರೂ ಸುಮ್ಮನೆ ಕುಳಿತಿದ್ದಾರೆ ಇಂತಹ ಅಧಿಕಾರಿಗಳು ಇದ್ದರೆ ಮೂಡಲಗಿ ಅಭಿವೃದ್ಧಿಯಾಗುವುದು ಕನಸಿನ ಮಾತಾಗಿದೆ.