Breaking News

ಮಠಗಳಿಗೆ ಭಕ್ತರೇ ನಿಜವಾದ ಆಸ್ತಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love


ಮೂಡಲಗಿ : ಮಠ-ಮಾನ್ಯಗಳಿಗೆ ಭಕ್ತ ಸಮುದಾಯವೇ ನಿಜವಾದ ಆಸ್ತಿ. ಶ್ರೀ ಮಠದ ಶ್ರೇಯೋಭಿವೃದ್ಧಿಗೆ ಭಕ್ತರೂ ಸಹ ತಮ್ಮ ತನು-ಮನ-ಧನದಿಂದ ಸಹಕಾರ ನೀಡುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.


ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ರವಿವಾರ ಸಂಜೆ ಜಡಿಸಿದ್ಧೇಶ್ವರ ಮಠದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಮಠಗಳ ಉನ್ನತಿಗಾಗಿ ಈ ಭಾಗದಲ್ಲಿ ಧಾರ್ಮಿಕ ವಾತಾವರಣ ನಿರ್ಮಿಸುತ್ತಿರುವ ಮಠಗಳಿಗೆ ಭಕ್ತರು ತಮ್ಮ ವೈಯಕ್ತಿಕ ಮನಸ್ತಾಪಗಳನ್ನು ಮರೆತು ಅಭಿವೃದ್ಧಿಗೆ ಕೈ ಜೋಡಿಸುವಂತೆ ಅವರು ಕೋರಿದರು.
ಈ ಭಾಗದಲ್ಲಿ ಜಡಿಸಿದ್ಧೇಶ್ವರ ಮಠಕ್ಕೆ ತನ್ನದೇಯಾದ ವಿಶಿಷ್ಟ ಹಿನ್ನೆಲೆ ಮತ್ತು ಇತಿಹಾಸವಿದೆ. ಜೊತೆಗೆ ಉತ್ತಮ ಧಾರ್ಮಿಕ ವಾತಾವರಣ ನಿರ್ಮಾಣವಾಗಿದೆ. ಮಠದ ಸದ್ಭಕ್ತರು ಸಹ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಶ್ರೀಮಠದ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕು. ನಮ್ಮ ಭಾರತೀಯರಲ್ಲಿ ಆಚಾರ ವಿಚಾರ, ಸಂಸ್ಕøತಿ ಅಗಾಧವಾಗಿದೆ. ದೇವರ ನಾಮಸ್ಮರಣೆಯನ್ನು ಮಾಡುತ್ತ ತಮ್ಮಲ್ಲಿಯ ಆಸೆ-ಆಕಾಂಕ್ಷೆಗಳ ಈಡೇರಿಕೆಗೆ ದೇವರಲ್ಲಿ ಮೊರೆ ಹೋಗುತ್ತಾರೆ. ಎಲ್ಲ ಧರ್ಮಿಯರೂ ಸಹ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತ ಪರಸ್ಪರ ಸಹೋದರತ್ವ ಭಾವನೆಯಿಂದ ಬದುಕುತ್ತಿರುವುದರಿಂದ ವಿಶ್ವದಲ್ಲಿಯೇ ಭಾರತ ಧಾರ್ಮಿಕತೆಯಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಿದರು.


ಅರಭಾವಿ ಕ್ಷೇತ್ರದಲ್ಲಿ ಕಳೆದ 17 ವರ್ಷಗಳಿಂದ ನನ್ನನ್ನು ಪ್ರೀತಿ-ವಿಶ್ವಾಸದಿಂದ ಆಯ್ಕೆ ಮಾಡುತ್ತ ಬಂದಿರುವಿರಿ. ನಿಮ್ಮಗಳ ಋಣಭಾರ ನನ್ನ ಮೇಲಿದೆ. ನಿಮ್ಮ ಈ ಋಣವನ್ನು ತೀರಿಸಲು ಅಭಿವೃದ್ಧಿ ಮೂಲಕ ತೀರಿಸಲು ಪ್ರಾಮಾಣ ಕ ಪ್ರಯತ್ನ ಮಾಡುತ್ತೇನೆ. ಪ್ರತಿ ಸಂದರ್ಭದಲ್ಲೂ ಸ್ವಾಮೀಜಿಗಳು ತಮ್ಮ ಭಾಷಣದಲ್ಲಿ ಬಾಲಚಂದ್ರ ಅವರಂತಹ ಶಾಸಕರನ್ನು ಪಡೆದಿರುವುದು ನಮ್ಮಗಳ ಪುಣ್ಯವೆಂದು ಹೇಳುತ್ತಿರುತ್ತಾರೆ. ಆದರೆ ಅರಭಾವಿ ಕ್ಷೇತ್ರದಂತಹ ಮತದಾರರನ್ನು ಪಡೆದಿರುವುದು ನನ್ನ ಸೌಭಾಗ್ಯವೆಂದು ನಾನು ಹೇಳುತ್ತೇನೆ. ಅಷ್ಟೊಂದು ಅಗಾಧವಾದ ವಿಶ್ವಾಸ ಮತ್ತು ಗೌರವವನ್ನು ನನ್ನ ಮೇಲಿಟ್ಟು ಪ್ರತಿ ಹಂತದಲ್ಲೂ ನನಗೆ ಬೆನ್ನೆಲಬಾಗಿ ನಿಲ್ಲುತ್ತಿದ್ದರಿಂದ ನನ್ನ ಶಕ್ತಿ ಇಮ್ಮಡಿಯಾಗುತ್ತಿದೆ ಎಂದು ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಪೂಜ್ಯರು ಪುಷ್ಪಾರ್ಚಣೆ ಮಾಡಿ ಅಭಿನಂದನೆ ಸಲ್ಲಿಸಿದರು.
ಗೋಕಾಕದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾಮಾಜಿಕ, ಧಾರ್ಮಿಕ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸುಣಧೋಳಿ ಮಠದಲ್ಲಿ ಉದ್ಭವಿಸಿದ ಬಿಕ್ಕಟ್ಟನ್ನು ನಿವಾರಣೆ ಮಾಡಲು ಬಾಲಚಂದ್ರ ಜಾರಕಿಹೊಳಿ ಅವರು ಪ್ರಯತ್ನಪಟ್ಟು ಅದರಲ್ಲಿ ಯಶಸ್ವಿ ಕೂಡ ಆದರು. ಇದರಿಂದ ಶ್ರೀ ಮಠದಲ್ಲಿ ಸ್ವಾಮೀಜಿಗಳು ಮತ್ತು ಭಕ್ತರ ಮಧ್ಯ ಅವಿನಾಭಾವ ಸಂಬಂಧ ಮೂಡಲು ಕಾರಣರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಣಧೋಳಿ ಶಿವಾನಂದ ಮಹಾಸ್ವಾಮಿಗಳು, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸೊಗಲದ ಚಿದಾನಂದ ಸ್ವಾಮಿಗಳು, ತಿಗಡಿಯ ಶಂಕರಾನಂದ ಸ್ವಾಮಿಗಳು ಉಪಸ್ಥಿತರಿದ್ದರು.
ಮುಖಂಡರಾದ ಡಾ.ರಾಜೇಂದ್ರ ಸಣ್ಣಕ್ಕಿ, ಸಂತೋಷ ಸೋನವಾಲಕರ, ಸಿ.ಎಸ್. ವಾಲಿ, ಕಲ್ಲಪ್ಪ ಕಮತಿ, ಭೀಮಶಿ ಹೂವಣ್ಣವರ, ಗುರುರಾಜ ಪಾಟೀಲ, ಸಿದ್ಧಾರೂಢ ಕಮತಿ, ಮುರಿಗೆಪ್ಪ ಪಾಟೀಲ, ರುದ್ರಪ್ಪ ಹಳಗಲಿ, ಬಸವರಾಜ ಪಾಶಿ, ಮಹಾದೇವ ಹಾರೂಗೇರಿ, ಬಸು ಪಾಟೀಲ, ಶಿದ್ಲಿಂಗ ಅಜ್ಜಪ್ಪನವರ, ಕಲ್ಲಪ್ಪ ಚೌಗಲಾ, ಭೀಮಪ್ಪ ಕಮತಿ, ಶಿವಾನಂದ ವಾಲಿ, ಮಾರುತಿ ಸುಣಧೋಳಿ, ಬಸಪ್ಪ ಪಾಟೀಲ, ಬಸಪ್ಪ ಕರಾಳಿ, ಮಾರುತಿ ಹೊರಟ್ಟಿ, ಈರಪ್ಪ ಹಟ್ಟಿ, ಸಹದೇವ ಕಮತಿ, ಶ್ರೀಕಾಂತ ದೇವನಗಳ, ಮುಂತಾದವರು ಉಪಸ್ಥಿತರಿದ್ದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …