Breaking News
Home / ಮೂಡಲಗಿ / ವಿರೋಧಿಗಳ ಸುಳ್ಳು ವದಂತಿಗಳನ್ನು ನಂಬಬೇಡಿ

ವಿರೋಧಿಗಳ ಸುಳ್ಳು ವದಂತಿಗಳನ್ನು ನಂಬಬೇಡಿ

Spread the love

*ಕಳೆದ ಸೋಮವಾರದಂದು ನಡೆದ ತುಕ್ಕಾನಟ್ಟಿ ಜಿಪಂ ವ್ಯಾಪ್ತಿಯ ಪ್ರಮುಖರ ಸಭೆಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ*

ತುಕ್ಕಾನಟ್ಟಿ(ತಾ:ಮೂಡಲಗಿ) : ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಕೊನೆಯ ಭಾಗದ ರೈತರಿಗೆ ಕಾಲುವೆಗಳಿಂದ ಸಮರ್ಪಕವಾಗಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಕುಡಿಯುವ ನೀರಿನ ಸಮಸ್ಯೆಗಳು ತಲೆದೋರದಂತೆ ಕೆಲಸ ಮಾಡುತ್ತಿರುವುದಾಗಿ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಕಳೆದ ದಿ. 27 ರಂದು ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಗುಡಗುಡಿ ತೋಟದಲ್ಲಿ ತುಕ್ಕಾನಟ್ಟಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪ್ರಮುಖರ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ರೈತರ ಹಿತಾಸಕ್ತಿಗೆ ಅನುಗುಣವಾಗಿ ಕೃಷಿ ಚಟುವಟಿಕೆಗಳು ಮತ್ತು ಕುಡಿಯುವ ನೀರಿನ ಉದ್ಧೇಶಗಳಿಗಾಗಿ ಪ್ರತಿ ಎಪ್ರೀಲ್ ತಿಂಗಳ ಕೊನೆಯತನಕ ಕಾಲುವೆಗಳಿಗೆ ನೀರನ್ನು ಹರಿಸುತ್ತಿರುವುದಾಗಿ ಹೇಳಿದರು.


ಪ್ರತಿ ಫೆಬ್ರುವರಿ ತಿಂಗಳತನಕ ಮಾತ್ರ ಹಿಡಕಲ್ ಜಲಾಶಯದಿಂದ ನೀರನ್ನು ಬಿಡಲಾಗುತ್ತಿತ್ತು. ಆದರೆ ನಮ್ಮ ಭಾಗದ ರೈತರಿಗೆ ಕೃಷಿ ಕೆಲಸ ಕಾರ್ಯಗಳಿಗಾಗಿ ಎಪ್ರೀಲ್‍ತನಕವೂ ಹಿಡಕಲ್ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ರೈತರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತುಕ್ಕಾನಟ್ಟಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಲೀಡ್ ನೀಡಿ ಗೆಲ್ಲಿಸುವ ಹೊಣೆ ನಿಮ್ಮದಾಗಿದೆ. ಅಭಿವೃದ್ಧಿ ವಿಷಯವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಅಭಿವೃದ್ಧಿಯೊಂದೇ ನನಗೆ ಮುಖ್ಯ ವಿಷಯವಾಗಿದೆ. ಕೆಲ ರಾಜಕೀಯ ವಿರೋಧಿಗಳು ಎಷ್ಟೇ ಜನಪರ ಕೆಲಸಗಳನ್ನು ಮಾಡಿದರೂ ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ರಸ್ತೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ ಬಾಕಿ ಉಳಿದ ಕೇವಲ 100 ಮೀಟರ್ ರಸ್ತೆಯನ್ನು ಮಾಡಿಲ್ಲವೆಂದು ಬಿಂಬಿಸುತ್ತಿದ್ದಾರೆ. ಇನ್ನುಳಿದ ಕೆಲಸ ಮುಗಿದರೂ ಅದು ಅವರ ಗಮನಕ್ಕೆ ಬರುತ್ತಿಲ್ಲ. ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಗಮನ ನೀಡದೇ ಅಭಿವೃದ್ಧಿ ಬಯಸುವ ವ್ಯಕ್ತಿಯನ್ನು ಆಯ್ಕೆ ಮಾಡಿ ಜನಸೇವೆಗೆ ಅವಕಾಶ ಮಾಡಿಕೊಡುವಂತೆ ತಿಳಿಸಿದರು.
ಕೇವಲ ಚುನಾವಣೆಗೊಮ್ಮೆ ಬಂದು ಹೋಗುವ ವ್ಯಕ್ತಿಗಳನ್ನು ನಂಬಬೇಡಿ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ. ಸುಳ್ಳು ವದಂತಿಗಳನ್ನು ಸೃಷ್ಟಿಸುವುದೇ ಅವರ ದಿನನಿತ್ಯ ಕೆಲಸವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ ಶಾ, ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸಮರ್ಥ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ. ಇದರಲ್ಲಿ ಎರಡು ಮಾತಿಲ್ಲವೆಂದು ಅವರು ಹೇಳಿದರು.
ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ವಾರದೊಳಗೆ ಚುನಾವಣೆಯ ದಿನಾಂಕ ನಿಗದಿಯಾಗಬಹುದು. ಯಾರು ಎಷ್ಟೇ ವದಂತಿಗಳನ್ನು ಹಬ್ಬಿಸುತ್ತಿದ್ದರೂ ಅವುಗಳಿಗೆ ಕಿವಿಗೊಡಬೇಡಿ. ಬಿಜೆಪಿಯನ್ನು ಆಶೀರ್ವದಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಎಲ್ಲರೂ ಬೇರುಮಟ್ಟದಿಂದ ಕೆಲಸ ನಿರ್ವಹಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಬೆಂಗಳೂರು ಎಸ್‍ಎಲ್‍ಡಿಪಿ ನಿರ್ದೇಶಕ ರಾಜು ಬೈರುಗೋಳ, ಘಯೋನೀಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ನಿರ್ದೇಶಕ ಬಸವರಾಜ ಪಂಡ್ರೊಳ್ಳಿ, ಪ್ರಭಾಶುಗರ ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಮಾಳಪ್ಪ ಜಾಗನೂರ, ಮುಖಂಡರಾದ ಸಿದ್ದಪ್ಪ ಹಮ್ಮನ್ನವರ, ಶಿವಪ್ಪ ಮರ್ದಿ, ಶಿವಮೂರ್ತಿ ಹುಕ್ಕೇರಿ, ಕಲ್ಲಪ್ಪ ಚೌಕಾಶಿ, ವಾಸಪ್ಪ ಪಂಡ್ರೊಳ್ಳಿ, ರಾಮಚಂದ್ರ ಪಾಟೀಲ, ಶಿವು ಕಮತಿ, ಮಹಾದೇವ ತುಕ್ಕಾನಟ್ಟಿ, ಶ್ರೀಪತಿ ಗಣೇಶವಾಡಿ, ರಾಮಕೃಷ್ಣ ಹೊರಟ್ಟಿ, ಶಂಕರ ಕಮತಿ, ಬೈರು ಯಕ್ಕುಂಡಿ, ಶಿವು ಕುಡ್ಡೆಮ್ಮಿ, ಅಜ್ಜಪ್ಪ ಮನ್ನಿಕೇರಿ, ಕುಮಾರ ಮರ್ದಿ, ಗುರುನಾಥ ಹುಕ್ಕೇರಿ, ಸತ್ತೆಪ್ಪ ಮಲ್ಲಾಪೂರ, ಗಂಗಾಧರ ಗುಡಗುಡಿ, ಯಲ್ಲವ್ವ ಚಿಗಡೊಳ್ಳಿ, ಸುನಂದಾ ಭಜಂತ್ರಿ, ಗುರುನಾಥ ಕಂಕಣವಾಡಿ, ಸಾಗರ ಬಾಗೇವಾಡಿ, ಸಿದ್ದಪ್ಪ ಕೊಣ್ಣೂರ, ಸೋಮು ಹುಲಕುಂದ, ಬೀರಪ್ಪ ಶೀಮಕ್ಕನವರ, ಭೀಮಶಿ ಅಂತರಗಟ್ಟಿ, ರಾಜು ಮಲಕನ್ನವರ, ಭೀಮಶಿ ಗದಾಡಿ, ಭೀಮಶಿ ಕಂಕಣವಾಡಿ, ಯಲ್ಲಪ್ಪ ನಾಯ್ಕ, ದುಂಡಪ್ಪ ಮಾಕನ್ನವರ, ಸಿದ್ದಪ್ಪ ಚೂಡಪ್ಪಗೋಳ, ಯಮನಪ್ಪ ಗದಾಡಿ ಸೇರಿದಂತೆ ತುಕ್ಕಾನಟ್ಟಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅನೇಕರು ಉಪಸ್ಥಿತರಿದ್ದರು.


Spread the love

About Ad9 Haberleri

Check Also

ಮರಿಯೆಪ್ಪ ಮರಿಯೆಪ್ಪಗೊಳ ಅವರಿಂದ ವಿಠ್ಠಲ ಹೊಸಮನಿ ಅವರಿಗೆ ಸನ್ಮಾನ

Spread the love ಮೂಡಲಗಿ : ಪಟ್ಟಣದ ಸಾಯಿ ಬ್ಯಾಂಕ್ ನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನೂತನವಾಗಿ …

Leave a Reply

Your email address will not be published. Required fields are marked *