ಬನವಾಸಿ: ಶಿರಸಿ ತಾಲೂಕಿನ ಬನವಾಸಿಯ ಶ್ರೀ ಪಾರ್ವತಿ ಸ್ಟೋನ್ ಕ್ರಷರ್ ಮತ್ತು ಗಾರ್ಡನ್ ಅಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕೊರೊನಾ ಸೇನಾನಿಗಳಾದ ಪೋಲಿಸ್ ಸಿಬ್ಬಂದಿಗಳು, ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗು ಬಡ ಕಾರ್ಮಿಕರಿಗೆ ಉಚಿತವಾಗಿ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ರಷರ್ ಮಾಲಿಕರಾದ ಗುಣಶೇಖರ ಪಿಳ್ಳೈ, ಪೂರ್ಣಿಮಾ ಪಿಳ್ಳೈ, ಆರೋಗ್ಯಧಿಕಾರಿ ಜಯಶ್ರೀ ಹೆಗಡೆ, ಪಿಎಸ್ಐ ಹನುಮಂತ ಬಿರಾದಾರ, ಗಾರ್ಡನ್ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಭರತ್ ಪಿಳ್ಳೈ, ಮಧುಸೂದನ್ ಪಿಳ್ಳೈ, ದರ್ಶನ್ ಪಿಳ್ಳೈ ಇದ್ದರು.