ಮೂಡಲಗಿ: ಕಷ್ಟದಲ್ಲಿರುವರಿಗೆ ಸಹಾಯ ಮಾಡಿದರೇ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಅವರು ತಾಲೂಕಿನ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಭಾನುವಾರದಂದು ನಡೆದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ಹಾಗೂ ೨೪ನೇ ಸತ್ಸಂಗ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ತಾನು ಗಳಿಸಿದ ಸಂಪತ್ತು ಸತ್ತ ಮೇಲೆ ಜೊತೆಗೆ ತಗೆದುಕೊಂಡು ಹೋಗುವುದಿಲ್ಲ. ಮನುಷ್ಯ ಜೀವಂತ ಇದ್ದಲ್ಲಿ ವಯೋವೃದ್ದರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಅಲ್ಲದೇ ಕಷ್ಟದಲ್ಲಿರುವ ಜನರಿಗೆ ಸಹಾಯ …
Read More »ಡಿ.12 ರಂದು ಮೂಡಲಗಿಯಲ್ಲಿ ೨೯ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ
ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ೨೯ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಸೋಮವಾರ ಡಿ.೧೨ ರಂದು ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ. ಸೋಮವಾರ ಮಧ್ಯಾಹ್ನ ೨ ಘಂಟೆಯಿಂದ ಶ್ರೀ ಶಿವಬೋಧರಂಗ ಮಠದ ರಸ್ತೆಯ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಅಯ್ಯಪ್ಪಸ್ವಾಮಿಯ ಉತ್ಸವ ಹಾಗೂ ಅಯ್ಯಪ್ಪ ಸ್ವಾಮಿಯ ಭಾವಚಿತ್ರದ …
Read More »ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲ
ಡಿಸೆಂಬರ್. 20 ರಂದು ಮೂಡಲಗಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರಿಂದ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯಕ್ಕೆ ಚಾಲನೆ. ಮೂಡಲಗಿ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್ ಕೊಟ್ಟ ಬಾಲಚಂದ್ರ ಜಾರಕಿಹೊಳಿ ಮೂಡಲಗಿ-ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯವನ್ನು ಆರಂಭಿಸಲಿಕ್ಕೆ ಇಲಾಖೆಯು ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಡಿ. 20 ರಂದು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅರಭಾವಿ ಶಾಸಕ …
Read More »ಅರಭಾವಿ ಮತಕ್ಷೇತ್ರದಿಂದ ಸುಮಾರು ಐದು ಸಾವಿರ ಜನರು ಕಾಂಗ್ರೇಸ್‍ನ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ : ಅರವಿಂದ ದಳವಾಯಿ
ಮೂಡಲಗಿ: ಅರಭಾವಿ ಮತಕ್ಷೇತ್ರದಿಂದ ಸುಮಾರು ಐದು ಸಾವಿರ ಜನರು ಕಾಂಗ್ರೇಸ್‍ನ ಭಾರತ ಜೋಡೋ ಯಾತ್ರೆಯ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಅರವಿಂದ್ರ ದಳವಾಯಿ ಹೇಳಿದರು. ಗುರುವಾರದಂದು ಮೂಡಲಗಿ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ದೇಶದ ಐಕ್ಯತೆಯ ದೃಷ್ಟಿಯಲ್ಲಿ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ ಆದರಿಂದ ಬಳ್ಳಾರಿ ಜಿಲ್ಲೆಯ ರಾಮಪೂರದಲ್ಲಿ ಅ.14ರಂದು ನಡೆಯಲ್ಲಿರುವ ಜೋಡೋ ಯಾತ್ರೆಯಲ್ಲಿ ಅರಭಾವಿ ಮತಕ್ಷೇತ್ರದ ಕಾಂಗ್ರೇಸ್ …
Read More »ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಆರಂಭಗೊಳ್ಳಲಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಈಗಾಗಲೇ ಈ ಕಛೇರಿ ಆರಂಭಕ್ಕೆ ಎಜಿ ಕೋಡ್ (ಅಕೌಂಟಂಟ್ ಜನರಲ್) ಬಂದಿದ್ದು, ಇನ್ನು ಡಿಡಿಓ ಕೋಡ್ ಬರಬೇಕಿದೆ. ಇದರ ಜೊತೆಗೆ ಎಂಪಿಎಸ್ ಕೋಡ್, ಖಜಾನೆ-1 ಮತ್ತು ಖಜಾನೆ-2 ಕೂಡ ಅನುಮತಿಗೆ ಕಾಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಮೂಡಲಗಿಗೆ …
Read More »ಮೂಡಲಗಿಯಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ! ವಿವಿಧಡೆ ಧ್ವಜರೋಹಣ
ಮೂಡಲಗಿ: ಆಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ” ನಿಮಿತ್ಯ ಬೆಳಗಾವಿ ಜಿಲ್ಲೆಯ ತಾಲ್ಲೂಕಿನ ಮೂಡಲಗಿ ನಗರದಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಮನೆಗಳ ಮೇಲೆ ಧ್ವಜಾರೋಹಣ ಮಾಡಲಾಯಿತು. ನಗದಲ್ಲಿ ಶಾಲೆ ಕಾಲೇಜು ಗಳಲ್ಲಿ ಧ್ವಜಾರೋಹಣ ಮಾಡಿ ಮಕ್ಕಳ ವೇಷ ಭೂಷಣಧರಿಸಿ ತಮ್ಮ ಶಾಲೆಗಳಿಂದ ಮೂಡಲಗಿ ನಗರದ ತುಂಬಾ ಮೆರವಣಿಗೆ ಮೂಲಕ 75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ ಅನುದಾನ ಮಂಜೂರು : ಸವಿತಾ ನಾಯಿಕ
ಮೂಡಲಗಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅವರಾದಿ ಗ್ರಾಪಂ ಅಧ್ಯಕ್ಷೆ ಸವಿತಾ ಚಂದ್ರಶೇಖರ ನಾಯಿಕ ತಿಳಿಸಿದರು. ತಾಲೂಕಿನ ಅವರಾದಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 18 ಕೋಟಿ ರೂ ವೆಚ್ಚದ ಅವರಾದಿ-ತಿಮ್ಮಾಪೂರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಕಾಮಗಾರಿಯಿಂದ ಅವರಾದಿಯಿಂದ ಹಳೇಯರಗುದ್ರಿ, ಹೊಸಯರಗುದ್ರಿ ಮೂಲಕ ತಿಮ್ಮಾಪೂರ …
Read More »ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಕೂಡ ಜೈಲಿಗೆ ಹೋಗಲಿದ್ದಾರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ
ಹಾವೇರಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತ್ರ ಜೈಲಿಗೆ ಹೋಗಲ್ಲ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಕೂಡ ಜೈಲಿಗೆ ಹೋಗಲಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ದೈಬೈ, ಮಾರಿಷ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಆಸ್ತಿ ಹೊಂದಿದ್ದಾರೆ. …
Read More »ಶಹಾಪೂರ ಮತ್ತು ನಿರಾಣ ಗೆಲುವಿಗೆ ಶ್ರಮಿಸಿ : ಸುಭಾಸ ಪಾಟೀಲ
ಗೋಕಾಕ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಜೂನ್ 13 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸೋಮವಾರದಂದು ಜರುಗಿದ ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಅರುಣ ಶಹಾಪೂರ ಮತ್ತು …
Read More »ಸತತ ಹಾಗೂ ನಿರಂತರ ಮಾರ್ಗದರ್ಶನ ಉನ್ನತ ವಿಚಾರ ಧಾರೆಗಳ ಮೂಲಕ ಪ್ರಯತ್ನಿನಿಸಿದಾಗ ಮಾತ್ರ ಪ್ರತಿಯೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ
ಮೂಡಲಗಿ: ಸತತ ಹಾಗೂ ನಿರಂತರ ಮಾರ್ಗದರ್ಶನ ಉನ್ನತ ವಿಚಾರ ಧಾರೆಗಳ ಮೂಲಕ ಪ್ರಯತ್ನಿನಿಸಿದಾಗ ಮಾತ್ರ ಪ್ರತಿಯೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಪಟ್ಟಣದ ಕೆ.ಎಚ್ ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಓರ್ವ ನಿಯೋಜಿತ ಶಿಕ್ಷಕರಿಂದ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಪ್ರಾರಂಭಗೊಂಡ ಶಾಲೆಯು, …
Read More »