Breaking News

ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ

Spread the love

ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ
ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ
ಸುಧಾರಣೆಗೆ ಆದ್ಯತೆ ನೀಡಿದ್ದು, ಈಗಾಗಲೇ 2.90 ಕೋಟಿ ರೂ.
ಅನುದಾನ ಮಂಜೂರಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ
ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರದಂದು
ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾಜ್ಯ
ಹೆದ್ದಾರಿ-44 ರ 2.90 ಕೋಟಿ ರೂ. ವೆಚ್ಚದ ಯಾದವಾಡ-ಕುಲಗೋಡ
ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು
ಮಾತನಾಡಿದರು.
ವಾರದೊಳಗೆ ರಾಜ್ಯ ಹೆದ್ದಾರಿ ನಿರ್ವಹನೆ ಯೋಜನೆಯಡಿ
ಲೆಕ್ಕಶೀರ್ಷಿಕೆ 3054 ರಡಿ 2 ಕೋಟಿ ರೂ. ಅನುದಾನ
ಬಿಡುಗಡೆಯಾಗಲಿದ್ದು, 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ
ಸುಧಾರಣೆ ನಡೆಯಲಿದೆ. ಯಾದವಾಡದ ಸಂಗೊಳ್ಳಿ ರಾಯಣ್ಣ
ವೃತ್ತದಿಂದ 3 ಕಿ.ಮೀ. ವರೆಗಿನ ರಸ್ತೆ ಕಾಮಗಾರಿಯನ್ನು
ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಮನವಿಯ ಮೇರೆಗೆ
ಯಾದವಾಡದಿಂದ ಕುಲಗೋಡವರೆಗಿನ ರಸ್ತೆಯನ್ನು ಸುಧಾರಣೆ
ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಶೀಘ್ರ 15 ಕೋಟಿ ರೂ. ಬಿಡುಗಡೆ : ಈ ರಸ್ತೆ
ಕಾಮಗಾರಿಯನ್ನು ಪೂರ್ಣವಾಗಿ ಕೈಗೊಳ್ಳಲಿಕ್ಕೆ ಲೋಕೋಪಯೋಗಿ
ಇಲಾಖೆಯ ಎಸ್‍ಎಚ್‍ಡಿಪಿ ಯೋಜನೆಯಡಿ 15 ಕೋಟಿ ರೂ.ಗಳ ಅನುದಾನ
ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,
ಶೀಘ್ರದಲ್ಲಿಯೇ ಈ ಅನುದಾನ ಬಿಡುಗಡೆಯಾಗಲಿದೆ. ಯಾದವಾಡ-
ಕುಲಗೋಡ ವರೆಗಿನ 15 ಕಿ.ಮೀ ರಸ್ತೆ ಕಾಮಗಾರಿಯನ್ನು 3
ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು
ಹೇಳಿದರು.
ದಿನೇ ದಿನೇ ಔದ್ಯೋಗಿಕವಾಗಿ ಬೆಳೆಯುತ್ತಿರುವ ಯಾದವಾಡ
ಗ್ರಾಮಕ್ಕೆ ಸಂಚರಿಸುವ ರಸ್ತೆಗಳಲ್ಲಿ ಭಾರವಾದ ವಾಹನಗಳು
ಸಂಚರಿಸುತ್ತಿರುವುದರಿಂದ ರಸ್ತೆ ಮೇಲಿಂದ ಮೇಲೆ ಹದಗೆಡುತ್ತಿದೆ.
ಅದಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆಯನ್ನು
ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರಿಗೆ ನೀಡಿರುವ
ಭರವಸೆಯಂತೆ ಯಾದವಾಡ-ಕುಲಗೋಡ ರಸ್ತೆಯನ್ನು
ಸುಧಾರಣೆಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ
ಮಾಡಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …