ಮೂಡಲಗಿ: ಬೆಂಗಳೂರಿನ ಪ್ರೀಡಂ ಪಾರ್ಕ್ ಮೈದಾನದಲ್ಲಿ ನಿನ್ನೆ ನಡೆದ ಎನ್‍ಆರ್‍ಸಿ ಮತ್ತು ಸಿಎಎ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನ್ ಎಂಬ ಪತ್ರಿಕೋಧ್ಯಮ ವಿದ್ಯಾರ್ಥಿನಿ “ಪಾಕಿಸ್ತಾನ್ ಜಿಂದಾಬಾದ್” ಎಂಬ ದೇಶ ವಿರೋಧಿ ಘೊಷಣೆ ಕೂಗಿ ದೇಶದ್ರೋಹ ಮಾಡಿರುವುದನ್ನು ಖಂಡಿಸಿ ಸ್ಥಳೀಯ ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರ ಹಾಗೂ ವಿವಿಧ ಸಂಘಟನೆಯ ದೇಶಭಕ್ತರು ಕಲ್ಮೇಶ್ವರ ವೃತ್ತದಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಮೂಡಲಗಿ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಅವರ ಮುಖಾಂತರ ಗೃಹಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವ ಎನ್‍ಆರ್‍ಸಿ ಮತ್ತು ಸಿಎಎ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿರುವುದು ಖಂಡನೀಯವಾಗಿದೆ. ನಮ್ಮ ದೇಶದಲ್ಲಿ ಹುಟ್ಟಿ, ಬೆಳೆದು, ವಿದ್ಯೆ ಕಲಿತು ಭಾರತೀಯ ಸಂಸ್ಕøತಿಯನ್ನು ಮರೆತು ನಮ್ಮ ನೆಲಕ್ಕೆ ದ್ರೋಹ ಬಗೆಯುತ್ತಿರುವುದು ಖಂಡನೀಯವಾಗಿದೆ. ಮೊನ್ನೆ ಹುಬ್ಬಳ್ಳಿಯ ಮೂರು ವಿದ್ಯಾರ್ಥಿಗಳು ಪಾಕಿಸ್ಥಾನ ಪರ ಘೋಷಣೆ ಕೂಗಿ
ದೇಶದ್ರೋಹಿ ನಡೆ ಪ್ರದರ್ಶಿಸಿದ ಘಟನೆ ಮಾಸುವ ಮುನ್ನವೇ ನಿನ್ನೆಯ ದಿನ ಇಂತಹ ಘಟನೆ ನಡೆದಿರುವುದು ದೇಶಕ್ಕೆ ಮಾಡಿದ ದೊಡ್ಡ ಅವಮಾನವಾಗಿದೆ. ಇಂತಹ ದೇಶದ್ರೋಹಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಮಾತನಾಡಿ, ಈ ಘಟನೆಗೆ ಸಂಬಂಧಪಟ್ಟ ದೇಶದ್ರೋಹಿ ಚಟುವಟಿಕೆ ಮಾಡಿದವರನ್ನು ಪೋಲಿಸ್ ಇಲಾಖೆ ಈಗಾಗಲೇ ಬಂಧಿಸಲಾಗಿದ್ದು ಪೋಲಿಸ್ ಇಲಾಖೆ ತನಿಖೆ ಕೈಗೊಂಡು ಮುಂದಿನ ಕ್ರಮಕೈಗೊಳ್ಳುತ್ತದೆ ಎಂದರು.
ಪ್ರತಿಭಟನೆಯಲ್ಲಿ ಅರಬಾಂವಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಮಹಾದೇವ ಶೆಕ್ಕಿ, ಮುಖಂಡರಾದ ಹನುಮಂತ ಸತರಡ್ಡಿ, ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರದ ಸಂಸ್ಥಾಪಕ ಎಲ್.ವಾಯ್ ಅಡಿಹುಡಿ, ಈರಪ್ಪ ಢವಳೇಶ್ವರ, ಸುಭಾಸ್ ಗೊಡ್ಯಾಗೋಳ, ಗುರು ಗಂಗನ್ನವರ, ಈಶ್ವರ ಢವಳೇಶ್ವರ, ಪಾಂಡು ಮಹೇಂದ್ರಕರ, ಜಗದೀಶ ತೇಲಿ, ಸಿದ್ಲಿಂಗಪ್ಪ ಯರಗಟ್ಟಿ, ನಂಜುಂಡಿ ಸರ್ವಿ, ಕೃಷ್ಣ ಬಂಡಿವಡ್ಡರ ಹಾಗೂ ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರದ ನೂರಾರು ಶಿಭಿರಾರ್ಥಿಗಳು ಭಾಗವಹಿಸಿದ್ದರು.