Breaking News
Home / ಬೆಳಗಾವಿ / ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ

ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ

Spread the love

ಮೂಡಲಗಿ : ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಸಾಮಾನ್ಯವಾಗಿ ಕೆಮ್ಮು,ನೆಗಡಿ, ಶೀತ, ಜ್ವರದಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕೆತ್ಸೆ ಪಡೆಯಬೇಕು. ಎಂದು ನ್ಯಾಯವಾದಿ ಕೆ.ಎಲ್ ಹುಣಶ್ಯಾಳ ಹೇಳಿದರು.

ಅವರು ದಿವಾಣ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ಕೊರೊನಾ ಸಂಕ್ರಾಮಿಕ ರೋಗ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜಾಗತಿಕ ಸಂಕ್ರಾಮಿಕ ರೋಗಕ್ಕೆ ಭಯ ಬಿದ್ದ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ಕೊಡುವದರಿಂದ ಕರೋನಾ ವೈರಸ ನಿಂದ ಮುಕ್ತವಾಗಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ. ಮಗದುಮ್ಮ ಮಾತನಾಡಿ ಈಗಾಗಲೇ ಕೊರೊನಾ ವೈರಸ ಹರಡದೆಂತೆ ಮುನ್ನೆಚ್ಚÀರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಅದರಂತೆ ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕಗಳ ಕೃತಕ ಬೇಡಿಕೆ ಸೃಷ್ಟಿಸಿ ಬೆಲೆ ಏರಿಸುವದು ಅಪರಾದವಾಗಿದ್ದು ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಗತ್ಯ ಸರಕುಗಳ ಕಾಯ್ದೆ ಅನ್ವಯ ಕಾನೂನು ಕ್ರಮ ಜರಗಿಸಲಾಗುವದೆಂದು ಹೇಳಿದರು.

ಖಜಾಂಚಿ ವಿ.ಕೆ.ಪಾಟೀಲ ಮಾತನಾಡುತ್ತಾ ದೇಶ್ಯಾದ್ಯಂತ ಹರಡಿರುವ ಕೊರೊನ ರೋಗವು ಉಲ್ಭಣಗೊಂಡು ಕಾರಣ ಮತ್ತು ಸೊಂಕು ತಗುಲಿರುವ ವ್ಯಕ್ತಿಗಳು ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಈಗಾಗಲೇ ಮುಂಜಾಗ್ರತೆ ಕ್ರಮವಾಗಿ ಘನ ಕರ್ನಾಟಕ ಸರಕಾರವು ಈಗಾಗಲೇ ಶಾಲಾ ಕಾಲೇಜು ಮದುವೆ ಸಾಮಾರಂಭ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಆದೇಶ ಮಾಡಿದ್ದು ಇರುತ್ತದೆ ಎಂದರು.

ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ವಾಯ್.ಹೊಸಟ್ಟಿ ಪ್ರಧಾನ ಕಾರ್ಯದರ್ಶಿ ಎಲ್.ವಾಯ್. ಅಡಿಹುಡಿ ಸಹಕಾರ್ಯದರ್ಶಿ ಡಿ.ಎಸ್. ರೊಡ್ಡನವರ ಬಿ.ಎಚ್.ಮಳ್ಳಿವಡೆಯರ ಮಹಿಳಾ ಪ್ರತಿನಿಧಿ ಎ.ಎಚ್.ಗೋಡ್ಯಾಗೊಳ ಹಿರಿಯ ವಕೀಲರಾದ ಆರ್.ಆರ್. ಬಾಗೋಜಿ ವಿ.ವಿ. ನಾಯಕ ಎಲ್.ಬಿ. ವಡೇರ ಆರ್.ಎಮ್. ಐಹೋಳಿ ಪಿ. ಎಸ್. ಮಲ್ಲಾಪೂರ ಎ.ಬಿ.ಬಾಗೋಜಿ ಎಲ್.ಎಮ್.ಸವಸುದ್ದಿ ಎಸ್.ಎಸ್.ಗೊಡಿಗೌಡರ ಎನ್.ಬಿ.ನೇಮಗೌಡರ್ ಆರ್.ಬಿ.ಮಮದಾಪೂರ ಮಂಜು ಅರಸಪಗೋಳ ವಾಯ್.ಎಸ್.ಖಾನಟ್ಟಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮೂಡಲಗಿ ದಿವಾಣ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳು ಆಯೋಜಿಸಿದ ಕೊರೊನಾ ಸಂಕ್ರಾಮಿಕ ರೋಗ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


Spread the love

About Ad9 Haberleri

Check Also

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ

Spread the loveಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ …