ಬೆಳಗಾವಿ- ಕೊರೋನಾ ಸೊಂಕು ಹರಡದಂತೆ ರೈಲ್ವೆ ಇಲಾಖೆಯೂ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ,ರೈಲು ನಿಲ್ಧಾಣಗಳಲ್ಲಿ ಜನಜಂಗುಳಿ ಯನ್ನು ನಿಯಂತ್ರಿಸಲು ಬೆಳಗಾವಿ ರೈಲು ನಿಲ್ಧಾಣದಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಹೆಚ್ಚಿಸಿದೆ
ಬೆಳಗಾವಿ,ಹುಬ್ಬಳ್ಳಿ, ಮತ್ತು ಬಳ್ಳಾರಿ ರೈಲು ನಿಲ್ಧಾಣಗಳಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಮಾರ್ಚ 31ರವರೆಗೆ 50 ರೂ ಗೆ ಹೆಚ್ಚಿಸಿ ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ರೈಲು ನಿಲ್ಧಾಣಗಳಲ್ಲಿ ಅನವಶ್ಯಕವಾಗಿ ಹೆಚ್ವು ಜನ ಸೇರಬಾರಬಾದು ಎನ್ನುವ ಸದುದ್ದೇಶದಿಂದ ಅಧಿಕಾರಿಗಳು ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಿದ್ದಾರೆ.
Ad9 News Latest News In Kannada
