ಹುಕ್ಕೇರಿ: ಭಯಾನಕ ಕೊರೊನ ವೈರಸ್ ಹರಡದಂತೆ ಪ್ರಧಾನ ಮಂತ್ರಿಗಳು ರವಿವಾರ ಜನತಾ ಕರ್ಪ್ಯೂ ಕರೆ ನೀಡಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕರೆಯನ್ನು ಎಲ್ಲರೂ ಬೆಂಬಲಿಸುವಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಲಿಂಗೆಶ್ವರ ಸ್ವಾಮಿಜಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ .
ಜನರ ಆರೋಗ್ಯ ರಕ್ಷಣೆಗಾಗಿ ದೇಶವ್ಯಾಪಿ ನಡೆದಿರುವ ಜನತಾ ಕರ್ಪ್ಯೂ ಕರೆಗೆ ಸಹಕರಿಸುವಂತೆ ಭಕ್ತರಿಗೆ ಸಲಹೆ ನೀಡಿದ್ದು ,ಕೊರೊನ ಹಿನ್ನೆಲೆ ಶ್ರೀ ಮಠದಲ್ಲಿ ದಿ.೨೪ರಂದು ನಡೆಯುವ ಅಮವಾಸ್ಯೆ ಮಹೋತ್ಸವ ರದ್ದು ಪಡೆಸಲಾಗಿದೆ.ಅಮವಾಸೆ ಮಹೋತ್ಸವ ರದ್ದು ಪಡೆಸಿರುವುದಾಗಿ ಶ್ರೀಗಳ ಸ್ಪಷ್ಟನೆ ನೀಡಿದ್ದು,
ಅಮವಾಸ್ಯೆ ದಿನದಂದು ಮಠಕ್ಕೆ ಭಕ್ತರು ಬಾರದಂತೆ ಸ್ವಾಮಿಜಿ ಮನವಿ ಮಾಡಿಕೊಂಡಿದ್ದಾರೆ .ಮನೆಯಲ್ಲಿ ಇದ್ದು ಭಕ್ತಿಯಿಂದ ದೇವರ ಪ್ರಾರ್ಥನೆ ಮಾಡುವಂತೆ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ .
ವರದಿ: ಸಚೀನ ಕಾಂಬಳೆ
Ad9 News Latest News In Kannada
