ಮಾರುಕಟ್ಟೆಯಲ್ಲಿ ಜನರು ಹೆಚ್ಚಾದ್ರೆ ಕೊರೊನಾ ವೈರಸ್ ಹರಡುವ ಸಂಭವ ಇರುತ್ತದೆ. ಹೀಗಾಗಿ ಸದ್ಯ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಂಕೇಶ್ವರ ಪುರಸಭೆಯವರು ತರಕಾರಿ, ಕಿರಾಣಿ ಅಂಗಡಿಗಳ ಮುಂದೆ ಜನರು ಸರದಿ ಸಾಲಿನಲ್ಲಿ ನಿಲ್ಲಲು ನಿರ್ದಿಷ್ಟ ಅಂತರದಲ್ಲಿ ಮಾರ್ಕ್ ಮಾಡಿ ಅಂತರ ಕಾಯ್ದುಕೊಳ್ಳಲು ಪ್ಲಾನ್ ಮಾಡಿದಾರೆ.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಪ್ರಿಲ್14 ವರೆಗೆ ಸರ್ಕಾರ ದೇಶದಾದ್ಯಂತ ಲಾಕ್ಡೌನ್ ಘೋಷಿಸಿದೆ ಆದ್ರೆ ದಿನ ಬಳಕೆ ವಸ್ತುಗಳನ್ನ ಖರೀದಿಸಲು ಜನರು ಅಂಗಡಿಗಳಿಗೆ ತೆರಳಲೇಬೇಕಾದ ಅನಿವಾರ್ಯತೆ ಕೂಡ ಇದೆ.
ಹೀಗಾಗಿ ತರಕಾರಿ, ಕಿರಾಣಿ ಅಂಗಡಿಗಳ ಮುಂದೆ ಅಂತರದಲ್ಲಿ ಬಿಳಿ ಸುಣ್ಣದಿಂದ ಒಂದೊಂದು ಗೋಲಾಕಾರದ ಮಾರ್ಕ್ ಮಾಡಲಾಗಿದೆ. ಗ್ರಾಹಕರು ಆ ಬಾಕ್ಸ್ನಲ್ಲಿಯೇ ನಿಂತು ಖರೀದಿಸಬೇಕು. ಜನರು ಒಟ್ಟಿಗೆ ಸೇರುವುದನ್ನ ತಡೆಯಲು ಈಗ ನಗರದ ಮಾರ್ಕೆಟ್ ಯಾರ್ಡನಲ್ಲಿ ತರಕಾರಿ ಮಾರಾಟ ಮಾಡಲು ಪುರಸಭೆಯವರು ಅನುಮತಿ ನೀಡಿದ್ದು, ಹೀಗೆ ನಗರದ ತರಕಾರಿ, ಕಿರಾಣಿ ಅಂಗಡಿಗಳ ಮುಂದೆ ಮಾರ್ಕ ಮಾಡಿ ಅಂತರ ಕಾಯ್ದುಕೊಳ್ಳಲು ಉಪಾಯ ಕಂಡುಕೊಳ್ಳಲಾಗಿದೆ. ನಾಳೆಯಿಂದ ಇದೇ ಅಂತರ ಕಾಪಾಡಬೇಕು ಎಂದು ಪುರಸಭೆಯವರು ಅಂಗಡಿ ಮಾಲಿಕರಿಗೆ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಿದಾರೆ.
ಅಂಗಡಿಯವರು ನಾಳೆಯಿಂದ ನಿವೇ ಮಾರ್ಕ್ ಮಾಡಿ, ವ್ಯಾಪಾರ ಮಾಡಬೇಕು. ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಬೇಕು ಹಾಗೂ ಜನರು ಕೂಡ ಕಡ್ಡಾಯವಾಗಿ ಪಾಲಿಸಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ಜಗದೀಶ್ ಈಟಿ ಹಾಗೂ ಕಿರಿಯ ಆರೋಗ್ಯ ನೀರಿಕ್ಷಕ ಪ್ರಕಾಶಗೌಡಾ ಪಾಟೀಲ ಅವರು ತರಕಾರಿ, ಕಿರಾಣಿ ಅಂಗಡಿ ಮಾಲಿಕರಿಗೆ ಸೂಚನೆ ನೀಡಿದ್ದಾರೆ. ಸೂಚನೆ ಪಾಲಿಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಖಡಕ್ ಆಗಿ ಎಚ್ಚರಿಸಿದಾರೆ.
ವರದಿ : ಸಚೀನ ಕಾಂಬಳೆ