ಚೈತನ್ಯ ನವದುರ್ಗ ದೇವಿಯರ ದರ್ಶನ ಕಾರ್ಯಕ್ರಮವನ್ನು ಶಿಖರಖಾನೆ ಮುಕುಂದ ನಗರ್ ವಿಜಯಪುರ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ ಯೋಗಿನಿ ಬ್ರಹ್ಮಕುಮಾರಿ ಸಾವಿತ್ರಿ ಅಕ್ಕನವರು ನವರಾತ್ರಿ ರಹಸ್ಯವನ್ನು ತಿಳಿಸಿದರು
ನವರಾತ್ರಿ ಹಬ್ಬದ ಆಧ್ಯಾತ್ಮಿಕ ರಹಸ್ಯ ಭಾರತ ದೇಶದಲ್ಲಿ ಪರಂಪರಗತವಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ ನವರಾತ್ರಿ ಹಬ್ಬದ ಭಾವನಾತ್ಮಕ ಅರ್ಥವಾಗಿದೆ ದುರ್ಗೆಯ ಒಂಬತ್ತು ರೂಪದ 9 ದಿನಗಳವರೆಗೆ ಪೂಜೆ ಅರ್ಚನೆ ಹಾಗೂ ನವರಾತ್ರಿಯ ಆಧ್ಯಾತ್ಮಿಕ ಅರ್ಥವಾಗಿದೆ ಹೊಸ ಯುಗದಲ್ಲಿ ಪ್ರವೇಶ ಮಾಡುವುದಕ್ಕಿಂತ ಮೊದಲು ಘೋರ ಜ್ಞಾನದ ಕತ್ತಲೆಯಲ್ಲಿ ಶಿವ ಅವತರಣೆಯಾಗಿ ಮನುಷ್ಯರ ಪತಿತ ಕೆಟ್ಟ ಸಂಸ್ಕಾರಗಳನ್ನು ಜ್ಞಾನ ಅಮೃತವನ್ನು ನೀಡಿ ಉದ್ದಾರ ಮಾಡುತ್ತಿದ್ದಾರೆ.
ಈ ಜ್ಞಾನದಿಂದ ಪರಿವರ್ತನೆ ಹೊಂದಿರುವಂತಹ ಆತ್ಮಗಳು ಚೈತನ್ಯ ದೇವಿಯ ರೂಪದಲ್ಲಿ ಪ್ರತ್ಯಕ್ಷರಾಗಿ ಕಲಿ ಯುಗದ ಮನುಷ್ಯರನ್ನು ಉದ್ಧಾರ ಮಾಡುತ್ತಾರೆ. ಇದರ ಪ್ರಕಾರ ಮೊದಲು ಶಿವರಾತ್ರಿ ನಂತರ ನವರಾತ್ರಿ ನಂತರ ಹೊಸ ಯುಗ ಪ್ರಾರಂಭವಾಗುತ್ತದೆನವರಾತ್ರಿಯ ಮೊದಲನೆಯ ದಿನ ದುರ್ಗಾದೇವಿಯ ರೂಪದಲ್ಲಿ ಆಚರಣೆ ಮಾಡಲಾಗುತ್ತದೆ ಅದು ಶೈಲ ಪುತ್ರಿಯ ಹೆಸರಿನಿಂದ ಪೂಜೆಯಾಗುತ್ತದೆ,
ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿನೀಯ ಪೂಜೆಯಾಗುತ್ತದೆ ಚಂದ್ರ ಘಟ್ಟದ ನವರಾತ್ರಿಯ ಮೂರನೇ ದಿನ ಚಂದ್ರಘಟ್ಟ ರೂಪದಲ್ಲಿ ಪೂಜೆಯಾಗುತ್ತದೆ.
ನವರಾತ್ರಿಯ ನಾಲ್ಕನೆಯ ದಿನ ಕುಶ್ಮಾಂಡದ ರೂಪದಲ್ಲಿ ಪೂಜೆಯಾಗುತ್ತದೆ. ನವರಾತ್ರಿಯ ಐದನೇಯ ದಿನ ಸ್ಕಂದ ಮಾತಾ ರೂಪದಲ್ಲಿ ಪೂಜೆಯಾಗುತ್ತದೆ.
ನವರಾತ್ರಿಯ ಆರನೇಯ ದಿನ ಕಾತಯಣಿ ರೂಪದಲ್ಲಿ ಪೂಜೆಯಾಗುತ್ತದೆ ನವರಾತ್ರಿಯ ಏಳನೇ ದಿನ ಕಾಲ ರಾತ್ರಿ ರೂಪದಲ್ಲಿ ಪೂಜೆಯಾಗುತ್ತದೆ. ನವರಾತ್ರಿಯ ಎಂಟನೆಯ ದಿನ ಮಹಾ ಗೌರಿಯ ರೂಪದಲ್ಲಿ ಪೂಜೆಯಾಗುತ್ತದೆ.
ನವರಾತ್ರಿಯ ಒಂಬತ್ತನೇ ದಿನ ಸಿದ್ದಿದಾಹಿಯ ರೂಪದಲ್ಲಿ ಪೂಜೆಯಾಗುತ್ತದೆ. ಈ ತರಹ ಒಂಬತ್ತು ದೇವಿಗಳ ಅಧ್ಯಾತ್ಮಿಕ ರಹಸ್ಯವನ್ನು ಜೀವನದಲ್ಲಿ ಧಾರಣೆ ಮಾಡಿಕೊಳ್ಳುವುದೇ ನವರಾತ್ರಿ ಆಚರಣೆ ಮಾಡುವುದಾಗಿದೆ.
ವರ್ತಮಾನ ಸಮಯದಲ್ಲಿ ಸ್ವಯಂ ನಿರಾಕಾರ ಪರಮ ಪಿತ ಪರಮಾತ್ಮ ಈ ಕಲಿಯುಗದ ಘೋರ ಕತ್ತಲೆಯಲ್ಲಿ ಮಾತೆಯರು ಮತ್ತು ಕನ್ಯೆಯರ ಮುಖಾಂತರ ಎಲ್ಲರಿಗೂ ಜ್ಞಾನ ಕೊಟ್ಟು ಮತ್ತೆ ಸ್ವರ್ಗದ ಸ್ಥಾಪನೆಯನ್ನು ಮಾಡುತ್ತಿದ್ದಾರೆ.
ಪರಮಾತ್ಮನ ಮುಖಾಂತರ ಕೊಟ್ಟಿರುವಂತಹ ಈ ಜ್ಞಾನ ವನ್ನು ಧಾರಣೆ ಮಾಡಿ ಈಗ ನಾವು ಇಂತಹ ನವರಾತ್ರಿಯ ಆಚರಣೆ ಮಾಡೋಣ ಯಾವುದೋ ತಮ್ಮ ಒಳಗಡೆ ರಾವಣ ಅರ್ಥಾತ್ ವಿಕಾರಿ ಗುಣ ಗಳಿದೆ ಅದನ್ನು ನಾಶ ಮಾಡೋಣ. ಇದೇ ಆಗಿದೆ ಸತ್ಯ ಸತ್ಯ ದಸರಾ ಹಬ್ಬದ ಆಚರಣೆ ಮಾಡುವುದು ಇಂತಹ ದಸರಾ ಆಚರಣೆ ಮಾಡಿ ಆಗಲೇ ದೀಪಾವಳಿ ಅರ್ಥಾತ್ ಭವಿಷ್ಯದಲ್ಲಿ ಬರುವಂತಹ ಸತ್ಯಯುಗೀ ಹೊಸ ಜಗತ್ತಿನ ಸುಖದ ಅನುಭವ ಮಾಡಲು ಸಾಧ್ಯ. ಅದಕ್ಕಾಗಿ ಹೇ ಆತ್ಮಗಳೇ ಈಗ ಎಚ್ಚರಗೊಳ್ಳಿ ಕೇವಲ ನವರಾತ್ರಿ ಜಾಗರಣೆ ಮಾಡಬೇಡಿ ಈ ಅಜ್ಞಾನದ ನಿದ್ರೆಯಿಂದ ಎಚ್ಚರಗೊಳ್ಳಿ ಇದೇ ಸತ್ಯ ನವರಾತ್ರಿ ಆಚರಣೆ ಮಾಡುವುದಾಗಿದೆ.
ಈ ಸಂಧರ್ಭದಲ್ಲಿ . ರಾಜ ಯೋಗಿ ಬ್ರಹ್ಮ ಕುಮಾರ್ ಡಾಕ್ಟರ್ ಗೋವಿಂದರಾಜ್ ಸಂಸ್ಥೆಯ ಪರಿಚಯ ತಿಳಿಸಿಕೊಟ್ಟರು. ಶಿಕಾರ ಕಾಣೆಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದಂತಹ ಶ್ರೀ ಎಲ್ಲಪ್ಪ ಬಂಡಿ, ವಕೀಲರಾದಂತಹ ಶ್ರೀ ಅಪ್ಪಾಸಾಬ್ ಕಸ್ತೂರಿ ಹಿರಿಯರಾದ ಶ್ರೀ ಬಾವಣ್ಣ ಹೊನ್ನ ಕಟ್ಟಿ ಹಾಗೂ ಶ್ರೀರಾಜು ಕಸ್ತೂರಿ ಸುರೇಶ್ ಶಾಪುರ್ ಶ್ರೀಕಾಂತ್ ಸಂಗೋಗಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು